ವಿಲ್ಮಿಂಗ್ಟನ್:ಕೋವಿಡ್ ಡೆಲ್ಟಾ ರೂಪಾಂತರ ಹೆಚ್ಚಳದಿಂದಾಗಿ ಅಮೆರಿಕ ಅನಗತ್ಯ ಸಂಕಟಕ್ಕೆ ಸಿಲುಕಿದೆ ಎಂದು ರಾಷ್ಟ್ರದ ಉನ್ನತ ಸಾಂಕ್ರಾಮಿಕ ರೋಗ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.
ನಾವು ತಪ್ಪು ದಿಕ್ಕಿನಲ್ಲಿ ಸಾಗುತ್ತಿದ್ದೇವೆ. ಲಸಿಕೆ ಪಡೆದವರೂ ಇನ್ಮುಂದೆ ಮಾಸ್ಕ್ ಹಾಕಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ ಎಂದು ಡಾ.ಆಂಥೋನಿ ಫೌಸಿ ಹೇಳಿದ್ದಾರೆ. ಅಲ್ಲದೇ, ವ್ಯಾಕ್ಸಿನ್ ಪಡೆದವರಲ್ಲಿ ರೋಗ ನಿರೋಧಕ ಶಕ್ತಿ ವೃದ್ಧಿಯಾಗುವುದಕ್ಕೆ ಬೂಸ್ಟರ್ ಡೋಸ್ ಪಡೆದುಕೊಳ್ಳಲು ಸೂಚಿಸಬಹುದು ಎಂದು ಫೌಸಿ ತಿಳಿಸಿದ್ದಾರೆ.
ಅಧ್ಯಕ್ಷ ಜೋ ಬೈಡನ್ ಅವರ ಮುಖ್ಯ ವೈದ್ಯಕೀಯ ಸಲಹೆಗಾರರಾಗಿ ಸೇವೆ ಸಲ್ಲಿಸುತ್ತಿರುವ ಫೌಸಿ, ಈವರೆಗೆ ಮಾಸ್ಕ್ ವಿಚಾರವಾಗಿದ್ದ ಮಾರ್ಗಸೂಚಿಗಳನ್ನು ಬದಲಾಯಿಸಬೇಕಿದೆ ಎಂದಿದ್ದಾರೆ. ಈ ಹಿಂದೆ ಅಮೆರಿಕದಲ್ಲಿ ವ್ಯಾಕ್ಸಿನ್ ಪಡೆದವರು ಮಾಸ್ಕ್ ಧರಿಸುವಂತಿಲ್ಲ ಎಂಬ ಆದೇಶವಿತ್ತು.