ಕರ್ನಾಟಕ

karnataka

ETV Bharat / international

ಅಮೆರಿಕದಲ್ಲಿ ಪರೀಕ್ಷಿಸಿದ ಮೊದಲ ಕೋವಿಡ್​ ಲಸಿಕೆ ಅಂತಿಮ ಪರೀಕ್ಷೆಗೆ ಸಿದ್ಧ - ಯು.ಎಸ್ ಕೋವಿಡ್-19 ಲಸಿಕೆ

ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಹೆಲ್ತ್ ಅಂಡ್ ಮಾಡರ್ನಾ​ ಇಂಕ್‌ನಲ್ಲಿ ಫೌಸಿಯ ಸಹೋದ್ಯೋಗಿಗಳು ಅಭಿವೃದ್ಧಿಪಡಿಸಿದ ಪ್ರಾಯೋಗಿಕ ಲಸಿಕೆ ಜುಲೈ 27ರ ಸುಮಾರಿಗೆ ತನ್ನ ಪ್ರಯೋಗದ ಪ್ರಮುಖ ಹೆಜ್ಜೆಯನ್ನು ಪ್ರಾರಂಭಿಸಲಿದೆ.

vaccine
vaccine

By

Published : Jul 15, 2020, 1:24 PM IST

ವಾಷಿಂಗ್ಟನ್:ಅಮೆರಿಕದಲ್ಲಿ ಪರೀಕ್ಷಿಸಿದ ಮೊದಲ ಕೋವಿಡ್-19 ಲಸಿಕೆ ವಿಜ್ಞಾನಿಗಳು ನಿರೀಕ್ಷಿಸಿದ ರೀತಿಯಲ್ಲಿಯೇ ಜನರ ರೋಗನಿರೋಧಕ ಶಕ್ತಿಯನ್ನು ಪುನರುಜ್ಜೀವನಗೊಳಿಸಿದೆ ಎಂದು ಸಂಶೋಧಕರು ವರದಿ ಮಾಡಿದ್ದಾರೆ.

ಇದು ಒಳ್ಳೆಯ ಸುದ್ದಿ ಎಂದು ಅಮೆರಿಕ ಸರ್ಕಾರದ ಉನ್ನತ ಸಾಂಕ್ರಾಮಿಕ ರೋಗ ತಜ್ಞ ಡಾ. ಆಂಥೋನಿ ಫೌಸಿ ಹೇಳಿದರು.

ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಹೆಲ್ತ್ ಅಂಡ್ ಮಾಡರ್ನಾ ಇಂಕ್‌ನಲ್ಲಿ ಫೌಸಿಯ ಸಹೋದ್ಯೋಗಿಗಳು ಅಭಿವೃದ್ಧಿಪಡಿಸಿದ ಪ್ರಾಯೋಗಿಕ ಲಸಿಕೆ ಜುಲೈ 27ರ ಸುಮಾರಿಗೆ ತನ್ನ ಪ್ರಯೋಗದ ಪ್ರಮುಖ ಹೆಜ್ಜೆಯನ್ನು ಪ್ರಾರಂಭಿಸಲಿದೆ.

ಈ ಲಸಿಕೆ ಕೊರೊನಾ ವೈರಸ್‌ನಿಂದ ರಕ್ಷಿಸಲಿದೆ ಎಂದು ಸಾಬೀತುಪಡಿಸಲು 30,000 ವ್ಯಕ್ತಿಗಳ ಮೇಲೆ ಅಧ್ಯಯನ ನಡೆಸಲಾಗುತ್ತಿದೆ.

ಲಸಿಕೆ ಜನರ ಇಮ್ಯುನಿಟಿ ಸಿಸ್ಟಂ ಅನ್ನು ಪುನರುಜ್ಜೀವನಗೊಳಿಸುತ್ತೆ ಎಂದು ಈಗಾಗಲೇ ತಿಳಿದು ಬಂದಿದೆ. ಆದರೆ, ಲಸಿಕೆ ಸೋಂಕಿನಿಂದ ರಕ್ಷಿಸುತ್ತದೆಯೆ ಎಂದು ನಿರ್ಧರಿಸುವ ಪ್ರಯೋಗಗಳು ಇನ್ನಷ್ಟೇ ನಡೆಯಬೇಕಿದೆ.

ABOUT THE AUTHOR

...view details