ನ್ಯೂಯಾರ್ಕ್ (ಅಮೆರಿಕ):ರಷ್ಯಾ ದಾಳಿಯಿಂದ ನಲುಕಿರುವ ಉಕ್ರೇನ್ ಪರವಾಗಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಭಾರತ ಮತ ಹಾಕದ ವಿಷಯವು ಈಗ ಚರ್ಚಾ ವಸ್ತುವಾಗಿದ್ದು, ಮತದಿಂದ ದೂರಿದ ಉಳಿದ ಕಾರಣಕ್ಕೆ ಅಮೆರಿಕವು ಭಾರತದ ಜತೆಗಿನ ದ್ವಿಪಕ್ಷೀಯ ಸಂಬಂಧಕ್ಕೆ ಧಕ್ಕೆ ತಂದುಕೊಳ್ಳುವುದು ಮೂರ್ಖತನವಾಗಲಿದೆ ಎಂದು ಅದೇ ದೇಶದ ರಿಪಬ್ಲಿಕನ್ ಸೆನೆಟರ್ ಎಚ್ಚರಿಸಿದ್ದಾರೆ.
ಬುಧವಾರ ನಡೆದ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಉಕ್ರೇನ್ ಮೇಲೆ ರಷ್ಯಾ ದಾಳಿ ಖಂಡಿಸಿ ನಿರ್ಣಯ ಅಂಗೀಕರಿಸಲಾಗಿತ್ತು. ಈ ವೇಳೆ ಮತದಾನದಿಂದ ಭಾರತ ದೂರ ಉಳಿದುಕೊಂಡು ನಿರ್ಲಪ್ತತೆ ಕಾಯ್ದುಕೊಂಡಿದೆ. ಇದರ ಬೆನ್ನಲೆ ಭಾರತದೊಂದಿಗಿನ ಸಂಬಂಧ ಕುರಿತು ಅಮೆರಿಕದ ಸೆನೆಟರ್ ಪೆನಾಲ್ ಸಭೆ ನಡೆದಿದೆ. ಇದರಲ್ಲಿ ಇಂಡಿಯಾನಾ ಸೆನೆಟರ್ ಟಾಡ್ ಯಂಗ್ ಮಾತನಾಡಿ, ಉಕ್ರೇನ್ ವಿಷಯವನ್ನು ಮುಂದಿಟ್ಟುಕೊಂಡು ಅಮೆರಿಕವು ಭಾರತದ ದ್ವಿಪಕ್ಷೀಯ ಬಾಂಧವ್ಯಕ್ಕೆ ಧಕ್ಕೆ ತಂದರೆ, ಅದು ಮೂರ್ಖತನವಾಗಿದೆ. ಹೀಗಾಗಿ ದೂರದೃಷ್ಟಿಯನ್ನು ಹೊಂದಬೇಕಾಗುತ್ತದೆ ಎಂದು ಹೇಳಿದ್ದಾರೆ.
ಟಾಡ್ ಯಂಗ್ ಮಾತ್ರವಲ್ಲದೇ ಇತರ ಸೆನೆಟರ್ಗಳು ಕೂಡ ಭಾರತದ ಆರ್ಥಿಕತೆ ಮತ್ತು ಜನಸಂಖ್ಯೆಯ ಗಾತ್ರ ಹಾಗೂ ಅದರ ಕಾರ್ಯತಂತ್ರದ ಮಹತ್ವವನ್ನು ಅರಿತುಕೊಳ್ಳಬೇಕೆಂದು ಅಮೆರಿಕಕ್ಕೆ ಒತ್ತಿ ಹೇಳಿದ್ದಾರೆ. ದಕ್ಷಿಣ ಏಷ್ಯಾದ ಸಹಾಯಕ ಕಾರ್ಯದರ್ಶಿ ಡೊನಾಲ್ಡ್ ಲು ಕೂಡ ಉಕ್ರೇನ್ನಲ್ಲಿ ಭಾರತದ ಮಹತ್ವದ ಹೆಚ್ಚುತ್ತಿದೆ. ಮೇಲಾಗಿ ಅಲ್ಲಿ ಭಾರತದ ವಿದ್ಯಾರ್ಥಿ ಸಾವನ್ನಪ್ಪಿದ ನಂತರ ರಷ್ಯಾದ ವಿರುದ್ಧ ಭಾರತದಲ್ಲಿ ದೊಡ್ಡ ಮಟ್ಟದಲ್ಲಿ ನಕಾರಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ ಎಂದು ಸಭೆಯ ಗಮನ ಸೆಳೆದಿದ್ದಾರೆ.