ವಾಷಿಂಗ್ಟನ್ (ಯುಎಸ್): ಜಾಗತಿಕ ಕೊರೊನಾ ವೈರಸ್ ಪ್ರಕರಣಗಳು 239.5 ಮಿಲಿಯನ್ ತಲುಪಿವೆ. ಸಾವುಗಳ ಸಂಖ್ಯೆ 4.88 ಮಿಲಿಯನ್‌ಗಿಂತಲೂ ಹೆಚ್ಚಾಗಿದೆ. 6.57 ಬಿಲಿಯನ್‌ಗಿಂತ ಹೆಚ್ಚು ಜನರಿಗೆ ಕೋವಿಡ್ ಲಸಿಕೆ ನೀಡಲಾಗಿದೆ ಎಂದು ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾಲಯ ತಿಳಿಸಿದೆ.
ಶುಕ್ರವಾರ ಬೆಳಿಗ್ಗೆ ಇತ್ತೀಚಿನ ಅಪ್‌ಡೇಟ್‌ನಲ್ಲಿ, ಯೂನಿವರ್ಸಿಟಿಯ ಸೆಂಟರ್ ಫಾರ್ ಸಿಸ್ಟಮ್ಸ್ ಸೈನ್ಸ್ ಅಂಡ್ ಇಂಜಿನಿಯರಿಂಗ್ (CSSE) ಪ್ರಸ್ತುತ ಜಾಗತಿಕ ಕೋವಿಡ್ ಪ್ರಕರಣಗಳು, ಸಾವಿನ ಸಂಖ್ಯೆ ಮತ್ತು ನೀಡಲಾದ ಲಸಿಕೆ ಡೋಸ್‌ಗಳ ಸಂಖ್ಯೆ ಕ್ರಮವಾಗಿ 23,95,73,207, 48,81,197 ಮತ್ತು 6,57,59,70,837 ಎಂದು ಬಹಿರಂಗಪಡಿಸಿದೆ.
CSSE ಪ್ರಕಾರ, ಯುಎಸ್ 4,47,66,965 ಪ್ರಕರಣಗಳು ಮತ್ತು 7,21,562 ಸಾವುಗಳನ್ನು ಹೊಂದಿರುವ ವಿಶ್ವದ ಅತಿ ಹೆಚ್ಚು ಹಾನಿಗೊಳಗಾದ ದೇಶವಾಗಿದೆ. 3,40,20,730 ಪ್ರಕರಣಗಳೊಂದಿಗೆ ಭಾರತ ಎರಡನೇ ಸ್ಥಾನದಲ್ಲಿದೆ.