ಕರ್ನಾಟಕ

karnataka

ETV Bharat / international

ಗಾಂಧಿಯವರ ಬರಹಗಳು ನನ್ನ ಆಳವಾದ ಯೋಚನೆಗೆ ಧ್ವನಿ ನೀಡಿದವು: ಬರಾಕ್ ಒಬಾಮ - ಒಬಾಮಾ ಭಾರತ ಭೇಟಿ

ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮ ತಮ್ಮ ಕೊನೆಯ ಅಧಿಕಾರಾವಧಿಯಲ್ಲಿ ಭಾರತಕ್ಕೆ ಎರಡೆರಡು ಬಾರಿ ಭೇಟಿ ನೀಡಿದ್ದರು. ಈ ಕುರಿತಂತೆ ಅವರು ತಮ್ಮ ಆತ್ಮ ಚರಿತ್ರೆ 'A Promised Land'ಯಲ್ಲಿ ಬರೆದುಕೊಂಡಿದ್ದು, ಮಹಾತ್ಮ ಗಾಂಧಿಯ ಕುರಿತಂತೆಯೂ ಉಲ್ಲೇಖಿಸಿದ್ದಾರೆ.

Barack Obama
ಬರಾಕ್ ಒಬಾಮ

By

Published : Nov 17, 2020, 11:16 AM IST

ವಾಷಿಂಗ್ಟನ್​:ಸದ್ಯ ಅಮೆರಿಕ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಬರೆದಿರುವ ಆತ್ಮಚರಿತ್ರೆ ‘ಎ ಪ್ರಾಮಿಸ್ಡ್ ಲ್ಯಾಂಡ್’ ಭಾರತದಲ್ಲಿಯೂ ಸುದ್ದಿಯಲ್ಲಿದೆ. ಒಬಾಮಾ ತಮ್ಮ ಪುಸ್ತಕದಲ್ಲಿ ಭಾರತ ಹಾಗೂ ಭಾರತವನ್ನಾಳಿದ, ಆಳುತ್ತಿರುವ ಕೆಲ ನಾಯಕರ ಹೆಸರನ್ನೂ ಅಲ್ಲಿ ಪ್ರಸ್ತಾಪಿಸಿದ್ದಾರೆ.

ಅಲ್ಲದೆ ಒಬಾಮಾ ಭಾರತ ಭೇಟಿಯ ಕುರಿತಾಗಿಯೂ ಉಲ್ಲೇಖಿಸಿದ್ದಾರೆ. ಆದರೆ ಎಲ್ಲದಕ್ಕೂ ಮುಖ್ಯವಾಗಿ ಮಹಾತ್ಮ ಗಾಂಧಿ ಅವರ ಕುರಿತಂತೆ ಒಬಾಮಾ ಉಲ್ಲೇಖಿಸಿದ್ದು, ಗಾಂಧಿಯವರ ಬರಹಗಳು ನನ್ನ ಕೆಲವು ಆಳವಾದ ಪ್ರವೃತ್ತಿಗೆ ಧ್ವನಿ ನೀಡಿದವು ಎಂದು ತಿಳಿಸಿದ್ದಾರೆ.

‘ಅಲ್ಲದೆ ಬ್ರಿಟಿಷರ ವಿರುದ್ಧ ಅವರ ಯಶಸ್ವಿ ಅಹಿಂಸಾತ್ಮಕ ಅಭಿಯಾನವು ಕೆಳಮಟ್ಟಕ್ಕೆ ತಳ್ಳಲ್ಪಟ್ಟ ಸಮುದಾಯಗಳಿಗೆ ಧ್ವನಿಯಾಯಿತು’ ಎಂದಿದ್ದಾರೆ.

‘ಅದೆಲ್ಲಕ್ಕಿಂತ ಹೆಚ್ಚಾಗಿ ಭಾರತದೊಂದಿಗಿನ ನನ್ನ ಆಲೋಚನೆಯೂ ಗಾಂಧಿಯವರೊಂದಿಗೆ ಉತ್ತಮ ಬಾಂಧವ್ಯ ಹೊಂದಿತ್ತು. ಅಬ್ರಾಹಂ ಲಿಂಕನ್​, ಮಾರ್ಟಿನ್ ಲೂಥರ್, ಮತ್ತು ನೆಲ್ಸನ್ ಮಂಡೇಲಾ ಅವರೊಂದಿಗೆ ಗಾಂಧಿಯವರ ಆಲೋಚನೆಗಳೂ ನನ್ನ ಮೇಲೆ ಪ್ರಭಾವ ಬೀರಿವೆ. ಯುವಕನಾಗಿದ್ದಾಗ ನಾನು ಅವರ ಬರಹಗಳನ್ನು ಅಧ್ಯಯನ ಮಾಡಿದ್ದೇನೆ’ ಎಂದು ಒಬಾಮಾ ಬರೆದುಕೊಂಡಿದ್ದಾರೆ.

