ಕರ್ನಾಟಕ

karnataka

ETV Bharat / international

ಜುಲೈ 6ರಿಂದ ಗೂಗಲ್ ಕಚೇರಿಗಳು ಪುನಾರಂಭ: ಪ್ರತೀ ಸಿಬ್ಬಂದಿಗೂ 75 ಸಾವಿರ ರೂ. ನೀಡಲು ನಿರ್ಧಾರ

ಕೊರೊನಾ ಲಾಕ್​​ಡೌನ್​ನಿಂದಾಗಿ ಜಾಗತ್ತಿನಾದ್ಯಂತ ಮುಚ್ಚಿರುವ ಗೂಗಲ್ ಕಚೇರಿಗಳು ಜುಲೈ 6ರಿಂದ ಕಾರ್ಯರಾಂಭ ಮಾಡಲಿವೆ ಎಂದು ಸಿಇಒ ಸುಂದರ್​ ಪಿಚೈ ತಿಳಿಸಿದ್ದಾರೆ.

Google to reopen offices from July 6, gives workers $1,000 each
ಜುಲೈ 6 ರಿಂದ ಗೂಗಲ್ ಕಚೇರಿಗಳು ಪುನರಾರಂಭ

By

Published : May 27, 2020, 1:30 PM IST

ಸ್ಯಾನ್ ಫ್ರಾನ್ಸಿಸ್ಕೋ:ಲಾಕ್​ಡೌನ್​ನಿಂದಾಗಿ ಮನೆಯಿಂದಲೇ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಯನ್ನು ಹಂತ ಹಂತವಾಗಿ ಕಚೇರಿಗೆ ಕರೆ ತರಲು ಗೂಗಲ್ ನಿರ್ಧರಿಸಿದೆ ಮತ್ತು ಮನೆಯಿಂದಲೇ ಕೆಲಸ ಮಾಡುವವರಿಗೆ ಅವರ ಕಚೇರಿ ಪೀಠೋಪಕರಣ ಹಾಗೂ ಇತ್ಯಾದಿ ಖರ್ಚು ವೆಚ್ಚಗಳಿಗಾಗಿ ಜಾಗತಿಕವಾಗಿ ಪ್ರತಿಯೊಬ್ಬ ಸಿಬ್ಬಂದಿಗೂ 1 ಸಾವಿರ ಯುಎಸ್​ ಡಾಲರ್​ ( ಭಾರತೀಯ 75 ಸಾವಿರ ರೂ.) ನೀಡಲು ಮುಂದಾಗಿದೆ.

ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿರುವ ಆಲ್ಫಾಬೆಟ್​ ಮತ್ತು ಗೂಗಲ್ ಸಿಇಒ ಸುಂದರ್​ ಪಿಚೈ, ಜುಲೈ 6ರಿಂದ ಹೆಚ್ಚಿನ ನಗರಗಳಲ್ಲಿ ಬಹುತೇಕ ಕಚೇರಿಗಳನ್ನು ಪುನಾರಂಭಿಸಲಿದ್ದೇವೆ. ಕಚೇರಿಗೆ ಮರಳಲು ಇಚ್ಛಿಸುವ ಸಿಬ್ಬಂದಿಗೆ ಶಿಫ್ಟ್​ ಆಧಾರದಲ್ಲಿ ಅವಕಾಶ ನೀಡುತ್ತೇವೆ. ಆಯಾ ದೇಶಗಳ ನಿಯಮಗಳಿಗೆ ಅನುಗುಣವಾಗಿ ಸೆಪ್ಟೆಂಬರ್​ ವೇಳೆಗೆ ಶೇ. 30ರಷ್ಟು ಸಿಬ್ಬಂದಿಯನ್ನು ಕಚೇರಿಗ ಕರೆಸಿಕೊಳ್ಳುತ್ತೇವೆ ಎಂದು ಹೇಳಿದ್ದಾರೆ.

ಈ ವರ್ಷದ ಇನ್ನುಳಿದ ಕೆಲ ತಿಂಗಳು ಬಹುತೇಕ ಸಿಬ್ಬಂದಿ ಮನೆಯಿಂದಲೇ ಕಾರ್ಯನಿರ್ವಹಿಸಲಿದ್ದಾರೆ. ಹಾಗಾಗಿ ಅವರಿಗೆ ಮನೆಯಲ್ಲೇ ಕಚೇರಿಯ ಮಾದರಿಯಲ್ಲಿ ಕೆಲಸ ಮಾಡಲು ಬೇಕಾದ ಪೀಠೋಪಕರಣ ಖರೀದಿಸಲು 1 ಸಾವಿರ ಯುಎಸ್ ಡಾಲರ್​ ನೀಡುವುದಾಗಿ ಪಿಚೈ ಘೋಷಿಸಿದ್ದಾರೆ.

ABOUT THE AUTHOR

...view details