ಕರ್ನಾಟಕ

karnataka

ETV Bharat / international

ಅಮೆರಿಕದ ಮಾಜಿ ಅಧ್ಯಕ್ಷ ಒಬಾಮಗೆ ಕೋವಿಡ್ ಪಾಸಿಟಿವ್​: ಬೇಗ ಗುಣಮುಖರಾಗಲಿ ಎಂದು ಪ್ರಧಾನಿ ಮೋದಿ ಟ್ವೀಟ್ - ಒಬಾಮ ಬೇಗ ಗುಣಮುಖರಾಗಲಿ ಎಂದು ಪ್ರಧಾನಿ ಮೋದಿ ಟ್ವೀಟ್

ಕೋವಿಡ್​ ಸೋಂಕಿಗೆ ಒಳಗಾಗಿರುವ ಬರಾಕ್​ ಒಮಾಮ ಅವರು ಬೇಗ ಗುಣಮುಖರಾಗಲಿ ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿ ಹಾರೈಸಿದ್ದಾರೆ.

Barack Obama
Barack Obama

By

Published : Mar 14, 2022, 10:22 AM IST

ವಾಷಿಂಗ್ಟನ್(ಅಮೆರಿಕ): ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮ ಅವರಿಗೆ ಕೋವಿಡ್-19 ಪಾಸಿಟಿವ್ ದೃಢಪಟ್ಟಿದೆ. ಒಬಾಮ ಪತ್ನಿ ಮಿಚೆಲ್ ಒಬಾಮಾ ಅವರಿಗೆ ಕೋವಿಡ್​ ನೆಗೆಟಿವ್​ ಎಂದು ವರದಿಯಾಗಿದೆ.

ಕೋವಿಡ್​ ಪಾಸಿಟಿವ್​ ಕಂಡು ಬಂದ ಬಗ್ಗೆ ಸ್ವತಃ ಬರಾಕ್​ ಒಬಾಮ ಟ್ವೀಟ್​ ಮೂಲಕ ಮಾಹಿತಿ ನೀಡಿದ್ದಾರೆ. ನನಗೆ ಕೋವಿಡ್​ ಪಾಸಿಟಿವ್ ದೃಢಪಟ್ಟಿದೆ. ಕಳೆದ ಎರಡು ದಿನಗಳಿಂದ ಗಂಟಲು ಸಮಸ್ಯೆ ಇತ್ತು. ಆದರೆ, ನಾನು ಕ್ಷೇಮವಾಗಿದ್ದೇನೆ. ನಾನು ಮತ್ತು ಮಿಚೆಲ್ ಲಸಿಕೆ ಪಡೆದಿದ್ದೇವೆ. ಮಿಚೆಲ್​ಗೆ ನೆಗೆಟಿವ್​ ಇದೆ ಎಂದು ಒಬಾಮ ಟ್ವೀಟ್ ಮಾಡಿದ್ದಾರೆ.

ಅಲ್ಲದೇ, ಕೋವಿಡ್​ ಪ್ರಕರಣಗಳು ಕಡಿಮೆಯಾಗಿದ್ದರೂ, ಲಸಿಕೆ ಹಾಕಿಸಿಕೊಳ್ಳದವರು ಮರೆಯದೆ ಲಸಿಕೆ ಹಾಕಿಸಿಕೊಳ್ಳಬೇಕೆಂದು ಒಬಾಮ ಹೇಳಿದ್ದಾರೆ. ಇತ್ತ, ಒಮಾಮ ಕೋವಿಡ್​ನಿಂದ ಗುಣಮುಖರಾಗಲಿ ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.

ಕೋವಿಡ್​ನಿಂದ ಬರಾಕ್ ಒಬಾಮ ಬೇಗ ಚೇತರಿಕೆಕೊಳ್ಳಬೇಕು ಮತ್ತು ಮತ್ತು ನಿಮ್ಮ ಕುಟುಂಬದ ಉತ್ತಮ ಆರೋಗ್ಯ ಮತ್ತು ಯೋಗಕ್ಷೇಮಕ್ಕಾಗಿ ನಾನು ಶುಭ ಕೋರುತ್ತೇನೆ ಎಂದು ಪ್ರಧಾನಿ ಮೋದಿ ತಮ್ಮ ಟ್ವೀಟ್​ನಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ:ಭೀಕರ ಅಪಘಾತ: ಕೆನಡಾದಲ್ಲಿ ಐವರು ಭಾರತೀಯ ವಿದ್ಯಾರ್ಥಿಗಳ ದುರ್ಮರಣ

ABOUT THE AUTHOR

...view details