ವಾಷಿಂಗ್ಟನ್(ಅಮೆರಿಕಾ): ವಿಶ್ವದ ಜನರನ್ನು ಭಯಭೀತಗೊಳಿಸಿರುವ ಜಾಗತಿಕ ಮಹಾಮಾರಿ ಕೊರೊನಾಗೆ ಈವರೆಗೆ ಬರೋಬ್ಬರಿ 2,11,609 ಮಂದಿ ಬಲಿಯಾಗಿದ್ದಾರೆ. ಪ್ರಪಂಚದಾದ್ಯಂತ ಸೋಂಕಿತರ ಸಂಖ್ಯೆ 30,64,830ಕ್ಕೆ ಏರಿಕೆಯಾಗಿದೆ.
ಕಿಲ್ಲರ್ ಕೊರೊನಾಗೆ ಜಗತ್ತೇ ತಲ್ಲಣ: 2 ಲಕ್ಷ ಜನರು ಬಲಿ, ಸೋಂಕಿತರ ಸಂಖ್ಯೆ ಎಷ್ಟು? - coronavirus pandemic worldwide
ಜಗತ್ತಿನಾದ್ಯಂತ 30,64,830 ಜನರಿಗೆ ಕೊರೊನಾ ಸೋಂಕು ತಗುಲಿದ್ದು, ಈ ಪೈಕಿ 9,22,397 ಗುಣಮುಖರಾಗಿದ್ದಾರೆ. 2 ಲಕ್ಷಕ್ಕೂ ಹೆಚ್ಚು ಜನರು ಕೊರೊನಾಗೆ ಬಲಿಯಾಗಿದ್ದಾರೆ.
ಕೋವಿಡ್-19 ಟ್ರ್ಯಾಕರ್
ಇಟಲಿ, ಸ್ಪೇನ್, ಫ್ರಾನ್ಸ್ ಹಾಗೂ ಬ್ರಿಟನ್ನಲ್ಲಿ ಕೋವಿಡ್-19 ಮೃತರ ಸಂಖ್ಯೆ 20 ಸಾವಿರ ಗಡಿ ದಾಟಿದ್ದು, ಸಾವು-ನೋವಿನಲ್ಲಿ ಎಲ್ಲಾ ದೇಶಗಳನ್ನು ವಿಶ್ವದ ದೊಡ್ಡಣ್ಣ ಹಿಂದಿಕ್ಕಿದೆ. ಅಮೆರಿಕಾದಲ್ಲಿ ಈವರೆಗೆ 56,803 ಮೃತಪಟ್ಟಿದ್ದು, ಸೋಂಕಿತ ಪ್ರಕರಣಗಳ ಸಂಖ್ಯೆ 10 ಲಕ್ಷದ ಗಡಿ ದಾಟಿದೆ.
ಜಗತ್ತಿನಾದ್ಯಂತ ಕೊರೊನಾಗೆ ಮೃತಪಟ್ಟವರ ಪೈಕಿ ವೃದ್ಧರು ಹಾಗೂ ಮಧುಮೇಹ, ಅಧಿಕ ರಕ್ತದೊತ್ತಡ, ಹೃದಯ ಸಂಬಂಧಿ ಕಾಯಿಲೆ ಸೇರಿದಂತೆ ಅನಾರೋಗ್ಯದಿಂದ ಬಳಲುತ್ತಿರುವವರೇ ಹೆಚ್ಚು ಮಂದಿ ಬಲಿಯಾಗಿದ್ದಾರೆ. ಇನ್ನು ಒಟ್ಟು 9,22,397 ಜನರು ಸೋಂಕಿನಿಂದ ಗುಣಮುಖರಾಗಿದ್ದಾರೆ.