ಸ್ಯಾನ್ ಫ್ರಾನ್ಸಿಸ್ಕೊ: ಕೊರೊನಾ ವರದಿಗಳ ಬಗ್ಗೆ ಆರೋಗ್ಯ ಸಂಸ್ಥೆಗಳಿಂದ ಹಿಡಿದು ಸರ್ಕಾರ, ಆರೋಗ್ಯ ಇಲಾಖೆಗಳು ಜನರಿಗೆ ಮಾಹಿತಿ ನೀಡಲು ಕಷ್ಟಪಡುತ್ತಿದ್ದಾರೆ. ಕೊರೊನಾ ಸಂಬಂಧಿತ ವಿಷಯವನ್ನು ಅಗತ್ಯ ಭಾಷೆಗಳಿಗೆ ಭಾಷಾಂತರಿಸಲು ಸಂಪನ್ಮೂಲಗಳ ಕೊರತೆ ಇದಕ್ಕೆ ಪ್ರಮುಖ ಕಾರಣ.
ಗೂಗಲ್ ಎಐ, ಎಂಎಲ್ ಅನುವಾದ ಸೇವೆ : 350 ಭಾಷೆಗಳಲ್ಲಿ ಕೋವಿಡ್-19 ಮಾಹಿತಿ - ಗೂಗಲ್ ಎಐ, ಎಂಎಲ್ ಅನುವಾದ ಸೇವೆ
ಗೂಗಲ್ ಎಐ ಮತ್ತು ಎಂಎಲ್ ಅನುವಾದ ಸೇವೆಗಳು ಆರೋಗ್ಯ ಅಧಿಕಾರಿಗಳಿಗೆ ಕೋವಿಡ್ ಮಾಹಿತಿಯನ್ನು ಪ್ರಸಾರ ಮಾಡಲು ಅವರು ಅರ್ಥಮಾಡಿಕೊಳ್ಳುವ ಭಾಷೆಗಳಲ್ಲಿ ಜನರೊಂದಿಗೆ ಸಂವಹನ ನಡೆಸಲು ಸಹಾಯ ಮಾಡುತ್ತಿವೆ. ಅಮೆರಿಕದಲ್ಲಿ 350 ಭಾಷೆಗಳಲ್ಲಿ ಭಾಷಾಂತರ ಮಾಡಲಾಗುತ್ತಿದೆ.
![ಗೂಗಲ್ ಎಐ, ಎಂಎಲ್ ಅನುವಾದ ಸೇವೆ : 350 ಭಾಷೆಗಳಲ್ಲಿ ಕೋವಿಡ್-19 ಮಾಹಿತಿ ಗೂಗಲ್ ಎಐ, ಎಂಎಲ್ ಅನುವಾದ ಸೇವೆ](https://etvbharatimages.akamaized.net/etvbharat/prod-images/768-512-8010198-659-8010198-1594661017778.jpg)
ಯಾಂತ್ರದ ಮೂಲಕ ಅನುವಾದ ಮಾಡುವುದು ಪಠ್ಯ ಅಥವಾ ಭಾಷಣವನ್ನು ಒಂದು ಭಾಷೆಯಿಂದ ಇನ್ನೊಂದಕ್ಕೆ ಭಾಷಾಂತರಿಸಲು ಇರುವ ಒಂದು ಮಾರ್ಗವಾಗಿದೆ. ಭಾಷಾಂತರಕಾರರನ್ನು ಸಂಪೂರ್ಣವಾಗಿ ಬದಲಿಸುವ ಉದ್ದೇಶ ಇಲ್ಲವಾದರೂ, ವಿವಿಧ ಭಾಷೆಗಳಿಗೆ ತಕ್ಷಣದ ಅನುವಾದದ ಅಗತ್ಯವಿದ್ದಾಗ ಯಂತ್ರದ ಮೂಲಕ ಅನುವಾದ ಮಾಡುವುದು ಮೌಲ್ಯಯುತವಾದುದು ಎಂದು ಗೂಗಲ್ ಅಭಿಪ್ರಾಯಪಟ್ಟಿದೆ.
ಗೂಗಲ್ ಅನುವಾದವು ವಿಭಿನ್ನ ಡಾಕ್ಯುಮೆಂಟ್ ಸ್ವರೂಪಗಳನ್ನು ಅನುವಾದಿಸಲು ಬೆಂಬಲಿಸುತ್ತದೆ. ಡಾಕ್ಯುಮೆಂಟ್ ಅನ್ನು ಸರಳವಾಗಿ ಅಪ್‌ಲೋಡ್ ಮಾಡುವ ಮೂಲಕ, ನೀವು ಆಯ್ಕೆ ಮಾಡಿದ ಭಾಷೆಯಲ್ಲಿ ಅನುವಾದಿತ ಆವೃತ್ತಿಯನ್ನು ನೀವು ಪಡೆಯಬಹುದು. ಗೂಗಲ್ ಎಐ ಮತ್ತು ಎಂಎಲ್ ಅನುವಾದ ಸೇವೆಗಳು ಆರೋಗ್ಯ ಅಧಿಕಾರಿಗಳಿಗೆ ಕೋವಿಡ್ ಮಾಹಿತಿಯನ್ನು ಪ್ರಸಾರ ಮಾಡಲು ಅವರು ಅರ್ಥಮಾಡಿಕೊಳ್ಳುವ ಭಾಷೆಗಳಲ್ಲಿ ಜನರೊಂದಿಗೆ ಸಂವಹನ ನಡೆಸಲು ಸಹಾಯ ಮಾಡುತ್ತಿವೆ. ಅಮೆರಿಕದಲ್ಲಿ 350 ಭಾಷೆಗಳಲ್ಲಿ ಭಾಷಾಂತರ ಮಾಡಲಾಗುತ್ತಿದೆ.