ಲಾಸ್ ಏಂಜಲೀಸ್ (ಯು.ಎಸ್): ಗೂಗಲ್‌ನ ಮೂಲ ಕಂಪನಿ ಆಲ್ಫಾಬೆಟ್ ಇಂಕ್‌ನ ಕನಿಷ್ಠ 227 ಇಂಜಿನಿಯರ್‌ಗಳು ಮತ್ತು ಇತರ ಉದ್ಯೋಗಿಗಳ ಹೊಸ ಗುಂಪು ಆಲ್ಫಾಬೆಟ್ ವರ್ಕರ್ಸ್ ಯೂನಿಯನ್ ಆರಂಭಿಸಿದ್ದು, ಇದು ಸುಮಾರು ಒಂದು ವರ್ಷದಿಂದ ಸದ್ದಿಲ್ಲದೆ ಕೆಲಸದಲ್ಲಿದೆ.
ಯು.ಎಸ್. ಮತ್ತು ಕೆನಡಾದಲ್ಲಿ ವಿಡಿಯೋ ಗೇಮ್ ಮತ್ತು ಟೆಕ್ ಕಂಪನಿಗಳನ್ನು ಒಗ್ಗೂಡಿಸುವ ಉದ್ದೇಶದಿಂದ ಈ ವರ್ಷದ ಆರಂಭದಲ್ಲಿ ಅಭಿಯಾನ ಪ್ರಾರಂಭಿಸಿದ್ದು, ಸುಮಾರು 700,000 ಕಾರ್ಮಿಕರನ್ನು ಪ್ರತಿನಿಧಿಸುವ ಕಾರ್ಮಿಕ ಸಮೂಹವಾದ ಅಮೆರಿಕಾದ ಕಮ್ಯುನಿಕೇಷನ್ಸ್ ವರ್ಕರ್ಸ್‌ನ ಬೆಂಬಲದೊಂದಿಗೆ ಇದೆ.