ನ್ಯೂಯಾರ್ಕ್:2021ರ ಬೇಸಿಗೆಯ ಸಮಯದಲ್ಲಿ ಕೊರೊನಾ ಲಸಿಕೆ ಯುಎಸ್ ಜನಸಂಖ್ಯೆಯ ಬಹುಪಾಲು ಜನರಿಗೆ ಲಭ್ಯವಿರುವುದಿಲ್ಲ ಎಂದು ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರಗಳ ನಿರ್ದೇಶಕ (ಸಿಡಿಸಿ) ಡಾ. ರಾಬರ್ಟ್ ರೆಡ್ಫೀಲ್ಡ್ ತಿಳಿಸಿದರು.
ಈ ಸಮಯದಲ್ಲಿ ಶೇಕಡಾ 50ರಷ್ಟು ಅಮೆರಿಕನ್ನರಿಗೆ ಮಾತ್ರ ಲಸಿಕೆ ನೀಡಲಾಗುತ್ತದೆ ಎಂದು ತಿಳಿದು ಬಂದಿದೆ.
ಕೋವಿಡ್-19 ಲಸಿಕೆ ಸುರಕ್ಷಿತ ಮತ್ತು ಪರಿಣಾಮಕಾರಿ ಎಂದು ಸಾಬೀತಾದ ಬಳಿಕ ಎಲ್ಲಾ ಅಮೆರಿಕನ್ನರಿಗೆ ಉಚಿತವಾಗಿ ಲಭ್ಯವಾಗುವಂತೆ ಮಾಡುವ ಯೋಜನೆಯನ್ನು ಯುಎಸ್ ಸರ್ಕಾರ ಹಮ್ಮಿಕೊಂಡಿದೆ.
ಯುಎಸ್ ಸರ್ಕಾರದಿಂದ ಬಂದಿರುವ 57 ಪುಟಗಳ "ಪ್ಲೇಬುಕ್" ಈ ಯೋಜನೆಯ ಸಮಗ್ರ ವಿಚಾರವನ್ನು ವಿವರಿಸುತ್ತದೆ.
"ಯುನೈಟೆಡ್ ಸ್ಟೇಟ್ಸ್ನಲ್ಲಿ ಲಸಿಕೆ ತೆಗೆದುಕೊಳ್ಳಲು ಬಯಸುವ ಎಲ್ಲಾ ಜನರಿಗೆ ಉಚಿತವಾಗಿ ಕೋವಿಡ್-19 ಲಸಿಕೆ ನೀಡುವುದು ಯುಎಸ್ ಸರ್ಕಾರದ ಗುರಿಯಾಗಿದೆ" ಎಂದು ಸರ್ಕಾರ ತಿಳಿಸಿದೆ.