ಕ್ಯಾಲಿಫೋರ್ನಿಯಾ: ಭಾರತದಲ್ಲಿ ಕೊರೊನಾ ಎರಡನೇ ಅಲೆ ಉಲ್ಬಣದಿಂದಾಗಿ ಪ್ರತಿನಿತ್ಯ ಮೂರು ಲಕ್ಷಗಳ ಕೇಸ್ಗಳು ಹಾಗೂ ಎರಡು ಸಾವಿರಕ್ಕೂ ಅಧಿಕ ಸಾವು ವರದಿಯಾಗುತ್ತಿವೆ. ಅಗತ್ಯ ಸೌಲಭ್ಯಗಳಿಲ್ಲದೆ ವೈದ್ಯಕೀಯ ವಲಯ ಸಂಕಷ್ಟದಲ್ಲಿ ಸಿಲುಕಿದೆ. ದೇಶದ ವೈರಸ್ ವಿರುದ್ಧದ ಹೋರಾಟದಲ್ಲಿ ಇದೀಗ ಗೂಗಲ್ ಕೈಜೋಡಿಸಿದ್ದು, 135 ಕೋಟಿ ರೂ. ನೆರವು ಘೋಷಿಸಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಗೂಗಲ್ ಸಿಇಒ ಸುಂದರ್ ಪಿಚೈ, ಭಾರತದಲ್ಲಿ ಉಲ್ಬಣಗೊಳ್ಳುತ್ತಿರುವ ಕೋವಿಡ್ ಬಿಕ್ಕಟ್ಟನ್ನು ನೋಡಿ ನಾನು ಕುಸಿದಿದ್ದು, ದೇಶದಲ್ಲಿ ವೈದ್ಯಕೀಯ ಸರಬರಾಜು ಮತ್ತು ತುರ್ತು ಪರಿಸ್ಥಿತಿಯ ಬೆಂಬಲಕ್ಕಾಗಿ 135 ಕೋಟಿ ರೂ. ಯೂನಿಸೆಫ್ (UNICEF) ಹಾಗೂ 'ಗಿವ್ ಇಂಡಿಯಾ' (GiveIndia) ಅಭಿಯಾನದಡಿ 135 ಕೋಟಿ ರೂ. ನೀಡುವುದಾಗಿ ಹೇಳಿದ್ದಾರೆ.