ಕರ್ನಾಟಕ

karnataka

ETV Bharat / international

ಅಮೆರಿಕದ ಕಮಲಕ್ಕನ ಮನೆಯಲ್ಲಿ ಕೋಸಂಬರಿ, ಬ್ರೆಡ್​ ಉಪ್ಪಿಟ್ಟು... ಅಷ್ಟಕ್ಕೂ ಏಕೀ ಸಂಭ್ರಮ? - ಕಾರ್ನ್‌ಬ್ರೆಡ್ ಡ್ರೆಸ್ಸಿಂಗ್ ತಿನಿಸು ಸುದ್ದಿ

ಥ್ಯಾಂಕ್ಸ್​ಗಿವಿಂಗ್​ ಕಾರ್ಯಕ್ರಮ ಯುಎಸ್​ ಮಂದಿಯ ಸಾಂಪ್ರದಾಯಿಕ ಆಚರಣೆಯಲ್ಲೊಂದು. ಅಂದು ದೇಶದ ಸಾರ್ವತ್ರಿಕ ರಜಾದಿನ. ಈ ದಿನವನ್ನು ಕಮಲಾ ಹ್ಯಾರಿಸ್​ ತಮ್ಮ ಕುಟುಂಬದೊಂದಿಗೆ ನೆಚ್ಚಿನ ತಿನಿಸು ಮಾಡಿ ಸಂಭ್ರಮಿಸಿದ್ದಾರೆ. ಅದನ್ನು ಹ್ಯಾರಿಸ್​ ತಮ್ಮ ಜಾಲತಾಣದಲ್ಲೂ ಹಂಚಿಕೊಂಡಿದ್ದಾರೆ.

Kamala Harris
ಕಮಲಾ ಹ್ಯಾರಿಸ್

By

Published : Nov 26, 2020, 8:25 PM IST

ವಾಷಿಂಗ್ಟನ್(ಯುಎಸ್): ಯುಎಸ್ ಉಪಾಧ್ಯಕ್ಷರಾಗಿ ಚುನಾಯಿತರಾದ ಕಮಲಾ ಹ್ಯಾರಿಸ್ ಅಡುಗೆ ಬಗ್ಗೆ ತಮಗಿರುವ ಅಂತರ್ಗತ ಪ್ರೀತಿಯನ್ನು ಹಂಚಿಕೊಂಡಿದ್ದಾರೆ.

ಥ್ಯಾಂಕ್ಸ್‌ಗಿವಿಂಗ್‌ ಕಾರ್ಯಕ್ರಮದ ಮುನ್ನಾದಿನ ತಮ್ಮ ಕುಟುಂಬ ಸದಸ್ಯರೊಂದಿಗೆ ಹ್ಯಾರಿಸ್​ ರಜಾ ದಿನವನ್ನು ಕಳೆದಿದ್ದಾರೆ. ಈ ಸಂದರ್ಭ ಅವರು ತಮ್ಮ ಕುಟುಂಬದ ನೆಚ್ಚಿನ ಪಾಕವೊಂದನ್ನು ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಈ ಕಾರ್ನ್‌ಬ್ರೆಡ್ ಡ್ರೆಸ್ಸಿಂಗ್ ತಿನಿಸು ಅವರ ಕುಟುಂಬದ ಹಾಲಿಡೇ ರೆಸಿಪಿ ಎಂದು ಚಿತ್ರವನ್ನು ಪೋಸ್ಟ್​ ಮಾಡಿದ್ದಾರೆ.

ಕಾರ್ನ್ ಬ್ರೆಡ್ ಡ್ರೆಸ್ಸಿಂಗ್ ಮಾಡುವ ವಿಧಾನ

"ಸಂಕಷ್ಟದ ಸಮಯ ಬಂದಾಗ ನಾನು ಯಾವಾಗಲೂ ಅಡುಗೆ ಕಡೆಗೆ ತಿರುಗುತ್ತೇನೆ" ಎಂದು ಹ್ಯಾರಿಸ್ ತನ್ನ ಇನ್ಸ್​ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ. ಪರಿಪೂರ್ಣ ಕಾರ್ನ್ ಬ್ರೆಡ್ ಡ್ರೆಸ್ಸಿಂಗ್ ಮಾಡುವ ವಿಧಾನವನ್ನು ಹಂತ-ಹಂತವಾಗಿ ಹಂಚಿಕೊಂಡಿದ್ದಾರೆ.

ಕಾರ್ನ್ ಬ್ರೆಡ್ ಡ್ರೆಸ್ಸಿಂಗ್ ಮಾಡುವ ವಿಧಾನ

"ಈ ವರ್ಷ, ನನ್ನ ಕುಟುಂಬದ ನೆಚ್ಚಿನ ಥ್ಯಾಂಕ್ಸ್​ಗಿವಿಂಗ್​ ಪಾಕವಿಧಾನಗಳಲ್ಲಿ ಒಂದನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ನಾನು ಬಯಸಿದ್ದೇನೆ. ನೀವು ಅದನ್ನು ನಿಮ್ಮ ಜೀವನದಲ್ಲಿ ಮಾಡಲು ಬಯಸುವಿರಾದರೆ ಖಂಡಿತ ಅದು ನಿಮಗೆ ಬೆಚ್ಚನೆಯ ಪ್ರೀತಿಯನ್ನು ನೀಡುತ್ತದೆ, ಅದು ನಿಮ್ಮ ಪ್ರೀತಿಪಾತ್ರರಿಂದ ಬೇರ್ಪಡುವ ಸಮಯದಲ್ಲಿ ಸಿಗುವ ಪ್ರೀತಿಯಂತೆ' ಎಂದು ಕಮಲಾ ಹ್ಯಾರಿಸ್​ ತಮ್ಮ ಇನ್ಸ್​ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ:ದೇಶೀಯ ಸವಾಲುಗಳನ್ನು ನಿವಾರಿಸುವುದೇ ಯುಎಸ್​​ನ ಜಾಗತಿಕ ನಾಯಕತ್ವ ಪುನಃ ಸ್ಥಾಪಿಸುವ ಅಸ್ತ್ರ: ಕಮಲಾ ಹ್ಯಾರಿಸ್​

ಪ್ರತೀ ವರ್ಷದ ನವೆಂಬರ್​ನ ನಾಲ್ಕನೇ ಗುರುವಾರವನ್ನು ಯುಎಸ್​ನಲ್ಲಿ ಥ್ಯಾಂಕ್ಸ್​ಗಿವಿಂಗ್​ ಕಾರ್ಯಕ್ರಮವಾಗಿ ಆಚರಿಸಲಾಗುತ್ತದೆ.

ABOUT THE AUTHOR

...view details