ಕ್ಯಾಲಿಫೋರ್ನಿಯಾ: ಗೂಗಲ್ ಫೋಟೋಗಳಿಗೆ ಹೊಸ ನಿಯಂತ್ರಣಗಳನ್ನು ತರಲಾಗುತ್ತಿದೆ ಎಂದು ಗೂಗಲ್ ಹೇಳಿದೆ. ಬಳಕೆದಾರರು ತಮ್ಮ ಗೂಗಲ್ ಖಾತೆಯ ಮೂಲಕ ನಿರ್ದಿಷ್ಟ ವ್ಯಕ್ತಿ ಅಥವಾ ಜನರೊಂದಿಗೆ ಆಲ್ಬಮ್‌ಗಳನ್ನು ಹಂಚಿಕೊಳ್ಳಲು ಅನುವು ಮಾಡಿಕೊಡಲಾಗುತ್ತದೆ ಎಂದು ಟ್ವೀಟ್ ಮೂಲಕ ಮಾಹಿತಿ ನೀಡಲಾಗಿದೆ.
ಗೂಗಲ್ ಫೋಟೋಸ್ ಮೂಲಕ ಇನ್ಮುಂದೆ ಆಲ್ಬಮ್ಗಳನ್ನೂ ಹಂಚಿಕೊಳ್ಳಬಹುದು - ಕ್ಯಾಲಿಫೋರ್ನಿಯಾ
ಗೂಗಲ್ ಫೋಟೋಗಳನ್ನು ಹಂಚಿಕೊಳ್ಳುವಾಗ ಡಿಫಾಲ್ಟ್ ಆಯ್ಕೆ ಈ ನೂತನ ಸೇವೆಯಲ್ಲಿ ಇರುತ್ತದೆ. ಅಲ್ಲಿ ನೀವು ಆಯ್ಕೆ ಮಾಡಿದ ವ್ಯಕ್ತಿ ಅಥವಾ ಜನರೊಂದಿಗೆ ಫೋಟೋಗಳನ್ನು ಹಂಚಿಕೊಳ್ಳಬಹುದು.
ಈ ಮುನ್ನ ಫೋಟೋಗಳು ಮತ್ತು ವೀಡಿಯೊಗಳನ್ನು ಸುಲಭವಾಗಿ ಹಂಚಿಕೊಳ್ಳಲು ಸಹಕಾರಿಯಾಗುವ ಹಾಗೆ ಮಾಡಿದ್ದೆವು. ಈಗ ನಾವು ಇದೇ ರೀತಿಯ ನೂತನ ತಂತ್ರಜ್ಞಾನವನ್ನು ತಂದಿದ್ದೇವೆ. ನಿರ್ದಿಷ್ಟ ವ್ಯಕ್ತಿ ಅಥವಾ ಜನರೊಂದಿಗೆ ಅವರ ಖಾತೆಯ ಮೂಲಕ ನೇರವಾಗಿ ಫೋಟೋ ಹಂಚಿಕೊಳ್ಳಬಹುದು. ಇದು ಡಿಫಾಲ್ಟ್ ಆಯ್ಕೆಯಾಗಿದೆ ಎಂದು ಗೂಗಲ್ ಫೋಟೋಸ್ ಶೇರಿಂಗ್ ಎಂಜಿನಿಯರಿಂಗ್ ಮುಖ್ಯಸ್ಥ ಸಂಜುಕ್ತ ಮಾಥುರ್ ಹೇಳಿದ್ದಾರೆ.
ಗೂಗಲ್ ಫೋಟೋಗಳಲ್ಲಿ ಆಲ್ಬಮ್‌ಗಳನ್ನು ಲಿಂಕ್ ಮೂಲಕ ಹಂಚಿಕೊಳ್ಳಲು ಅವಕಾಶವಿದೆ, ಅದನ್ನು ನೀವು ಗೂಗಲ್ ಫೋಟೋಗಳನ್ನು ಬಳಸದ ಅಥವಾ ಗೂಗಲ್ ಹೊಂದಿರದ ಜನರೊಂದಿಗೂ ಕೂಡ ಫೋಟೋಗಳನ್ನು ಸುಲಭವಾಗಿ ಸಹಾಯಕವಾಗುತ್ತದೆ ಎಂದು ತಿಳಿಸಿದ್ದಾರೆ.