ವಾಷಿಂಗ್ಟನ್ (ಯು.ಎಸ್.):ಚುನಾಯಿತ ಅಧ್ಯಕ್ಷ ಜೋ ಬೈಡನ್ ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್, ಯುನೈಟೆಡ್ ಸ್ಟೇಟ್ಸ್ ಸೀಕ್ರೆಟ್ ಸರ್ವಿಸ್ ಮತ್ತು ರಾಷ್ಟ್ರೀಯ ಭದ್ರತಾ ತಂಡದ ಪ್ರಮುಖ ಸದಸ್ಯರು ಹಾಗೂ ಹಿರಿಯ ಅಧಿಕಾರಿಗಳಿಂದ ಅಧಿಕಾರ ಹಸ್ತಾಂತರದ ಸಂದರ್ಭದ ಭದ್ರತಾ ವ್ಯವಸ್ಥೆಯ ಕುರಿತು ಮಾಹಿತಿ ಪಡೆದುಕೊಂಡರು.
ಭದ್ರತಾ ವ್ಯವಸ್ಥೆಯ ಕುರಿತು ಮಾಹಿತಿ ಪಡೆದುಕೊಂಡ ಜೋ ಬೈಡನ್ - ಅಮೆರಿಕಾ ಭದ್ರತಾ ವ್ಯವಸ್ಥೆ
ಅಧಿಕಾರ ಹಸ್ತಾಂತರದ ಸಂದರ್ಭದ ಭದ್ರತಾ ವ್ಯವಸ್ಥೆಯ ಕುರಿತು ಚುನಾಯಿತ ಅಧ್ಯಕ್ಷ ಜೋ ಬೈಡೆನ್ ಮಾಹಿತಿ ಪಡೆದುಕೊಂಡಿದ್ದಾರೆ.

biden
ಸುಗಮ ಮತ್ತು ಸುರಕ್ಷಿತ ಅಧಿಕಾರ ಹಸ್ತಾಂತರಕ್ಕಾಗಿ ಬೈಡನ್-ಹ್ಯಾರಿಸ್ ಪರಿವರ್ತನಾ ತಂಡವು ನಿರ್ಗಮಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತದೊಂದಿಗೆ ಸಹಕರಿಸುತ್ತಿದೆ ಎಂದು ತಿಳಿದು ಬಂದಿದೆ.
"ಬೆದರಿಕೆಯ ಕುರಿತು ಸಾಧ್ಯವಾದಷ್ಟು ಮಾಹಿತಿಯನ್ನು ಪಡೆಯಲು ತಂಡವು ಪ್ರಸ್ತುತ ಆಡಳಿತದೊಂದಿಗೆ ಸಹಕರಿಸುತ್ತಿದೆ. ಹಿಂಸಾತ್ಮಕ ಅಡೆತಡೆಗಳು ಅಥವಾ ದಾಳಿಯಿಂದ ತಡೆಯಲು ಸಿದ್ಧತೆಗಳನ್ನು ನಡೆಸಲಾಗುತ್ತಿದೆ" ಎಂದು ತಂಡವು ತನ್ನ ಹೇಳಿಕೆಯಲ್ಲಿ ತಿಳಿಸಿದೆ.