ವಾಷಿಂಗ್ಟನ್ (ಯುಎಸ್): ಭಾರತದಲ್ಲಿ ಹೆಚ್ಚುತ್ತಿರುವ ಕೊರೊನಾ ವೈರಸ್ ಪ್ರಕರಣಗಳ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಅಮೆರಿಕದ ಉನ್ನತ ಸಾರ್ವಜನಿಕ ಆರೋಗ್ಯ ತಜ್ಞ ಮತ್ತು ಶ್ವೇತಭವನದ ಮುಖ್ಯ ವೈದ್ಯಕೀಯ ಸಲಹೆಗಾರ ಡಾ.ಆಂಥೋನಿ ಫೌಸಿ, ರಾಷ್ಟ್ರವ್ಯಾಪಿ ಲಾಕ್‌ಡೌನ್, ಬೃಹತ್ ವ್ಯಾಕ್ಸಿನೇಷನ್ ಕಾರ್ಯಕ್ರಮ ಮತ್ತು ಹೆಚ್ಚಿನ ಸಂಖ್ಯೆಯ ತಾತ್ಕಾಲಿಕ ಆಸ್ಪತ್ರೆಗಳ ನಿರ್ಮಾಣಕ್ಕೆ ಸಲಹೆ ನೀಡಿದ್ದಾರೆ.
ಭಾರತದ ಪರಿಸ್ಥಿತಿ ಅತ್ಯಂತ ಗಂಭೀರವಾಗಿದೆ ಎಂಬುದು ಸ್ಪಷ್ಟವಾಗಿದೆ ಎಂದು ವಿಶ್ವದ ಅಗ್ರ ಸಾಂಕ್ರಾಮಿಕ ರೋಗ ತಜ್ಞರಲ್ಲಿ ಒಬ್ಬರೆಂದು ಪರಿಗಣಿಸಲ್ಪಟ್ಟಿರುವ ಡಾ.ಫೌಸಿ ಕಳವಳ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ:ಭಾರತದಲ್ಲಿ 2 ಕೋಟಿ ಗಡಿ ದಾಟಿದ ಕೋವಿಡ್ ಕೇಸ್.. ಒಂದೇ ದಿನ 3,449 ಮಂದಿ ಬಲಿ
ಮೊದಲನೆಯದಾಗಿ ಭಾರತದಲ್ಲಿ ಅಭಿವೃದ್ಧಿಪಡಿಸುವ ಲಸಿಕೆಗಳು ಮತ್ತು ಇತರ ಸರಬರಾಜುದಾರರಿಂದ ಸಂಗ್ರಹಿಸಲು ಸಾಧ್ಯವಾದ ಲಸಿಕೆಗಳ ಪೂರೈಕೆಯೊಂದಿಗೆ ಸಾಧ್ಯವಾದಷ್ಟು ಜನರಿಗೆ ಲಸಿಕೆ ಹಾಕಲು ಪ್ರಾರಂಭಿಸಬೇಕು. ಈ ಸಂದರ್ಭದಲ್ಲಿ ತಾತ್ಕಾಲಿಕ ಆಸ್ಪತ್ರೆಗಳನ್ನು ತಕ್ಷಣ ನಿರ್ಮಿಸಲು ಸಶಸ್ತ್ರ ಪಡೆಗಳ ಸಹಾಯವನ್ನು ತೆಗೆದುಕೊಳ್ಳಿ ಎಂದು ಭಾರತಕ್ಕೆ ಸಲಹೆ ನೀಡಿದ್ದಾರೆ.
ಇತರ ದೇಶಗಳು, ಉದಾಹರಣೆಗೆ ಕೊರೊನಾ ತಡೆಗೆ ಚೀನಾ ಕಳೆದ ವರ್ಷ ಏನು ಮಾಡಿದೆ? ಏಕಾಏಕಿ ಕೋವಿಡ್ಗೆ ತುತ್ತಾದ ಆಸ್ಟ್ರೇಲಿಯಾ ಏನು ಮಾಡಿತು? ನ್ಯೂಜಿಲೆಂಡ್ ಕೈಗೊಂಡ ಕ್ರಮಗಳೇನು? ಇತರ ದೇಶಗಳು ಏನು ಮಾಡಿದ್ದವು ಎಂಬುದನ್ನು ತುಲನಾತ್ಮಕವಾಗಿ ನೋಡಿದಾಗ ಸೀಮಿತ ಅವಧಿಗೆ ಸಂಪೂರ್ಣವಾಗಿ ಲಾಕ್‌ಡೌನ್ ಮಾಡುವುದು ಬಹುಮುಖ್ಯ ಅನ್ನೋದು ಫೌಸಿ ಅವರ ಅಭಿಪ್ರಾಯ.
ಇದನ್ನೂ ಓದಿ:ಕುಂಭಮೇಳದಿಂದ ಮಧ್ಯಪ್ರದೇಶಕ್ಕೆ ಹಿಂದಿರುಗಿದ ಶೇ.99 ರಷ್ಟು ಮಂದಿಗೆ ಕೊರೊನಾ