ವಾಷಿಂಗ್ಟನ್ (ಯುಎಸ್):ಜ. 6 ರಂದು ಯುಎಸ್ ಕ್ಯಾಪಿಟಲ್ನಲ್ಲಿ ಹಿಂಸಾಚಾರ ಭುಗಿಲೆದ್ದ ನಂತರ ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ (ಎಫ್ಬಿಐ) 70ಕ್ಕೂ ಹೆಚ್ಚು ಜನರ ಮೇಲೆ ಆರೋಪ ಹೊರಿಸಿದೆ ಮತ್ತು 170 ಕ್ಕೂ ಹೆಚ್ಚು ಜನರ ಮೇಲೆ ಕೇಸ್ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಮೈಕೆಲ್ ಶೆರ್ವಿನ್, ಕ್ಯಾಪಿಟಲ್ ದುರಂತ ಘಟನೆ ನಡೆದ ಕೆಲವು ದಿನಗಳ ನಂತರ ನಾವು 170 ಕ್ಕೂ ಹೆಚ್ಚು ಅಪರಾಧ ಫೈಲ್‌ಗಳನ್ನು ತೆರೆದಿದ್ದೇವೆ. ಅಂದರೆ, ಈ ವ್ಯಕ್ತಿಗಳನ್ನು ಕ್ಯಾಪಿಟಲ್ ಮೈದಾನದ ಒಳಗೆ ಮತ್ತು ಹೊರಗೆ ಅಪರಾಧದ ಮೇಲೆ ಅಪರಾಧ ಮಾಡಿದ ವ್ಯಕ್ತಿಗಳಾಗಿ ಗುರುತಿಸಲಾಗಿದೆ ಎಂದರು.
ಹಿನ್ನೆಲೆ:
ಕಳೆದ ವಾರ ಕ್ಯಾಪಿಟಲ್ ದುರಂತಕ್ಕೆ ಸಾಕ್ಷಿಯಾಯಿತು. ಅಲ್ಲಿ ಹಲವಾರು ರೀತಿಯ ಹಿಂಸಾತ್ಮಕ ಚಟುವಟಿಕೆಗಳು ನಡೆದವು. ಟ್ರಂಪ್ ಅವರ ಬೆಂಬಲಿಗರು ಎಲೆಕ್ಟರೋಲ್ ಕಾಲೇಜಿನ ಮತಗಳ ವಿರುದ್ಧ ಆಕ್ರೋಶಗೊಂಡು ಅಲ್ಲಿಗೆ ಬೀಗ ಹಾಕಲು ಮುಂದಾದರು. ಈ ವೇಳೆ ಪೊಲೀಸರು ಹಾಗೂ ಟ್ರಂಪ್ ಬೆಂಬಲಿಗರು ಮುಖಾಮುಖಿಯಾಗಬೇಕಾಯಿತು.
ಈ ಸುದ್ದಿಯನ್ನೂ ಓದಿ:ಕ್ಯಾಪಿಟಲ್ ಗಲಭೆ: ತಮ್ಮ ಭಾಷಣ ಸಮರ್ಥಿಸಿಕೊಂಡ ಟ್ರಂಪ್
ನವೆಂಬರ್ನಲ್ಲಿ ನಡೆದ ಮತದಾನದಲ್ಲಿ ಬೈಡನ್ ಅವರ ವಿಜಯವನ್ನು ಕಾಂಗ್ರೆಸ್ ಪ್ರಮಾಣೀಕರಿಸುತ್ತಿದ್ದರಿಂದ ಚುನಾವಣಾ ಫಲಿತಾಂಶಗಳ ವಿರುದ್ಧ ಹೋರಾಡಲು ಟ್ರಂಪ್ ತಮ್ಮ ಬೆಂಬಲಿಗರಿಗೆ ಪ್ರಚೋದನೆ ನೀಡಿದ್ದರು. ಈ ಕಾರಣಕ್ಕಾಗಿಯೇ ಕ್ಯಾಪಿಟಲ್ನಲ್ಲಿ ಹಿಂದೆಂದೂ ಆಗದ ಘಟನೆಗಳು ಜರುಗಿದ್ದವು.