ಕ್ಯಾಲಿಫೋರ್ನಿಯಾ:ಹೆಲಿಕಾಪ್ಟರ್ ಅಪಘಾತದಲ್ಲಿ ನಾಲ್ವರು ಸಾವನ್ನಪ್ಪಿರುವ ಘಟನೆ ಕ್ಯಾಲಿಫೋರ್ನಿಯಾದ ಕೊಲುಸಾ ಕೌಂಟಿಯಲ್ಲಿ ನಡೆದಿದೆ. ಈ ಕುರಿತಂತೆ ಸ್ಥಳೀಯ ಜಿಲ್ಲಾಧಿಕಾರಿಗಳ ಇಲಾಖೆ ಮಾಹಿತಿ ನೀಡಿದೆ.
ಭಾನುವಾರ ಮಧ್ಯಾಹ್ನ 1:15 ರ ಸುಮಾರಿಗೆ ರಾಬಿನ್ಸನ್ ಆರ್ 66 ಹೆಲಿಕಾಪ್ಟರ್ ಅಪಘಾತ ಸಂಭವಿಸಿದೆ. ಈ ದುರ್ಘಟನೆಯಲ್ಲಿ ವಿಮಾನದಲ್ಲಿದ್ದ ಎಲ್ಲಾ ನಾಲ್ಕು ಜನರು ಅಸುನೀಗಿದ್ದಾರೆ ಎಂದು ಕೊಲುಸಾ ಕೌಂಟಿ ಶೆರಿಫ್ ವಿಭಾಗವು ದೃಢಪಡಿಸಿದೆ.