ಕರ್ನಾಟಕ

karnataka

By

Published : Nov 9, 2020, 10:14 PM IST

ETV Bharat / international

ಟ್ರಂಪ್ ಕಿತ್ತೆಸೆದಿದ್ದ ಮಂಡ್ಯ ಮೂಲದ ವೈದ್ಯ ವಿವೇಕ್​ ಮೂರ್ತಿಗೆ ಬೈಡನ್​ ಮಣೆ... ನೀಡಿದ್ರು ಮಹತ್ವದ ಜವಾಬ್ದಾರಿ

ಅಮೆರಿಕದ ಚುನಾಯಿತ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಜೋ ಬೈಡನ್​ ಇಂದು ಘೋಷಣೆ ಮಾಡಿರುವ ಕೊರೊನಾ ವೈರಸ್​ ಟಾಸ್ಕ್​ ಪೋರ್ಸ್​​ನಲ್ಲಿ ಕರ್ನಾಟಕ ಮೂಲಕ ಡಾ. ವಿವಿಏಕ್ ಮೂರ್ತಿ ಪ್ರಮುಖ ಸ್ಥಾನ ಪಡೆದುಕೊಂಡಿದ್ದಾರೆ.

Vivek Murthy
Vivek Murthy

ವಾಷಿಂಗ್ಟನ್​:ಅಮೆರಿಕದ ಚುನಾಯಿತ ಅಧ್ಯಕ್ಷ ಜೋ ಬೈಡನ್ ಇಂದು ಪ್ರಕಟಿಸಿರುವ ಕೊರೊನಾ ವೈರಸ್ ಟಾಸ್ಕ್​ಪೋರ್ಸ್​​​ಗೆ ಭಾರತೀಯ-ಅಮೆರಿಕದ ವೈದ್ಯ ಡಾ.ವಿವೇಕ್ ಮೂರ್ತಿ ಪ್ರಮುಖರಾಗಿ ಆಯ್ಕೆಯಾಗಿದ್ದಾರೆ.

ಕರ್ನಾಟಕ ಮೂಲದ ವಿವೇಕ್​ ಮೂರ್ತಿ 2014ರಲ್ಲಿ ಅಮೆರಿಕದ 19ನೇ ಸರ್ಜನ್ ಜನರಲ್ ಆಗಿ ಅಂದಿನ ಅಧ್ಯಕ್ಷ ಬರಾಕ್ ಒಬಾಮ ಅವರಿಂದ ನೇಮಕಗೊಂಡಿದ್ದರು.ಯುಕೆಯಲ್ಲಿ ಜನಿಸಿದ ಅವರು 37ನೇ ವಯಸ್ಸಿನಲ್ಲಿ ಈ ಹುದ್ದೆ ಅಲಂಕರಿಸಿದ ಅತ್ಯಂತ ಕಿರಿಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ನಂತರ ಟ್ರಂಪ್ ಆಡಳಿತದಲ್ಲಿ ಹುದ್ದೆಯಿಂದ ಕೆಳಗಿಳಿದರು.

ಅಧ್ಯಕ್ಷರಾಬಗಿ ಚುನಾಯಿತರಾಗಿರುವ ಜೋ ಬೈಡನ್​ ಹಾಗೂ ಕಮಲಾ ಹ್ಯಾರಿಸ್​ ಶನಿವಾರ ತಮ್ಮ ವಿಜಯದ ಭಾಷಣ ಮಾಡುತ್ತಿದ್ದ ವೇಳೆ ಡೊನಾಲ್ಡ್​ ಟ್ರಂಪ್​ ಕಿತ್ತು ಹಾಕಿದ್ದ ಕೆಲ ಅಧಿಕಾರಿಗಳ ಮರುನೇಮಕ ಮಾಡಿಕೊಳ್ಳುವ ಭರವಸೆ ನೀಡಿದ್ದರು. ಇದೀಗ ಬೈಡನ್​ ಕೊರೊನಾ ಟಾಸ್ಕ್​ ಪೋರ್ಸ್​​ನ 10 ಸದಸ್ಯರ ಪಟ್ಟಿಯಲ್ಲಿ ವಿವೇಕ್ ಮೂರ್ತಿ ಸ್ಥಾನ ಪಡೆದಕೊಂಡಿದ್ದು, ಅಗ್ರಸ್ಥಾನದಲ್ಲಿದ್ದಾರೆ.

ಬೈಡನ್​-ಟ್ರಂಪ್​

ಇವರ ಜತೆಗೆ ಟಾಸ್ಕ್ ಪೋರ್ಸ್​ನಲ್ಲಿ ಡಾ. ಡೇವಿಡ್​ ಕೆಸ್ಲರ್​, ಮಾರ್ಸೆಲ್ಲಾ ನುನೆಜ್​ ಸ್ಮಿತ್, ಖ್ಯಾತ ಶಸ್ತ್ರಚಿಕಿತ್ಸಿಕ ಡಾ. ಅತುಲ್​ ಗವಾಂಡೆ, ಡಾ. ಮೈಕಲ್​ ಓಸ್ಟರ್ಹೋಮ್​, ಡಾ. ಬೋರಿಯೊ​ ಕೂಡ ಅವಕಾಶ ಪಡೆದುಕೊಂಡಿದ್ದಾರೆ. ಅಮೆರಿಕದಲ್ಲಿ ಕೊರೊನಾ ವೈರಸ್ ಹಾವಳಿ ಜೋರಾಗಿದ್ದು, ಇದರ ನಿಯಂತ್ರಣ ಮಾಡುವಲ್ಲಿ ಡೊನಾಲ್ಡ್​ ಟ್ರಂಪ್​ ಸಂಪೂರ್ಣವಾಗಿ ವಿಫಲರಾಗಿದ್ದರು. ಇದೀಗ ಬೈಡನ್​ ಅದಕ್ಕಾಗಿ ಹೊಸ ಟಾಸ್ಕ್​ ಪೋರ್ಸ್ ರಚನೆ ಮಾಡಿದ್ದಾರೆ.

ನಾಳೆಯಿಂದಲೇ ಅಧಿಕೃತವಾಗಿ ಕೆಲಸ ಪ್ರಾರಂಭ ಮಾಡುವ ಸಾಧ್ಯತೆ ಇದೆ. ವಿವೇಕ್ ಮೂರ್ತಿ 2015ರಲ್ಲಿ ಬರಾಕ್ ಒಬಾಮಾ ಆಡಳಿತದ ವೇಳೆ ಅಮೆರಿಕದ ಉನ್ನತ ವೈದ್ಯರಾಗಿ ಸೇವೆ ಸಲ್ಲಿಸಿದ್ದರು. ಇನ್ನು ಬೈಡನ್​ ಪರ ಚುನಾವಣೆ ಪ್ರಚಾರದ ವೇಳೆ ಸಾರ್ವಜನಿಕ ಆರೋಗ್ಯ ಮತ್ತು ಕೊರೊನಾ ವೈರಸ್​ ವಿಚಾರಗಳಿಗೆ ಸಂಬಂಧಿಸಿದಂತೆ ಡಾ. ವಿವೇಕ್​ ಮೂರ್ತಿ ಮಹತ್ವದ ಮಾಹಿತಿ ನೀಡುತ್ತಿದ್ದರು.

ABOUT THE AUTHOR

...view details