ETV Bharat Karnataka

ಕರ್ನಾಟಕ

karnataka

ETV Bharat / international

ನಕ್ಷತ್ರ ರಚನೆಯ ಚಿತ್ರ ಬಿಡುಗಡೆಗೊಳಿಸಿದ ಖಗೋಳಶಾಸ್ತ್ರಜ್ಞರು: ಏನಿದು ಜಿಪಿಐ ತಂತ್ರಜ್ಞಾನ - GPI used to capture detailed images of debris disks

ಚಿಲಿಯ 8 ಮೀಟರ್ ಉದ್ದದ ಜೆಮಿನಿ ದಕ್ಷಿಣ ದೂರದರ್ಶಕದ ಮೇಲೆ ಅಳವಡಿಸಲಾಗಿರುವ ಜೆಮಿನಿ ಪ್ಲಾನೆಟ್ ಇಮೇಜರ್ (ಜಿಪಿಐ) ಎಂಬ ನಿಖರ ಸಾಧನದಿಂದ ನಾಲ್ಕು ವರ್ಷಗಳ ಅವಧಿಯಲ್ಲಿ ಚಿತ್ರಗಳನ್ನು ಪಡೆಯಲಾಗಿದೆ.

GPI used to capture detailed images of debris disks
ನಕ್ಷತ್ರ ರಚನೆಯ ಚಿತ್ರ ಬಿಡುಗಡೆಗೊಳಿಸಿದ ಖಗೋಳಶಾಸ್ತ್ರಜ್ಞರು
author img

By

Published : Jun 26, 2020, 2:28 PM IST

ಕ್ಯಾಲಿಫೋರ್ನಿಯಾ: ಖಗೋಳಶಾಸ್ತ್ರಜ್ಞರು ಯುವ ನಕ್ಷತ್ರಗಳ ಸುತ್ತಲಿನ ದೊಡ್ಡದಾದ, ತೀಕ್ಷ್ಣವಾದ ಮತ್ತು ವಿವರವಾದ ಚಿತ್ರಗಳ ಸಂಗ್ರಹವನ್ನು ಬಿಡುಗಡೆ ಮಾಡಿದ್ದಾರೆ. ಇದು ನಕ್ಷತ್ರಗಳು ತಮ್ಮ ರಚನೆಯ ಅವಧಿಯಲ್ಲಿ ಹಲವಾರು ಬಗೆಯ ಆಕಾರಗಳು ಮತ್ತು ಗಾತ್ರಗಳನ್ನು ಪಡೆದುಕೊಳ್ಳುತ್ತದೆ ಎಂಬುವುದನ್ನು ತೋರಿಸುವ ಪುರಾವೆಗಳಾಗಿವೆ.

ಚಿಲಿಯ 8 ಮೀಟರ್ ಉದ್ದದ ಜೆಮಿನಿ ದಕ್ಷಿಣ ದೂರದರ್ಶಕದ ಮೇಲೆ ಅಳವಡಿಸಲಾಗಿರುವ ಜೆಮಿನಿ ಪ್ಲಾನೆಟ್ ಇಮೇಜರ್ (ಜಿಪಿಐ) ಎಂಬ ನಿಖರ ಸಾಧನದಿಂದ ನಾಲ್ಕು ವರ್ಷಗಳ ಅವಧಿಯಲ್ಲಿ ಚಿತ್ರಗಳನ್ನು ಪಡೆಯಲಾಗಿದೆ. ಜಿಪಿಐ ಚಿತ್ರ ಸೆರೆ ಹಿಡಿಯುವಾಗ ವಾಯುಮಂಡಲದ ಮಸುಕನ್ನು ತೆಗೆದು ಹಾಕಲು ಅತ್ಯಾಧುನಿಕ ಅಡಾಪ್ಟಿವ್ ಆಪ್ಟಿಕ್ಸ್ ವ್ಯವಸ್ಥೆಯನ್ನು ಬಳಸುತ್ತದೆ ಮತ್ತು ಈ ಸಾಧನ ಹಲವು ದಿನಗಳವರೆಗೆ ತೀಕ್ಷ್ಣವಾದ ಚಿತ್ರಗಳನ್ನು ಒದಗಿಸುತ್ತದೆ.

ಹವಾಯಿಯ ಜೆಮಿನಿ ನಾರ್ತ್ ಟೆಲಿಸ್ಕೋಪ್​ನಲ್ಲೂ ಇದೇ ರೀತಿಯ ಅವಲೋಕನಗಳನ್ನು ನಡೆಸಲು ತಂತ್ರಜ್ಞಾನ ಅಪ್‌ ಗ್ರೇಡ್ ಮಾಡಲಾಗುತ್ತಿದೆ. ಈ ತಂತ್ರಜ್ಞಾನ ಹೆಚ್ಚು ಶಕ್ತಿಶಾಲಿಯಾಗಿದೆ. ಆದರೆ, ಅಷ್ಟೇ ದುಬಾರಿಯಾಗಿದೆ. ಗೈಂಟ್​​​​​ ಮೆಗೆಲ್ಲನ್ ಟೆಲಿಸ್ಕೋಪ್ ಮತ್ತು ಇತರ 20, 30, 40 ಮೀಟರ್ ಉದ್ದದ ದೂರದರ್ಶಕಗಳು ಮುಂದಿನ ಎರಡು ದಶಕಗಳಲ್ಲಿ ಆನ್‌ಲೈನ್‌ ಸೇವೆ ಒದಗಿಸಲಿದೆ. ಇದರ ಜೊತೆ ಬಾಹ್ಯಾಕಾಶದ ಕಕ್ಷೆಯಲ್ಲಿರುವ ಜೇಮ್ಸ್ ವೆಬ್ ಬಾಹ್ಯಾಕಾಶ ದೂರದರ್ಶಕ ಎಂಬ ಸಾಧನ 2021 ರಲ್ಲಿ ಕಾರ್ಯಾರಂಭ ಮಾಡುವ ನಿರೀಕ್ಷೆಯಿದೆ.

ABOUT THE AUTHOR

author-img

...view details