ಸ್ಯಾನ್ ಫ್ರಾನ್ಸಿಸ್ಕೋ:ಜಗತ್ತನ್ನ ಬೆಚ್ಚಿ ಬೀಳಿಸಿದ ಕೊರೊನಾ ವೈರಸ್, ಇದೀಗ ಗೂಗಲ್ ಕಚೇರಿಗೂ ಇದರ ಬಿಸಿ ತಟ್ಟಿದ್ದು, ಸಿಬ್ಬಂದಿ ಹೊರತುಪಡಿಸಿ ಬೇರಾರಿಗೂ ಕಚೇರಿಯೊಳಗೆ ಬಾರದಂತೆ ನಿರ್ಬಂಧ ಹೇರಲಾಗಿದೆ.
ನ್ಯೂ ಯಾರ್ಕ್ನ ಸಿಲಿಕಾನ್ ವ್ಯಾಲಿ ಪ್ರದೇಶದಲ್ಲಿರುವ ಗೂಗಲ್ ಕೇಂದ್ರ ಕಚೇರಿಯಿಂದ ಈ ಆದೇಶ ಹೊರಡಿಸಲಾಗಿದ್ದು, ಕೊರೊನಾ ವೈರಸ್ ಸೋಂಕು ತಡೆಗಟ್ಟಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಸಂಸ್ಥೆ ತಿಳಿಸಿದೆ.
ಪ್ರಪಂಚವನ್ನೇ ನಡುಗಿಸಿದ ಕೊರೊನಾ ವೈರಸ್ ತಡೆಗಟ್ಟಲು ಹಲವಾರು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಹಾಗೂ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಎಲ್ಲರಲ್ಲೂ ಜಾಗೃತಿ ಮೂಡಿಸಲಾಗುತ್ತಿದೆ. ಈ ನಿಟ್ಟಿನಲ್ಲಿ ಗೂಗಲ್ ಸಂಸ್ಥೆ ಸಹ ಈ ಸೋಂಕಿನ ತಡೆಗೆ ಯತ್ನಿಸುತ್ತಿದ್ದು, ಕಂಪನಿಯ ನೌಕರರಿಗೆ ಮನೆಯಲ್ಲೇ ಕುಳಿತು(ವರ್ಕ್ ಫ್ರಮ್ ಹೋಮ್) ಕೆಲಸ ನಿರ್ವಹಿಸುವಂತೆ ನಿರ್ದೇಶನ ನೀಡಿದೆ.
ಗೂಗಲ್ ಕಂಪನಿಯು ಈಗಾಗಲೇ ನಿಗದಿಪಡಿಸಿದ ಸಂದರ್ಶನಗಳನ್ನು ರದ್ದುಗಳಿಸಿದ್ದು, ಕಂಪನಿಯೇತರರಾಗಿ ಗೂಗಲ್ ಕೇಂದ್ರ ಕಚೇರಿಗೆ ಭೇಟಿ ನೀಡುವ ಡೆಲಿಗೇಟ್ಸ್ಗಳಿಗೂ ನಿರ್ಬಂಧ ಹೇರಿದೆ. ಅದಲ್ಲದೇ ಏಪ್ರಿಲ್ ನಲ್ಲಿ ಆಯೋಜನೆಗೊಂಡಿದ್ದ ಟಿಇಡಿ ಕಾನ್ಫರೆನ್ಸ್ಗೂ ಸಹ ಗೂಗಲ್ ಬ್ರೇಕ್ ಹಾಕಿದೆ.
ಗೂಗಲ್ ಸೇರಿದಂತೆ ಫೇಸ್ಬುಕ್, ಆ್ಯಪಲ್, ಅಮೆಜಾನ್, ಮೈಕ್ರೋಸಾಫ್ಟ್, ಟ್ವಿಟರ್ ಕಂಪನಿಗಳು ಸಹ ಕೊರೊನಾ ಸೋಂಕು ತಗಡೆಗಟ್ಟುವ ಸಲುವಾಗಿ ತನ್ನ ನೌಕರರಿಗೆ ವರ್ಕ್ ಫ್ರಮ್ ಹೋಮ್ ಮಾಡುವಂತೆ ನಿರ್ದೇಶನ ನೀಡಿದೆ.
ಪ್ರತಿ ವರ್ಷ ನಡೆಯುತ್ತಿದ್ದ ಗೂಗಲ್ ಐ/ಒ, ಎಫ್-8 ಹಾಗೂ ಜಾಗತಿಕ ಕಾನ್ಫರೆನ್ಸ್ಗಳನ್ನು ಈ ಬಾರಿ ಗೂಗಲ್ ನಡೆಸದಂತೆ ತೀರ್ಮಾನಿಸಿದ್ದು, ಟೆಕ್ಸಾಸ್ ಮತ್ತು ಆಸ್ಟಿನ್ನಲ್ಲಿ ನಡೆಯಬೇಕಿದ್ದ ಸೌತ್ವೆಸ್ಟ್ ಕಲ್ಚರಲ್ ಕಾನ್ಫರೆನ್ಸ್ ಸಹ ಕೊರೊನಾ ವೈರಸ್ ಸೋಂಕಿನ ಭೀತಿಯಿಂದಾಗಿ ಗೂಗಲ್ ಸ್ಥಗಿತಗೊಳಿಸಿದೆ.