ಕರ್ನಾಟಕ

karnataka

ETV Bharat / international

ಗುಂಡಿನ ದಾಳಿ: ಕೆಲಕಾಲ ಅಮೆರಿಕ ರಕ್ಷಣಾ ಇಲಾಖೆ ಪ್ರಧಾನ ಕಚೇರಿ ಪೆಂಟಗನ್ ಬಂದ್​ - gunshot firing near Pentagon

ವಿಶ್ವದ ಹಲವು ದೇಶಗಳಲ್ಲಿ ಅಮೆರಿಕ ಸೇನೆಯ ಕಾರ್ಯಾಚರಣೆ ನಿರ್ವಹಿಸುವ ಅಮೆರಿಕ ರಕ್ಷಣಾ ಇಲಾಖೆಯ ಪ್ರಧಾನ ಕಚೇರಿ ಪೆಂಟಗನ್ ಬಳಿ ಗುಂಡಿನ ಸದ್ದು ಕೇಳಿಬಂದಿದೆ.

gunshot-firing-in-pentagon-usa-subway-metro-station
ಪೆಂಟಗನ್ ಬಳಿ ಗುಂಡಿನ ದಾಳಿ

By

Published : Aug 4, 2021, 12:02 AM IST

Updated : Aug 4, 2021, 12:11 AM IST

ವಾಷಿಂಗ್ಟನ್:ಅಮೆರಿಕದ ರಕ್ಷಣಾ ಇಲಾಖೆಯ ಪ್ರಧಾನ ಕಚೇರಿಯಾದ ಪೆಂಟಗನ್ ಬಳಿಯ ಮೆಟ್ರೋ ನಿಲ್ದಾಣದ ಬಳಿ ಮಂಗಳವಾರ ಬೆಳಗ್ಗೆ ಗುಂಡಿನ ದಾಳಿ ನಡೆದಿದೆ. ಘಟನೆ ಬಳಿಕ ಅಮೆರಿಕ ರಕ್ಷಣಾ ಇಲಾಖೆಯ ಪ್ರಧಾನ ಕಚೇರಿಯನ್ನು ಬಂದ್​ ಮಾಡಲಾಗಿತ್ತು.

ಪೆಂಟಗನ್ ಟ್ರಾನ್ಸಿಟ್​ ಸೆಂಟರ್​ನ ಭಾಗವಾಗಿರುವ ಮೆಟ್ರೊ ಬಸ್ ಪ್ಲಾಟ್​ಫಾರ್ಮ್​ನಲ್ಲಿ ಈ ಘಟನೆ ನಡೆದಿದೆ. ಪೊಲೀಸರು ಸ್ಥಳಕ್ಕೆ ಧಾವಿಸಿದ್ದು, ಕಟ್ಟಡದಲ್ಲಿ ಕೆಲ ಗಂಟೆಗಳ ಕಾಲ ಲಾಕ್​ಡೌನ್​ ಘೋಷಿಸಲಾಗಿತ್ತು. ಮೆಟ್ರೊ ಸಬ್​ವೇ ರೈಲುಗಳಿಗೂ ಪೆಂಟಗನ್ ನಿಲ್ದಾಣದಲ್ಲಿ ನಿಲುಗಡೆ ನಿಷೇಧಿಸಲಾಗಿದೆ.

ಪೆಂಟಗನ್ ಸಮೀಪವೇ ಇದ್ದ ಅಸೋಸಿಯೇಟೆಡ್​ ಪ್ರೆಸ್​ (ಎಪಿ) ಸುದ್ದಿಸಂಸ್ಥೆಯ ವರದಿಗಾರ ಗುಂಡಿನ ದಾಳಿ ನಡೆದಿರುವ ಬಗ್ಗೆ ದೃಢಪಡಿಸಿದ್ದಾರೆ.

ಘಟನೆ ನಡೆದ ಕೆಲ ಗಂಟೆಗಳ ಬಳಿಕ ಪೆಂಟಗನ್ ರಕ್ಷಣಾ ದಳ ಟ್ವೀಟ್ ಮಾಡಿದ್ದು, ಪೆಂಟಗನ್ ಲಾಕ್​ಡೌನ್ ತೆರವುಗೊಳಿಸಿ, ಮತ್ತೆ ತೆರೆಯಲಾಗಿದೆ. ಕಾರಿಡಾರ್-2 ಮತ್ತು ಮೆಟ್ರೋ ಪ್ರವೇಶದ್ವಾರವನ್ನು ಬಂದ್​ ಮಾಡಲಾಗಿದೆ. ಕಾರಿಡಾರ್-3 ಪಾದಚಾರಿ ಸಂಚಾರಕ್ಕೆ ಮುಕ್ತವಾಗಿದೆ ಎಂದು ತಿಳಿಸಿದೆ.

ಇದನ್ನೂ ಓದಿ:ನಾಳೆ ಬೆಳಗ್ಗೆ ಶುಭ ಸುದ್ದಿ: ಮಧ್ಯಾಹ್ನ ಅಥವಾ ಸಂಜೆ ನೂತನ ಸಚಿವರ ಪ್ರಮಾಣವಚನ: ಸಿಎಂ ಬೊಮ್ಮಾಯಿ

Last Updated : Aug 4, 2021, 12:11 AM IST

ABOUT THE AUTHOR

...view details