ಗ್ವಾಟೆಮಾಲಾ: 2018ರ ಮಾರಣಾಂತಿಕ ಜ್ವಾಲಾಮುಖಿ ಸ್ಫೋಟದಿಂದ ಗ್ವಾಟೆಮಾಲಾದ ಧ್ವಂಸಗೊಂಡ ಪ್ರದೇಶದ ಕಡೆಗೆ ಕೆಂಪು ಬಿಸಿ ಕಲ್ಲು ಮತ್ತು ಬೂದಿ ಇಳಿಜಾರುಗಳಲ್ಲಿ ಹರಿಯಲು ಪ್ರಾರಂಭಿಸಿದ್ದು, ಇಳಿಜಾರುಗಳಲ್ಲಿ ವಾಸವಿದ್ದ ಸುಮಾರು 500 ನಿವಾಸಿಗಳು ಸ್ವಯಂಪ್ರೇರಣೆಯಿಂದ ಸ್ಥಳಾಂತರಗೊಂಡಿದ್ದಾರೆ.
ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಸಿಸ್ಮಾಲಜಿ, ವಲ್ಕನಾಲಜಿ, ಮೆಟಿಯೊರಾಲಜಿ ಮತ್ತು ಹೈಡ್ರಾಲಜಿ ತನ್ನ ಹೇಳಿಕೆಯಲ್ಲಿ, ಮಂಗಳವಾರ ಮುಂಜಾನೆ 3 ಗಂಟೆ ಸುಮಾರಿಗೆ ಜ್ವಾಲಾಮುಖಿಯ ಚಟುವಟಿಕೆಯು ಕ್ಷೀಣಿಸಲು ಪ್ರಾರಂಭಿಸಿತು. ಕೆಂಪು ಬಿಸಿ ಕಲ್ಲು ಮತ್ತು ಬೂದಿ ಇಳಿಜಾರುಗಳಲ್ಲಿ ಹರಿಯಲು ಪ್ರಾರಂಭಿಸಿತು ಎಂದು ತಿಳಿಸಿದೆ.
ಜ್ವಾಲಾಮುಖಿ ಸ್ಫೋಟದ ಹಿನ್ನೆಲೆಯಲ್ಲಿ ಜನರು ಸ್ಥಳಾಂತರಗೊಳ್ಳಲು ಆರಂಭಿಸಿದರು. ಗ್ವಾಟೆಮಾಲಾದ ವಿಪತ್ತು ಏಜೆನ್ಸಿಯು ಹತ್ತಿರದ ಪಟ್ಟಣವಾದ ಎಸ್ಕುಯಿಂಟ್ಲಾದಲ್ಲಿ ಸ್ಥಳಾಂತರಿಸುವವರಿಗೆ ಆಶ್ರಯ ತಾಣ ತೆರೆಯಲಾಗಿದೆ. ಜಿಮ್ವೊಂದನ್ನು ಆಶ್ರಯ ತಾಣವಾಗಿ ಪರಿವರ್ತಿಸಲಾಗಿದೆ.
ಇದನ್ನೂ ಓದಿ:'ಪುರುಷರಿಗಿಂತ ನಾವೇನು ಕಮ್ಮಿ ಇಲ್ಲ..' ಶಸ್ತ್ರಾಸ್ತ್ರ ಹಿಡಿದ ಉಕ್ರೇನ್ ಮಹಿಳೆಯರು
3,763 ಮೀಟರ್ ಎತ್ತರದ ಜ್ವಾಲಾಮುಖಿ ಮಧ್ಯ ಅಮೆರಿಕದಲ್ಲಿ ಅತ್ಯಂತ ಸಕ್ರಿಯವಾಗಿರುವ ಜ್ವಾಲಾಮುಖಿಯಲ್ಲೊಂದು. 2018ರಲ್ಲಿ ಸ್ಫೋಟವು 194 ಜನರನ್ನು ಕೊಂದಿತ್ತು ಮತ್ತು 234 ಮಂದಿ ಕಾಣೆಯಾಗಿದ್ದರು. ಜ್ವಾಲಾಮುಖಿಯಿಂದ ಸಂಭವಿಸುವ ದೊಡ್ಡ ಅಪಾಯವೆಂದರೆ ಬೂದಿ, ಕಲ್ಲು, ಮಣ್ಣು ಎಲ್ಲವೂ ಮಿಶ್ರಣವಾಗಿ ಇದು ಇಡೀ ಪಟ್ಟಣಗಳನ್ನು ಹೂತುಹಾಕುತ್ತದೆ.