ವಾಷಿಂಗ್ಟನ್: ಭಾರತದಲ್ಲಿ ಭಾರಿ ಸದ್ದು ಮಾಡುತ್ತಿರುವ ಪೆಗಾಸಸ್ ಬಗ್ಗೆ WhatsApp CEO ವಿಲ್ ಕ್ಯಾಥ್ಕಾರ್ಟ್ ಪ್ರತಿಕ್ರಿಯೆ ನೀಡಿದ್ದಾರೆ. ಪೆಗಾಸಸ್ ದೇಶದ ಗಣ್ಯರು, ಸರ್ಕಾರಿ ಅಧಿಕಾರಿಗಳ ಮೊಬೈಲ್ನಲ್ಲಿರುವ ಮಾಹಿತಿಯನ್ನು ಸಂಗ್ರಹಿಸಲು ಸರ್ಕಾರಗಳಿಗೆ ಸಹಾಯ ಮಾಡುತ್ತದೆ. ಹಾಗಾಗಿ, ಬಹುತೇಕ ಸರ್ಕಾರಗಳು ಇಸ್ರೇಲ್ನ ಎನ್ಎಸ್ಒ ಕಂಪನಿಯ ಪೆಗಾಸಸ್ ಬಳಸುತ್ತಿದ್ದಾರೆ ಎಂದರು.
2019 ರಲ್ಲಿ 1400 ಕ್ಕೂ ಹೆಚ್ಚು ವಾಟ್ಸಾಪ್ ಬಳಕೆದಾರರ ಮೇಲೆ ಪೆಗಾಸಸ್ ಕಣ್ಗಾವಲಿಟ್ಟಿದ್ದು, ಮಾಹಿತಿ ಸೋರಿಕೆಯಾಗಿತ್ತು. ಇವರಲ್ಲಿ ವಿಶ್ವದ ಗಣ್ಯರು, ರಾಜಕೀಯ ನಾಯಕರು ಹಾಗೂ ಪತ್ರಕರ್ತರು ಸೇರಿದ್ದರು ಎಂದು ಕ್ಯಾಥ್ಕಾರ್ಟ್ ಹೇಳಿದ್ದಾರೆ.
ಎರಡು ವರ್ಷಗಳ ಹಿಂದೆ ಎನ್ಎಸ್ಒ ಮಾಲ್ವೇರ್ನಿಂದ ವಾಟ್ಸಾಪ್ ಬಳಕೆದಾರರನ್ನು ಗುರಿಯಾಗಿಸಿಕೊಂಡಿತ್ತು. ಈ ಬಗ್ಗೆ ಮಾಹಿತಿ ಬಂದ ಕೂಡಲೇ ನಾವು ಎಚ್ಚೆತ್ತುಕೊಂಡು ಕ್ರಮ ಕೈಗೊಂಡೆವು. ಈ ಬಗ್ಗೆ ವಿಶ್ವದ ಎಲ್ಲಾ ಸರ್ಕಾರಗಳೊಂದಿಗೆ ಮಾತುಕತೆ ನಡೆಸಿದ್ದೆವು ಎಂದಿದ್ದಾರೆ.