ಕರ್ನಾಟಕ

karnataka

ETV Bharat / international

ಟ್ರಂಪ್​ ಮಗನ ಗರ್ಲ್​ಫ್ರೆಂಡ್​ಗೆ ಕೊರೊನಾ ಪಾಸಿಟಿವ್​; ವೈಟ್​ಹೌಸ್​ನಲ್ಲಿ ಆತಂಕ! - girlfriend of President Donald Trump

ಫಾಕ್ಸ್ ನ್ಯೂಸ್​ನಲ್ಲಿ ಪತ್ರಕರ್ತೆಯಾಗಿ ಕೆಲಸ ಮಾಡಿದ್ದ ಕಿಂಬರ್ಲಿ ಗಿಲ್ಫಾಯ್ಲ್, ಟ್ರಂಪ್ ಮಗನ ಜೊತೆಗೆ ಡೇಟಿಂಗ್ ಮಾಡುತ್ತಿದ್ದರು. ಯುಎಸ್ ಅಧ್ಯಕ್ಷರ ಭಾಷಣ ಕೇಳಲು ಹಾಗೂ ಪಟಾಕಿ ಸಂಭ್ರಮಾಚರಣೆ ನೋಡಲು ನೋಡಲು ದಕ್ಷಿಣ ಡಕೋಟಾದ ಮೌಂಟ್ ರಶ್ಮೋರ್​ಗೆ ಪ್ರಯಾಣಿಸಿದ್ದರು. ಈಗ ಅವರಲ್ಲಿ ಸೋಂಕು ಪತ್ತೆಯಾಗಿದ್ದು, ಆತಂಕಕ್ಕೆ ಕಾರಣವಾಗಿದೆ.

corona virus
ಕಿಂಬರ್ಲಿ ಗಿಲ್ಫಾಯ್ಲ್

By

Published : Jul 4, 2020, 12:21 PM IST

ವಾಷಿಂಗ್ಟನ್​: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹಿರಿಯ ಮಗನ ಪ್ರಿಯತಮೆಗೂ ಕೊರೊನಾ ಬಾಧಿಸಿದೆ. ಹೀಗಾಗಿ ವೈಟ್​ಹೌಸ್​ನಲ್ಲಿ ಆತಂಕ ಹೆಚ್ಚಾಗಿದೆ.

ಈ ಬಗ್ಗೆ ಯುಎಸ್ ಮಾಧ್ಯಮಗಳು ವರದಿ ಮಾಡಿದೆ. ಫಾಕ್ಸ್ ನ್ಯೂಸ್​ನಲ್ಲಿ ಪತ್ರಕರ್ತೆಯಾಗಿ ಕೆಲಸ ಮಾಡಿದ್ದ ಕಿಂಬರ್ಲಿ ಗಿಲ್ಫಾಯ್ಲ್, ಟ್ರಂಪ್ ಮಗನ ಜೊತೆಗೆ ಡೇಟಿಂಗ್ ಮಾಡುತ್ತಿದ್ದರು. ಯುಎಸ್ ಅಧ್ಯಕ್ಷರ ಭಾಷಣ ಕೇಳಲು ಹಾಗೂ ಪಟಾಕಿ ಸಂಭ್ರಮಾಚರಣೆ ನೋಡಲು ನೋಡಲು ದಕ್ಷಿಣ ಡಕೋಟಾದ ಮೌಂಟ್ ರಶ್ಮೋರ್​ಗೆ ಪ್ರಯಾಣಿಸಿದ್ದರು.

ಕಿಂಬರ್ಲಿ ಗಿಲ್ಫಾಯ್ಲ್

51ರ ಹರೆಯದ ಗಿಲ್ಫಾಯ್ಲ್, ಅಧ್ಯಕ್ಷರೊಂದಿಗೆ ನಿಕಟ ಸಂಪರ್ಕಕ್ಕೆ ಬರುವ ಕಾರಣಕ್ಕೆ ನಡೆಸುವ ದೈನಂದಿನ ಪರೀಕ್ಷೆಯಲ್ಲಿ ಅವರಿಗೆ ಸೋಂಕು ಇರುವುದು ದೃಢವಾಗಿದೆ. ಸೋಂಕು ಪತ್ತೆಯಾದ ತಕ್ಷಣವೇ ಅವರನ್ನು ಕ್ವಾರಂಟೈನ್​ ಮಾಡಲಾಗಿದೆ ಎಂದು ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ.

ಪತ್ರಿಕೆಯೊಂದಕ್ಕೆ ನೀಡಿದ ಹೇಳಿಕೆಯಲ್ಲಿ ಟ್ರಂಪ್ ಕ್ಯಾಂಪೇನ್​ನ ಹಣಕಾಸು ಸಮಿತಿಯ ಮುಖ್ಯಸ್ಥ ಸೆರ್ಗಿಯೋ ಗೋರ್ ಹೇಳುವ ಪ್ರಕಾರ, ಗಿಲ್ಫಾಯ್ಲ್ ಆರೋಗ್ಯವಾಗಿದ್ದಾರೆ. ಅವರಿಗೆ ಯಾವುದೇ ರೋಗಲಕ್ಷಣವಿಲ್ಲದ ಕಾರಣ ಪಾಸಿಟಿವ್​ ಪತ್ತೆಯಾಗಿರುವುದನ್ನು ಖಚಿತಪಡಿಸಿಕೊಳ್ಳಲು ಮತ್ತೆ ಟೆಸ್ಟ್​ ನಡೆಸಲಾಗುವುದು ಎಂದು ತಿಳಿಸಿದ್ದಾರೆ.

ಟ್ರಂಪ್​ ಹಿರಿಯ ಪುತ್ರ ಡೊನಾಲ್ಡ್ ಜಾನ್ ಟ್ರಂಪ್ ಜೆಆರ್​ ಮತ್ತು ಕಿಂಬರ್ಲಿ ಗಿಲ್ಫಾಯ್ಲ್

ಇನ್ನೊಂದೆಡೆ, ಟ್ರಂಪ್ ಮಗನ ಪರೀಕ್ಷೆಯ ವರದಿ ನೆಗೆಟಿವ್​ ಬಂದಿದ್ದು, ಮುಂಜಾಗ್ರತಾ ಕ್ರಮವಾಗಿ ಅವರನ್ನೂ ಕ್ವಾರಂಟೈನ್​ ಮಾಡಲಾಗಿದೆ. ಅವರ ಎಲ್ಲಾ ಸಾರ್ವಜನಿಕ ಕಾರ್ಯಕ್ರಮಗಳನ್ನು ರದ್ದುಗೊಳಿಸಲಾಗಿದೆ.

ABOUT THE AUTHOR

...view details