ಸ್ಯಾನ್ ಫ್ರಾನ್ಸಿಸ್ಕೋ(ಅಮೆರಿಕ): ಬಳಕೆದಾರರು ತಮ್ಮ ಹುಡುಕಾಟ(ಸರ್ಚ್) ಚಟುವಟಿಕೆಯನ್ನು ಖಾಸಗಿಯಾಗಿಡಲು 'ಅಜ್ಞಾತ' ಮೋಡ್‌ನಲ್ಲಿ ಬ್ರೌಸ್ ಮಾಡಿದರೂ ಸಹ ಗೂಗಲ್ ಕ್ರೋಮ್ ಅಂತರ್ಜಾಲ ದತ್ತಾಂಶವನ್ನು ರಹಸ್ಯವಾಗಿ ಸಂಗ್ರಹಿಸುತ್ತದೆ ಎಂದು ಆರೋಪಿಸಿ ಮೂವರು ವ್ಯಕ್ತಿಗಳು ಗೂಗಲ್ ವಿರುದ್ಧ ಕೋರ್ಟ್‌ನಲ್ಲಿ ಮೊಕದ್ದಮೆ ದಾಖಲಿಸಿದ್ದರು.
ಈ ಪ್ರಕರಣವನ್ನು ದಾಖಲಿಸಿದ ಗ್ರಾಹಕರು, ಅವರು ಕ್ರೋಮ್ನಲ್ಲಿ (Chrome)ನಲ್ಲಿ ಡೇಟಾ ಸಂಗ್ರಹಣೆಯನ್ನು ಆಫ್ ಮಾಡಿದರೂ ಸಹ, ವೆಬ್‌ಸೈಟ್‌ಗಳು ಬಳಸುವ ಇತರ ಗೂಗಲ್ ಪರಿಕರಗಳು ತಮ್ಮ ವೈಯಕ್ತಿಕ ಮಾಹಿತಿಯನ್ನು ಸಂಗ್ರಹಿಸುತ್ತಿವೆ ಎಂದು ಆರೋಪಿಸಿದ್ದರು.
"ಬಳಕೆದಾರರು ಖಾಸಗಿ ಬ್ರೌಸಿಂಗ್ ಮೋಡ್‌ನಲ್ಲಿರುವಾಗ ಗೂಗಲ್ ದತ್ತಾಂಶ ಸಂಗ್ರಹಣೆಯಲ್ಲಿ ತೊಡಗಿದೆ ಎಂದು ಗೂಗಲ್ ಬಳಕೆದಾರರಿಗೆ ತಿಳಿಸಿಲ್ಲ" ಎಂದು ಕ್ಯಾಲಿಫೋರ್ನಿಯಾದ ಸ್ಯಾನ್ ಜೋಸ್‌ನಲ್ಲಿ ನ್ಯಾಯಾಧೀಶ ಲೂಸಿ ಕೊಹ್ ತನ್ನ ತೀರ್ಪಿನಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ: ಜಮ್ಮು-ಕಾಶ್ಮೀರ ಪೊಲೀಸರಿಂದ 9 ವಾಂಟೆಡ್ ಉಗ್ರರ ಪಟ್ಟಿ ಬಿಡುಗಡೆ
ಕಂಪನಿಯು 'ವ್ಯಾಪಕವಾದ ಡೇಟಾ ಟ್ರ್ಯಾಕಿಂಗ್ ವ್ಯವಹಾರ' ವನ್ನು ನಡೆಸುತ್ತಿದೆ ಎಂದು ಮೂವರು ಗೂಗಲ್ ಬಳಕೆದಾರರು ಜೂನ್‌ನಲ್ಲಿ ದೂರು ಸಲ್ಲಿಸಿದ್ದರು. ಈ ದೂರಿನ ಅನ್ವಯ, ಬಳಕೆದಾರರು ತಮ್ಮ ಡೇಟಾವನ್ನು 'ಅಜ್ಞಾತ' ಖಾಸಗಿ ಬ್ರೌಸಿಂಗ್ ಮೋಡ್ ಬಳಸುವಂತಹ ಸುರಕ್ಷತೆಯನ್ನು ಕಾಪಾಡಿಕೊಂಡ ನಂತರವೂ ಗೂಗಲ್ ಬ್ರೌಸಿಂಗ್ ಇತಿಹಾಸ ಮತ್ತು ಇತರ ವೆಬ್ ಚಟುವಟಿಕೆಯಲ್ಲಿ ಡೇಟಾವನ್ನು ಸಂಗ್ರಹಿಸುತ್ತದೆ ಎಂದು ಆರೋಪಿಸಿದ್ದರು.