ಅವರ ಅತ್ಯಾಗ್ರಹ ಎಂಬ ಕಲ್ಪನೆ, ಸತ್ಯದ ಮೇಲಿನ ಭಕ್ತಿ, ಅಹಿಂಸಾತ್ಮಕ ಪ್ರತಿರೋಧದ ಶಕ್ತಿ, ಧರ್ಮಗಳ ಮೇಲಿನ ಅವರ ಸಮಾನ ಏಕತೆ, ಸಮಾಜದೊಂದಿಗಿನ ಬಾಧ್ಯತೆ, ರಾಜಕೀಯ, ಆರ್ಥಿಕ ಮತ್ತು ಸಾಮಾಜಿಕ ವ್ಯವಸ್ಥೆಗಳ ಮೂಲಕ ಎಲ್ಲರಿಗೂ ಸಮಾನ ಮೌಲ್ಯ ಹಾಗೂ ಘನತೆ ಕಲ್ಪಿಸುವ ಕಲ್ಪನೆ. ಇವರ ಪ್ರತಿಯೊಂದು ಆಲೋಚನೆಯೂ ನನ್ನೊಂದಿಗೆ ಅನುಕರಣಿತಗೊಂಡವು. ಅವರು ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ಜೈಲಿಗೆ ಹೋದರು. ಅವರ ಜನರಿಗಾಗಿ ಬದುಕಿನುದ್ದಕ್ಕೂ ಹೋರಾಟದ ಹಾದಿಗೆ ಇಳಿದಿದ್ದರು ಎಂದಿದ್ದಾರೆ.

‘1915ರಲ್ಲಿ ಆರಂಭಗೊಂಡು ಸುಮಾರು 30 ವರ್ಷಗಳ ಕಾಲ ಬ್ರಿಟಿಷರ ವಿರುದ್ಧ ಅವರು ಕೈಗೊಂಡ ಅಹಿಂಸಾತ್ಮಕ ಚಳವಳಿಯು ಕೇವಲ ಭಾರತಕ್ಕೆ ಸ್ವಾತಂತ್ರ್ಯ ತಂದುಕೊಂಡುವುದು ಮಾತ್ರವಲ್ಲದೆ, ಜಗತ್ತಿನಾದ್ಯಂತ ಇದ್ದ ನೈತಿಕ ಪ್ರತಿಪಾದನೆಗಳನ್ನು ಹೊರತಂದಿತು’ ಎಂದು ಬಣ್ಣಿಸಿದ್ದಾರೆ.

ಇದಲ್ಲದೆ ವಿಶ್ವದ ಮೂಲೆಯಲ್ಲೂ ತುಳಿತಕ್ಕೊಳಗಾದ ಸಮುದಾಯಕ್ಕೆ ಸ್ವಾತಂತ್ರ್ಯದ ದಾರಿ ದೀಪವಾಯಿತು. ಜಿಮ್​​ ಕ್ರೌ ಸೌತ್​ನಲ್ಲಿರುವ ಕಪ್ಪು ಅಮರಿಕನ್ನರ ಹಾಗೂ ಸಮಾಜದಿಂದ ಹೊರಹಾಕಲ್ಪಟ್ಟಿದ್ದ ಹಲವು ಗುಂಪುಗಳಿಗೆ ಇವರು ದಾರಿದೀಪವಾದರು ಎಂದು ಬರೆದುಕೊಂಡಿದ್ದಾರೆ.

ನವೆಂಬರ್ 2010 ರಲ್ಲಿ ಭಾರತಕ್ಕೆ ತಮ್ಮ ಮೊದಲ ಭೇಟಿಯನ್ನು ನೆನಪಿಸಿಕೊಂಡಿರುವ ಒಬಾಮಾ, ‘ನಾನು ಹಾಗೂ ಮಿಚೆಲ್​​, ಗಾಂಧಿ ಬಹುಕಾಲದಿಂದ ವಾಸವಿದ್ದ ಮುಂಬೈನ ಮಣಿ ಭವನಕ್ಕೆ ಭೇಟಿ ನೀಡಿದ್ದೆವು. ಇದೇ ವೇಳೆ ಮಾರ್ಟಿನ್ ಲೂಥರ್ ಕಿಂಗ್ 1959ರಲ್ಲಿ ಸಹಿ ಹಾಕಿದ ಅತಿಥಿ ಪುಸ್ತಕವನ್ನು ಪ್ರವಾಸಿ ಗೈಡ್ ಒಬ್ಬರು ನಮಗೆ ತೋರಿಸಿದ್ದರು’ ಎಂದಿದ್ದಾರೆ.

ABOUT THE AUTHOR

...view details