ಕರ್ನಾಟಕ

karnataka

ETV Bharat / international

ವಿದೇಶಿ ಬಂಡವಾಳ ಹೂಡಿಕೆ: ಚೀನಾ, ಸಿಂಗಾಪುರ್​, ಹಾಂಕಾಂಗ್ ಹಿಂದಿಕ್ಕಿದ ಭಾರತ -

2018ರಲ್ಲಿ ಭಾರತಕ್ಕೆ ಶೇ 6 ಬೆಳವಣಿಗೆ ದರದಲ್ಲಿ 2.9 ಲಕ್ಷ ಕೋಟಿ (42 ಬಿಲಿಯನ್ ಡಾಲರ್) ಎಫ್​ಡಿಐ ಹರಿದುಬಂದಿದೆ. ಇದರಲ್ಲಿ ಉತ್ಪಾದನಾ, ಸಂವಹನ ಹಾಗೂ ಹಣಕಾಸು ವಲಯಗಳಲ್ಲಿ ಅತ್ಯಧಿಕ ಬಂಡವಾಳ ಹೂಡಿಕೆಯಾಗಿದೆ.

ಸಾಂದರ್ಭಿಕ ಚಿತ್ರ

By

Published : Jun 13, 2019, 1:25 PM IST

ನ್ಯೂಯಾರ್ಕ್​: ವಿದೇಶಿ ನೇರ ಬಂಡವಾಳ ಹೂಡಿಕೆಯ (ಎಫ್​ಡಿಐ) ಅಗ್ರ 20 ರಾಷ್ಟ್ರಗಳಲ್ಲಿ ಭಾರತ ಅತ್ಯಂತ ಆಕರ್ಷಣೀಯ ದೇಶ ಎಂದು ವಿಶ್ವ ಸಂಸ್ಥೆ ವರದಿ ತಿಳಿಸಿದೆ.

2018ರಲ್ಲಿ ಭಾರತಕ್ಕೆ ಶೇ 6ರ ಬೆಳವಣಿಗೆ ದರದಲ್ಲಿ 2.9 ಲಕ್ಷ ಕೋಟಿ (42 ಬಿಲಿಯನ್ ಡಾಲರ್) ಎಫ್​ಡಿಐ ಹರಿದುಬಂದಿದೆ. ಇದರಲ್ಲಿ ಉತ್ಪಾದನಾ, ಸಂವಹನ ಹಾಗೂ ಹಣಕಾಸು ವಲಯಗಳಲ್ಲಿ ಅತ್ಯಧಿಕ ಬಂಡವಾಳ ಹೂಡಿಕೆಯಾಗಿದೆ ಎಂದು ವಿಶ್ವ ಸಂಸ್ಥೆ ಸಿದ್ಧಪಡಿಸಿದ 'ಪ್ರಪಂಚದ ಹೂಡಿಕೆ ವರದಿ 2019'ರಲ್ಲಿ ಉಲ್ಲೇಖಿಸಲಾಗಿದೆ.

ಇದೇ ಅವಧಿಯಲ್ಲಿ ಜಾಗತಿಕ ಮಟ್ಟದಲ್ಲಿನ ಬಂಡವಾಳ ಹೂಡಿಕೆ ಪ್ರಮಾಣ ಶೇ 13ರಷ್ಟು ಕುಸಿದಿದೆ. ₹ 10.44 ಲಕ್ಷ ಕೋಟಿ ಇದ್ದದ್ದು ₹ 9.02 ಲಕ್ಷ ಕೋಟಿಗೆ ತಲುಪಿದೆ. ಏಷ್ಯಾದ ಅಭಿವೃದ್ಧಿಶೀಲ ರಾಷ್ಟ್ರಗಳ ಎಫ್​ಡಿಎ ಶೇ 3.9ರ ಪ್ರತಿಶತದಲ್ಲಿ ಬೆಳವಣಿಗೆ ದರ ದಾಖಲಿಸಿದೆ.

ಚೀನಾ, ಹಾಂಕಾಂಗ್, ಸಿಂಗಾಪುರ್, ಇಂಡೋನೇಷ್ಯಾ ಮತ್ತು ಇತರ ರಾಷ್ಟ್ರಗಳಿದ್ದು, ಇದರಲ್ಲಿ ಭಾರತ ಮತ್ತು ಟರ್ಕಿ ಅತ್ಯಧಿಕ ಎಫ್​ಡಿಐ ಪಾಲು ಸ್ವೀಕರಿಸಿವೆ. ಪ್ರಪಂಚದ ಒಟ್ಟು ಎಫ್​ಡಿಐ ಹೂಡಿಕೆಯಲ್ಲಿ ಏಷ್ಯಾ ರಾಷ್ಟ್ರಗಳ ಪಾಲು ಶೇ 39ರಷ್ಟಿದೆ. ಇದರ ಹಿಂದಿನ ವರ್ಷ (2017) ಶೇ 33ರಷ್ಟು ಇದ್ದಿತ್ತು.

For All Latest Updates

TAGGED:

ABOUT THE AUTHOR

...view details