ಕರ್ನಾಟಕ

karnataka

ETV Bharat / international

ಜಾರ್ಜ್​ ಫ್ಲಾಯ್ಡ್​ನ ಮರಣೋತ್ತರ ಪರೀಕ್ಷೆಯ ವರದಿಯಲ್ಲಿದೆ ರೋಚಕ ಮಾಹಿತಿ! - ಮಿನ್ನಿಯಾಪೋಲಿಸ್

ಕಪ್ಪು ವರ್ಣಿಯ ಜಾರ್ಜ್​ ಫ್ಲಾಯ್ಡ್ ಅವರ ಮರಣೋತ್ತರ ಪರೀಕ್ಷೆಯ ಸಂಪೂರ್ಣ ವರದಿ ಬಿಡುಗಡೆ ಮಾಡಲಾಗಿದ್ದು, ಫ್ಲಾಯ್ಡ್ ಮೇಲೆ ಪೊಲೀಸರು ಹಲ್ಲೆ ನಡೆಸುವ ವೇಳೆ ಆತನಿಗೆ ಹೃದಯಾಘಾತವಾಗಿದೆ ಎಂದೂ ಹಾಗೂ ಏಪ್ರಿಲ್​ ತಿಂಗಳಲ್ಲೇ ಫ್ಲಾಯ್ಡ್​​ ಕೊರೊನಾ ಸೋಂಕಿಗೆ ಒಳಗಾಗಿದ್ದನು ಎಂಬ ಮಾಹಿತಿಯನ್ನು ಈ ವರದಿ ನೀಡುತ್ತದೆ.

Floyd
ಜಾರ್ಜ್​ ಫ್ಲಾಯ್ಡ್

By

Published : Jun 4, 2020, 11:59 AM IST

ಮಿನ್ನಿಯಾಪೋಲಿಸ್ (ಅಮೆರಿಕ): ಮಿನ್ನಿಯಾಪೋಲಿಸ್​ನ ಅಧಿಕಾರಿ ನೀಡಿದ ಹಿಂಸೆಯಿಂದಾಗಿ ಮೃತಪಟ್ಟಿದ್ದ ಕಪ್ಪುವರ್ಣಿಯ ಜಾರ್ಜ್​ ಫ್ಲಾಯ್ಡ್ ಅವರ ಮರಣೋತ್ತರ ಪರೀಕ್ಷೆಯ ಸಂಪೂರ್ಣ ವರದಿ ಬುಧವಾರ ಬಿಡುಗಡೆ ಮಾಡಲಾಗಿದ್ದು, ರೋಚಕ ಮಾಹಿತಿಗಳು ಹೊರಬಂದಿವೆ.

ಫ್ಲಾಯ್ಡ್ ಅವರ ಕುಟುಂಬದ ಅನುಮತಿ ಪಡೆದು, ಹೆನ್ನೆಪಿನ್ ಕೌಂಟಿಯ ವೈದ್ಯಕೀಯ ಪರೀಕ್ಷಕರ ಕಚೇರಿ 20 ಪುಟಗಳ ವರದಿ ಬಿಡುಗಡೆ ಮಾಡಿದೆ. ಫ್ಲಾಯ್ಡ್ ಮೇಲೆ ಪೊಲೀಸರು ಹಲ್ಲೆ ನಡೆಸುವ ವೇಳೆ ಆತನಿಗೆ ಹೃದಯಾಘಾತವಾಗಿದೆ ಎಂದೂ ಹಾಗೂ ಏಪ್ರಿಲ್​ ತಿಂಗಳಲ್ಲೇ ಫ್ಲಾಯ್ಡ್​​ಗೆ ಕೊರೊನಾ ಸೋಂಕು ತಗುಲಿತ್ತು. ಆದರೆ ರೋಗದ ಲಕ್ಷಣಗಳು ಕಂಡುಬಂದಿರಲಿಲ್ಲ ಎಂಬ ಮಾಹಿತಿಯನ್ನು ಈ ವರದಿ ನೀಡುತ್ತದೆ.

ಕಪ್ಪು ಅಮೆರಿಕನ್ನರ ಮೇಲಿನ ಜನಾಂಗೀಯ ದಾಳಿಗೆ ಫ್ಲಾಯ್ಡ್ ಹಿಂಸಾತ್ಮಕ ಸಾವು ಸಾಕ್ಷಿಯಾಗಿದ್ದು, ಸಾವಿಗೆ ನ್ಯಾಯ ಒದಗಿಸುವಂತೆ ಆಗ್ರಹಿಸಿ ಕೊರೊನಾ ಭೀತಿಯ ನಡುವೆಯೂ ಅಮೆರಿಕದಾದ್ಯಂತ ಪ್ರತಿಭಟನೆ ಭುಗಿಲೆದ್ದಿದೆ.

ABOUT THE AUTHOR

...view details