ಕರ್ನಾಟಕ

karnataka

ETV Bharat / international

ಮಾಜಿ ಸಂಸದ ಹಾಪ್ಕಿನ್ಸ್ ನಿಧನ - ಲ್ಯಾರಿ ಹಾಪ್ಕಿನ್ಸ್ ನಿಧನ

ಅಮೆರಿಕ ಸಂಸತ್​​ನ ಮಾಜಿ ಸಂಸದ ಲ್ಯಾರಿ ಹಾಪ್ಕಿನ್ಸ್(Larry Hopkins) ಇಂದು (88) ನಿಧನರಾಗಿದ್ದಾರೆ. ಹಾಪ್ಕಿನ್ಸ್ 1978ರಲ್ಲಿ ಕೆಂಟುಕಿಯ(Kentucky) ಯಿಂದ ಅಮೆರಿಕ ಸಂಸತ್​​ನ ಕೆಳಮನೆ ಹೌಸ್​ ಆಫ್​​ ರೆಪ್ರೆಸೆಂಟೆಟಿವ್​​ ಆಗಿ ಸೇವೆ ಸಲ್ಲಿಸಿದ್ದರು.

Larry Hopkins
ಲ್ಯಾರಿ ಹಾಪ್ಕಿನ್ಸ್ ನಿಧನ

By

Published : Nov 18, 2021, 11:35 AM IST

ಲೆಕ್ಸಿಂಗ್ಟನ್ (ಅಮೆರಿಕ): ಒಂದು ದಶಕಕ್ಕೂ ಹೆಚ್ಚು ಕಾಲ ಸೆಂಟ್ರಲ್ ಕೆಂಟುಕಿಯನ್ನು(central Kentucky) ಪ್ರತಿನಿಸಿದ್ದ, ಅಮೆರಿಕ ಸಂಸತ್​​ನ ಕೆಳಮನೆ ಹೌಸ್​ ಆಫ್​​ ರೆಪ್ರೆಸೆಂಟೆಟಿವ್​ಆಗಿ ಸೇವೆ ಸಲ್ಲಿಸಿದ್ದ ಮಾಜಿ ಸಂಸದ ಲ್ಯಾರಿ ಹಾಪ್ಕಿನ್ಸ್ (Larry Hopkins) ಇಂದು ನಿಧನರಾಗಿದ್ದಾರೆ. ಅವರಿಗೆ 88 ವರ್ಷ ವಯಸ್ಸಾಗಿತ್ತು.

ಹಾಪ್ಕಿನ್ಸ್ 1978ರಲ್ಲಿ ಕೆಂಟುಕಿಯ ಸಂಸದರಾಗಿ 1993 ರವರೆಗೆ ಸೇವೆ ಸಲ್ಲಿಸಿದ್ದರು. 1991ರಲ್ಲಿ ಗವರ್ನರ್‌ಗೆ ರಿಪಬ್ಲಿಕನ್ ಅಭ್ಯರ್ಥಿಯಾಗಿದ್ದರು. ಹಾಪ್ಕಿನ್ಸ್ ಅವರು ರಾಜ್ಯ ಮತ್ತು ಫೆಡರಲ್ ಮಟ್ಟದಲ್ಲಿ ಸೇವೆ ಸಲ್ಲಿಸಿದ್ದರಿಂದ ಕೆಂಟುಕಿಯ ಬಗ್ಗೆ ಅಪಾರ ಕಾಳಜಿ ವಹಿಸಿದ್ದರು ಎಂದು ಯುಎಸ್ ಸೆನೆಟ್ ಮೆಜಾರಿಟಿ ಲೀಡರ್ ಮಿಚ್ ಮೆಕ್‌ಕಾನ್ನೆಲ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಹಾಪ್ಕಿನ್ಸ್ ಮಿಲಿಟರಿಯನ್ನು ಸುಧಾರಿಸಲು ಮತ್ತು ಆಧುನೀಕರಿಸಲು ಹೌಸ್ ಆರ್ಮ್ಡ್ ಸರ್ವಿಸಸ್ ಕಮಿಟಿಯಲ್ಲಿ ಉನ್ನತ ರಿಪಬ್ಲಿಕನ್ ಆಗಿದ್ದರು. ಅಲ್ಲದೇ ರೈತರ ಜೀವನ ಸುಧಾರಿಸಲು ಸಂಸದರಾಗಿ ಕೆಲಸ ಮಾಡಿದ್ದರು. ಫ್ರಾಂಕ್‌ಫರ್ಟ್​ ಮತ್ತು ವಾಷಿಂಗ್ಟನ್ ಶಾಸಕರಾಗಿಯೂ ಅವರು ಸೇವೆ ಸಲ್ಲಿಸಿದ್ದರು.

ಇದನ್ನೂ ಓದಿ:ಗಡಿಗೆ ಬಂದ ಪಾಕಿಸ್ತಾನದ ಡ್ರೋನ್‌: ಗುಂಡಿನ ದಾಳಿ ನಡೆಸಿ ಹಿಮ್ಮೆಟ್ಟಿಸಿದ ಭದ್ರತಾ ಪಡೆ

ABOUT THE AUTHOR

...view details