ಮಿಚಿಗನ್(ಯುಎಸ್ಎ): ತಮ್ಮ ಮುದ್ದಿನ ಮೊಮ್ಮಗಳನ್ನು ನೋಡಲು ಈ ತಾತ ಪ್ರತಿನಿತ್ಯ 6 ಕಿಲೋ ಮೀಟರ್ ನಡೆದುಕೊಂಡು ಹೋಗಿ ಕಿಟಕಿಯ ಮೂಲಕ ಮೊಮ್ಮಗಳನ್ನು ಕಣ್ತುಂಬಿಕೊಂಡು ಬರುತ್ತಿದ್ದಾರೆ.
ಕೊರೊನಾದಿಂದಾಗಿ ಅಮೆರಿಕ ತತ್ತರಿಸಿರುವುದು ಗೊತ್ತಿರುವ ವಿಚಾರ. ಹೀಗಾಗಿ ಇಲ್ಲಿನ ಮಿಚಿಗನ್ ರಾಜ್ಯದಲ್ಲಿ ಸ್ಟೇ ಹೋಂ(ಮನೆಯಲ್ಲೇ ಇರಿ)ನಿಯಮ ಕಟ್ಟುನಿಟ್ಟಾಗಿ ಜಾರಿಯಲ್ಲಿದೆ. ಆದ್ರೆ ಈ ತಾತನಿಗೆ ತಮ್ಮ ಮುದ್ದು ಮೊಮ್ಮಗಳದ್ದೇ ಚಿಂತೆ. ಹೀಗಿದ್ದರೂ ಪ್ರತಿನಿತ್ಯ ತಮ್ಮ ಮೊಮ್ಮಗಳ ಮುಖ ನೋಡದಿದ್ರೆ ಇವರಿಗೆ ಸಮಾಧಾನವಾಗಲ್ಲ. ಹೀಗಾಗಿ ಸುಮಾರು 6 ಕಿ.ಮೀ ದೂರದ ತನ್ನ ಮಗನ ಮನೆಗೆ ಪ್ರತಿನಿತ್ಯ ನಡೆದುಕೊಂಡೇ ಹೋಗಿ ಪುಟ್ಟ ಮೊಮ್ಮಗಳನ್ನು ನೋಡಿಕೊಂಡು ಬರುತ್ತಿದ್ದಾರೆ. ಆದ್ರೆ ಕೊರೊನಾ ಸೋಷಿಯಲ್ ಡಿಸ್ಟೆನ್ಸ್ನಿಂದಾಗಿ ಅಜ್ಜನಿಗೆ ತಮ್ಮ ಮೊಮ್ಮಗಳನ್ನು ಎತ್ತಿ ಮುದ್ದಾಡೋ ಭಾಗ್ಯವಿಲ್ಲ. ಹೀಗಾಗಿ ಕಿಟಕಿ ಮೂಲಕವೇ ಮೊಮ್ಮಗಳು ಎಲಿಯಾನಾಳನ್ನು ಕಣ್ತುಂಬಿಕೊಳ್ಳುತ್ತಾರೆ.