ಕರ್ನಾಟಕ

karnataka

ETV Bharat / international

ಅಮೆರಿಕಾದಲ್ಲಿ ಟಿಕ್ ‌ಟಾಕ್‌ ಬ್ಯಾನ್: ನವೆಂಬರ್‌ಗೆ ವಿಚಾರಣೆ ಮುಂದೂಡಿಕೆ - ನವೆಂಬರ್‌ಗೆ ವಿಚಾರಣೆ ಮುಂದೂಡಿಕೆ

ಅಮೆರಿಕಾ ಅಧ್ಯಕ್ಷ ಟ್ರಂಪ್‌ ಬ್ಯಾನ್‌ ಮಾಡಿದ್ದ ಟಿಕ್ ‌ಟಾಕ್‌ ಆ್ಯಪ್‌ ಪ್ರಕರಣದ ವಿಚಾರಣೆಯನ್ನು ಫೆಡರಲ್‌ ಜಡ್ಜ್‌ ಮುಂದೂಡಿದ್ದಾರೆ.

federal-judge-postpones-trump-ban-on-popular-app-tiktok
ಅಮೆರಿಕಾದಲ್ಲಿ ಟಿಕ್‌ಟಾಕ್‌ ಬ್ಯಾನ್‌; ನವೆಂಬರ್‌ಗೆ ವಿಚಾರಣೆ ಮುಂದೂಡಿಕೆ

By

Published : Sep 28, 2020, 12:15 PM IST

ನ್ಯೂಯಾರ್ಕ್‌:ಅತ್ಯಂತ ಜನಪ್ರಿಯ ವಿಡಿಯೋ ಶೇರಿಂಗ್‌ ಆ್ಯಪ್‌ ಟಿಕ್‌ ಟಾಕ್​ಅನ್ನು ಅಮೆರಿಕಾದಲ್ಲಿ ಬ್ಯಾನ್‌ ಮಾಡಿರುವ ಪ್ರಕರಣದ ವಿಚಾರಣೆಯನ್ನು ನವೆಂಬರ್‌ಗೆ ಮುಂದೂಡಿಕೆ ಮಾಡಲಾಗಿದೆ.

ನವೆಂಬರ್‌ನಲ್ಲಿ ಅಧ್ಯಕ್ಷೀಯ ಚುನಾವಣೆ ನಡೆಯುತ್ತಿದ್ದು, ಎಲೆಕ್ಷನ್‌ ನಡೆದ ಒಂದು ವಾರದ ಬಳಿಕ ಪ್ರಕಣದ ವಿಚಾರಣೆ ಫೆಡರಲ್‌ ಕೋರ್ಟ್‌ನಲ್ಲಿ ನಡೆಯಲಿದೆ. ಕೊಲಂಬಿಯಾ ಜಿಲ್ಲಾ ನ್ಯಾಯಾಲಯದ ಜಡ್ಜ್‌ ಕಾರ್ಲ್‌ ನಿಕೊಲ್ಸ್‌ ಈ ಮೊದಲು ಟಿಕ್ ‌ಟಾಕ್‌ ಆ್ಯಪ್‌ ಬ್ಯಾನ್‌‌ ವಿಚಾರಣೆ ಮುಂದೂಡಿಕೆಗೆ ನಿರಾಕರಿಸಿದ್ದರು.

ಭಾನುವಾರ ಅರ್ಜಿಯ ತುರ್ತು ವಿಚಾರಣೆ ವೇಳೆ ವಾದ ಮಂಡಿಸಿದ ಟಿಕ್‌ ಟಾಕ್‌ ಪರ ಪರ ವಕೀಲರು, ಆ್ಯಪ್‌ ರದ್ದು ಮಾಡಿರುವುದು ಆಡಳಿತ ವ್ಯಾಪಾರದ ಹಕ್ಕುಗಳನ್ನು ಕಸಿದುಕೊಂಡಂತಾಗಿದೆ ಎಂದು ವಾದಿಸಿದ್ದಾರೆ. ವಿಚಾರಣೆಯನ್ನು ಮುಂದೂಡಿರುವುದಕ್ಕೆ ನ್ಯಾಯಾಧೀಶರು ನಿಖರವಾದ ಕಾರಣ ನೀಡಿಲ್ಲ ಎಂದು ಸುದ್ದಿ ಸಂಸ್ಥೆಗಳು ವರದಿ ಮಾಡಿವೆ.

ರಾಷ್ಟ್ರೀಯ ಭದ್ರತೆಯ ಕಾರಣ ನೀಡಿ ಇದೇ ವರ್ಷದ ಆರಂಭದಲ್ಲಿ ಅಮೆರಿಕಾ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಚೀನಾ ಮೂಲದ ಟಿಕ್ ‌ಟಾಕ್‌ ಆ್ಯಪ್‌ ರದ್ದು ಮಾಡಿದ್ದರು. ಭಾರತದಲ್ಲೂ ಈ ಆ್ಯಪ್‌ ಬ್ಯಾನ್‌ ಮಾಡಲಾಗಿತ್ತು.

ABOUT THE AUTHOR

...view details