ಕರ್ನಾಟಕ

karnataka

ETV Bharat / international

ಜಗತ್ತಿನೆಲ್ಲೆಡೆ 20 ಕೋಟಿಗಿಂತಲೂ ಅಧಿಕ ಕೊರೊನಾ ವೈರಸ್ ಪ್ರಕರಣಗಳು ವರದಿ - ಜಾಗತಿಕ ಕೊರೊನಾ ವೈರಸ್ ಪ್ರಕರಣಗಳು ವರದಿ

ಜಾನ್ ಹಾಪ್ಕಿನ್ಸ್ ಯೂನಿವರ್ಸಿಟಿಯ ಸೆಂಟರ್ ಫಾರ್ ಸಿಸ್ಟಮ್ಸ್ ಸೈನ್ಸ್ ಆ್ಯಂಡ್ ಇಂಜಿನಿಯರಿಂಗ್ (CSSE) ವರದಿಯನ್ವಯ, ಪ್ರಸ್ತುತ ಜಾಗತಿಕ ಕೊರೊನಾ ಪ್ರಕರಣಗಳು, ಸಾವಿನ ಸಂಖ್ಯೆ ಮತ್ತು ವ್ಯಾಕ್ಸಿನೇಷನ್ ಸಂಖ್ಯೆ ಕ್ರಮವಾಗಿ 207,137,460 ಮತ್ತು 43,61,399 ಮತ್ತು 4,58,26,58,758 ಎಂದು ಬಹಿರಂಗಪಡಿಸಿದೆ.

The global coronavirus caseload has topped 207 million
ಜಾಗತಿಕ ಕೊರೊನಾ ವೈರಸ್ ಪ್ರಕರಣಗಳು ವರದಿ

By

Published : Aug 16, 2021, 11:27 AM IST

ನವದೆಹಲಿ: ಇಲ್ಲಿಯವರೆಗೆ ಜಗತ್ತಿನಲ್ಲಿ 207 ಮಿಲಿಯನ್ (20 ಕೋಟಿ 70 ಲಕ್ಷ) ​ಗಿಂತಲೂ ಅಧಿಕ ಕೊರೊನಾ ವೈರಸ್ ಪ್ರಕರಣಗಳು ವರದಿಯಾಗಿವೆ. 4.36 (43ಲಕ್ಷಕ್ಕೂ ಅಧಿಕ) ಮಿಲಿಯನ್‌ಗಿಂತ ಹೆಚ್ಚು ಜನರು ಕೋವಿಡ್​ಗೆ ಬಲಿಯಾಗಿದ್ದಾರೆ. 4.58 ಬಿಲಿಯನ್‌ಗಿಂತ ಹೆಚ್ಚಿನ ಜನರಿಗೆ ಲಸಿಕೆ ನೀಡಲಾಗಿದೆ ಎಂದು ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾಲಯ ಹೇಳಿದೆ.

ಸೋಮವಾರ ಬೆಳಿಗ್ಗೆ ತನ್ನ ಇತ್ತೀಚಿನ ಅಪ್ಡೇಟ್​ನಲ್ಲಿ, ಯೂನಿವರ್ಸಿಟಿಯ ಸೆಂಟರ್ ಫಾರ್ ಸಿಸ್ಟಮ್ಸ್ ಸೈನ್ಸ್ ಅಂಡ್ ಇಂಜಿನಿಯರಿಂಗ್ (CSSE) ಪ್ರಸ್ತುತ ಜಾಗತಿಕ ಕೊರೊನಾ ಪ್ರಕರಣಗಳು, ಸಾವಿನ ಸಂಖ್ಯೆ ಮತ್ತು ವ್ಯಾಕ್ಸಿನೇಷನ್ ಸಂಖ್ಯೆ ಕ್ರಮವಾಗಿ 207,137,460 ಮತ್ತು 43,61,399 ಮತ್ತು 4,58,26,58,758 ಎಂದು ಬಹಿರಂಗಪಡಿಸಿದೆ.

ಸಿಎಸ್‌ಎಸ್‌ಇ ಪ್ರಕಾರ, ಯುಎಸ್ ಕೊರೊನಾದಿಂದ ಹೆಚ್ಚು ಬಾಧಿತ ದೇಶವಾಗಿದ್ದು, ವಿಶ್ವದ ಅತಿ ಹೆಚ್ಚು ಪ್ರಕರಣಗಳು ಮತ್ತು ಸಾವುಗಳನ್ನು ವರದಿ ಮಾಡಿದೆ. 36,669,696 ಕೋವಿಡ್ ಪ್ರಕರಣಗಳು ಮತ್ತು 6,21,605 ಜನ ಮಹಾಮಾರಿಗೆ ಬಲಿಯಾಗಿದ್ದಾರೆ.

ಭಾರತ 3,21,92,576 ಪ್ರಕರಣಗಳೊಂದಿಗೆ ಎರಡನೇ ಸ್ಥಾನದಲ್ಲಿದೆ. 3 ದಶಲಕ್ಷಕ್ಕೂ ಹೆಚ್ಚು ಪ್ರಕರಣಗಳನ್ನು ಹೊಂದಿರುವ ಇತರ ದೇಶಗಳಾದ ಬ್ರೆಜಿಲ್ (2,03,64,099), ರಷ್ಯಾ (65,11,431), ಫ್ರಾನ್ಸ್ (6,471,262), ಯುಕೆ (62,97,157), ಟರ್ಕಿ (60,78,623), ಅರ್ಜೆಂಟೀನಾ (50,84,635), ಕೊಲಂಬಿಯಾ (48,67,761) , ಇಟಲಿ (44,40,669), ಇರಾನ್ (44,25,821), ಇಂಡೋನೇಷ್ಯಾ (38,54,354), ಜರ್ಮನಿ (38,28,278) ಮತ್ತು ಮೆಕ್ಸಿಕೋ (30,91,971) ಎಂದು CSSE ಅಂಕಿಅಂಶಗಳು ತೋರಿಸಿವೆ.

5,69,058 ಸಾವುಗಳೊಂದಿಗೆ ಬ್ರೆಜಿಲ್ ಎರಡನೇ ಸ್ಥಾನದಲ್ಲಿದೆ. 1,00,000 ಕ್ಕೂ ಹೆಚ್ಚು ಸಾವಿನ ಸಂಖ್ಯೆ ಹೊಂದಿರುವ ರಾಷ್ಟ್ರಗಳು ಭಾರತ (4,31,225), ಮೆಕ್ಸಿಕೋ (2,48,167), ಪೆರು (1,97,340), ರಷ್ಯಾ (1,67,595), ಯುಕೆ (1,31,269), ಇಟಲಿ (1,28,432), ಕೊಲಂಬಿಯಾ (1,23,459), ಇಂಡೋನೇಷ್ಯಾ (1,17,588), ಫ್ರಾನ್ಸ್ (1,12,705) ಮತ್ತು ಅರ್ಜೆಂಟೀನಾ (1,09,041).

ABOUT THE AUTHOR

...view details