ಕರ್ನಾಟಕ

karnataka

ವಲಸಿಗರನ್ನು ಬಲವಂತವಾಗಿ ಹಿಂದಿರುಗಿಸುವುದನ್ನು ನಿಲ್ಲಿಸಬೇಕು : ವಿಶ್ವಸಂಸ್ಥೆ​

ವಲಸಿಗರನ್ನು ಬಲವಂತವಾಗಿ ಅವರವರ ಊರುಗಳಿಗೆ ಹಿಂದಿರುಗಿಸುವುದರಿಂದ ವಲಸಿಗರು, ಸಾರ್ವಜನಿಕರು, ಅಧಿಕಾರಿಗಳು, ಆರೋಗ್ಯ ಕಾರ್ಯಕರ್ತರು, ಸಾಮಾಜಿಕ ಕಾರ್ಯಕರ್ತರು ಸೇರಿದಂತೆ ಅನೇಕರ ಮೇಲೆ ಗಂಭೀರವಾದ ಪರಿಣಾಮ ಬೀರುತ್ತದೆ ಎಂದು ಯುನೈಟೆಡ್ ನೇಷನ್ಸ್ ನೆಟ್​ವರ್ಕ್​ ತಿಳಿಸಿದೆ.

By

Published : May 15, 2020, 9:07 PM IST

Published : May 15, 2020, 9:07 PM IST

Updated : May 15, 2020, 11:55 PM IST

ಕೊರೊನಾ ವೈರಸ್ ನ್ಯೂಸ್
ಕೊರೊನಾ ವೈರಸ್ ನ್ಯೂಸ್

ಹೈದರಾಬಾದ್: ಕೊರೊನಾ ಭೀತಿಯ ನಡುವೆಯೂ ವಲಸೆ ಕಾರ್ಮಿಕರನ್ನು ಬಲವಂತವಾಗಿ ಹಿಂದಿರುಗಿಸುವುದನ್ನು ನಿಲ್ಲಿಸಬೇಕು. ಅವರ ಆರೋಗ್ಯ ಮತ್ತು ಸಮುದಾಯಗಳನ್ನು ರಕ್ಷಿಸಲು, ಎಲ್ಲ ವಲಸಿಗರ ಮಾನವ ಹಕ್ಕುಗಳನ್ನು ಎತ್ತಿ ಹಿಡಿಯಬೇಕೆಂದು ಯುನೈಟೆಡ್ ನೇಷನ್ಸ್ ನೆಟ್​ವರ್ಕ್​ ರಾಜ್ಯಗಳಿಗೆ ಕರೆ ನೀಡಿದೆ.

ಕೋವಿಡ್​-19ರ ಪ್ರಸರಣವನ್ನು ತಡೆಗಟ್ಟಲು ತಾತ್ಕಾಲಿಕವಾಗಿ ಗಡಿಗಳಲ್ಲಿ ನಿರ್ಬಂಧ ಹೇರುವುದು ಅಗತ್ಯ. ಸಾರ್ವಜನಿಕರ ಆರೋಗ್ಯದ ದೃಷ್ಟಿಯಿಂದ ಎಲ್ಲ ಪ್ರೊಟೋಕಾಲ್​ಗಳನ್ನು ಪಾಲಿಸಬೇಕು ಎಂದು ಹೇಳಿದೆ.

ಪ್ರಸಕ್ತ ಸಾಂಕ್ರಾಮಿಕದ ಪರಿಣಾಮಗಳನ್ನು ವಿಸ್ತಾರವಾಗಿ ವಿವರಿಸುವ ಯುನೈಟೆಡ್ ನೇಷನ್ಸ್ ನೆಟ್​ವರ್ಕ್, ವಲಸಿಗರನ್ನು ಬಲವಂತವಾಗಿ ಅವರವರ ಊರುಗಳಿಗೆ ಹಿಂದಿರುಗಿಸುವುದರಿಂದ ವಲಸಿಗರು, ಸಾರ್ವಜನಿಕರು, ಅಧಿಕಾರಿಗಳು, ಆರೋಗ್ಯ ಕಾರ್ಯಕರ್ತರು, ಸಾಮಾಜಿಕ ಕಾರ್ಯಕರ್ತರು ಸೇರಿದಂತೆ ಅನೇಕರ ಮೇಲೆ ಗಂಭೀರವಾದ ಪರಿಣಾಮ ಬೀರುತ್ತದೆ ಎಂದು ತಿಳಿಸಿದೆ.

ಆದ್ದರಿಂದ ಕಾರ್ಮಿಕರನ್ನು ಬಲವಂತವಾಗಿ ಹಿಂದಿರುಗಿಸುವುದಕ್ಕೆ ತಾತ್ಕಾಲಿಕವಾಗಿ ತಡೆಯೊಡ್ಡಬೇಕು. ವೀಸಾ ಮತ್ತು ಕೆಲಸದ ಪರವಾನಗಿ ವಿಸ್ತರಣೆಗಳು ಸೇರಿದಂತೆ ಅಗತ್ಯ ಸವಲತ್ತುಗಳನ್ನ ಒದಗಿಸಿ, ಗಡಿಪಾರು ಮಾಡುವುದನ್ನು ನಿಲ್ಲಿಸಬೇಕು ಎಂದಿದೆ.

Last Updated : May 15, 2020, 11:55 PM IST

ABOUT THE AUTHOR

...view details