ಬ್ರೆಸಿಲಿಯಾ (ಬ್ರೆಜಿಲ್): ಟೊಕಾಂಟಿನ್ಸ್ ರಾಜ್ಯದಲ್ಲಿ ಲಘು ವಿಮಾನ ನೆಲಕ್ಕೆ ಅಪ್ಪಳಿಸಿ ನಾಲ್ವರು ಫುಟ್ಬಾಲ್ ಆಟಗಾರರು ಸೇರಿದಂತೆ ಐದು ಜನರು ಮೃತಪಟ್ಟಿದ್ದಾರೆ ಎಂದು ಪಾಲ್ಮಾಸ್ ಎಫ್ಆರ್ ಫುಟ್ಬಾಲ್ ಕ್ಲಬ್ ಭಾನುವಾರ ತಿಳಿಸಿದೆ.
ಟೇಕ್ ಆಫ್ ವೇಳೆ ನೆಲಕ್ಕಪ್ಪಳಿಸಿದ ವಿಮಾನ: ನಾಲ್ವರು ಫುಟ್ಬಾಲ್ ಆಟಗಾರರು ಸೇರಿ ಐವರು ಮೃತ - ವಿಮಾನ ಪತನ ಲೇಟೆಸ್ಟ್ ನ್ಯೂಸ್
ಟೇಕ್ ಆಫ್ ಸಮಯದಲ್ಲಿ ಲಘು ವಿಮಾನವೊಂದು ನೆಲಕ್ಕೆ ಅಪ್ಪಳಿಸಿದ ಪರಿಣಾಮ ನಾಲ್ವರು ಫುಟ್ಬಾಲ್ ಆಟಗಾರರು ಸೇರಿದಂತೆ ಐದು ಮಂದಿ ದಾರುಣವಾಗಿ ಸಾವಿಗೀಡಾದ ಘಟನೆ ಬ್ರೆಜಿಲ್ನಲ್ಲಿ ನಡೆದಿದೆ.
'ಲ್ಯೂಕಾಸ್ (ಮೈರಾ, ಕ್ಲಬ್ ಅಧ್ಯಕ್ಷ), ಪೈಲಟ್ ವ್ಯಾಗ್ನರ್ ಮತ್ತು ಫುಟ್ಬಾಲ್ ಆಟಗಾರರಾದ ಲ್ಯೂಕಾಸ್ ಪ್ರಾಕ್ಸೆಡಿಸ್, ಗಿಲ್ಹೆರ್ಮ್ ನೋ, ರಾನುಲೆ ಮತ್ತು ಮಾರ್ಕಸ್ ಮೊಲಿನಾರಿ ಅವರನ್ನು ಕರೆದೊಯ್ಯುವ ವಿಮಾನವು ಟೊಕಾಂಟಿನೆನ್ಸ್ ಏವಿಯೇಷನ್ ಅಸೋಸಿಯೇಷನ್ ರನ್‌ವೇಯ ಕೊನೆಯಲ್ಲಿ ಟೇಕ್‌ಆಫ್ ವೇಳೆ ಅಪಘಾತಕ್ಕೀಡಾಯಿತು. ಈ ದುರಂತದಲ್ಲಿ ಯಾರೊಬ್ಬರು ಕೂಡ ಬದುಕುಳಿದಿಲ್ಲ ಎಂದು ಹೇಳಲು ನಾವು ವಿಷಾಧಿಸುತ್ತೇವೆ' ಎಂದು ಫುಟ್ಬಾಲ್ ಕ್ಲಬ್ ತಿಳಿಸಿದೆ.
ಫುಟ್ಬಾಲ್ ಆಟಗಾರರು ವಿಲಾ ನೋವಾ ವಿರುದ್ಧ ಪಂದ್ಯವಾಡಲು ಗೋಯಾನಿಯಾಕ್ಕೆ ತೆರಳುತ್ತಿದ್ದರು ಎಂದು ಹೇಳಲಾಗಿದೆ. ವಿಮಾನ ಅಪಘಾತಕ್ಕೀಡ ಸ್ಥಳದಲ್ಲಿನ ಕೆಲವಿ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ವಿಮಾನವು ಸಂಪೂರ್ಣವಾಗಿ ನಾಶವಾಗಿರುವುದು ಕಂಡು ಬಂದಿದೆ.