ವಾಶಿಂಗ್ಟನ್: ಕೋವಿಡ್-19 ವೈರಸ್‌ನ ಪ್ರಯೋಗಾಲಯದಲ್ಲಿ ಕೃತಕವಾಗಿ ಅಥವಾ ದುರುದ್ದೇಶಪೂರ್ವಕವಾಗಿ ಸೃಷ್ಟಿ ಮಾಡಲಾಗಿಲ್ಲ ಎಂದು ಅಮೆರಿಕದ ಸಾಂಕ್ರಾಮಿಕ ರೋಗಗಳ ಖ್ಯಾತ ತಜ್ಞ ಅಂಥೋನಿ ಫೌಸಿ ಅಭಿಪ್ರಾಯಪಟ್ಟಿದ್ದಾರೆ. ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಅಲರ್ಜಿ ಅಂಡ್ ಇನ್ಫೆಕ್ಷಿಯಸ್ ಡಿಸೀಸ್ನ ನಿರ್ದೇಶಕರೂ ಆಗಿರುವ ಫೌಸಿ ಅವರು, ನ್ಯಾಷನಲ್ ಜಿಯಾಗ್ರಫಿಕ್ ಚಾನೆಲ್ಗೆ ನೀಡಿದ ಸಂದರ್ಶನದಲ್ಲಿ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.
ಕೋವಿಡ್-19 ವೈರಸ್ ಕೃತಕವಲ್ಲ.. ಅಮೆರಿಕ ಸಾಂಕ್ರಾಮಿಕ ರೋಗಗಳ ತಜ್ಞ ಫೌಸಿ ಸ್ಪಷ್ಟನೆ!! - ನ್ಯಾಷನಲ್ ಜಿಯಾಗ್ರಫಿಕ್
ಬೇಸಿಗೆ ಮುಗಿಯುವಷ್ಟರಲ್ಲಿ ಅಮೆರಿಕ ವೈರಸ್ ಹರಡುವಿಕೆಯನ್ನು ತಡೆಗಟ್ಟದಿದ್ದರೆ, ಬರುವ ಮಳೆಗಾಲ ಹಾಗೂ ಚಳಿಗಾಲದಲ್ಲಿ ಎರಡನೇ ಹಂತದ ವೈರಸ್ ಹರಡುವಿಕೆ ಆರಂಭವಾಗುವ ಅಪಾಯ ಕಾದಿದೆ ಎಂದು ಫೌಸಿ ಕಳವಳ ವ್ಯಕ್ತಪಡಿಸಿದ್ದಾರೆ.

ವೈರಸ್‌ನ ಕೃತಕವಾಗಿ ಸೃಷ್ಟಿಸಲಾಯಿತಾ ಅಥವಾ ಚೀನಾದ ಪ್ರಯೋಗಾಲಯದಲ್ಲಿ ಅಚಾತುರ್ಯದಿಂದ ವೈರಸ್ ಎಲ್ಲೆಡೆ ಹರಡಿತಾ ಎಂಬ ಪ್ರಶ್ನೆಗೆ ಉತ್ತರಿಸಿದ ಫೌಸಿ, "ಬಾವಲಿಗಳಲ್ಲಿನ ವೈರಸ್ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಅವಲೋಕಿಸಿದಲ್ಲಿ, ಕೋವಿಡ್-19 ವೈರಸ್ ತಯಾರಿಸಿದ್ದಾಗಲಿ ಅಥವಾ ದುರುದ್ದೇಶಪೂರ್ವಕವಾಗಿ ಮಾರ್ಪಡಿಸಿದ್ದಾಗಲಿ ಎಂದು ಅನಿಸೋದಿಲ್ಲ. ಈ ವೈರಸ್ ನೈಸರ್ಗಿಕವಾಗಿಯೇ ರೂಪಾಂತರ ಹೊಂದಿದೆ. ಹಲವಾರು ಜೀವಶಾಸ್ತ್ರಜ್ಞರ ಪ್ರಕಾರ ಈ ವೈರಸ್ ಪ್ರಕೃತಿಯಲ್ಲಿಯೇ ರೂಪಾಂತರ ಹೊಂದಿದ್ದು, ನಂತರ ಜೀವಿಗಳ ಶರೀರ ಸೇರಿಕೊಂಡಿದೆ." ಎಂದಿದ್ದಾರೆ.
ಬೇಸಿಗೆ ಮುಗಿಯುವಷ್ಟರಲ್ಲಿ ಅಮೆರಿಕ ವೈರಸ್ ಹರಡುವಿಕೆಯನ್ನು ತಡೆಗಟ್ಟದಿದ್ದರೆ, ಬರುವ ಮಳೆಗಾಲ ಹಾಗೂ ಚಳಿಗಾಲದಲ್ಲಿ 2ನೇ ಹಂತದ ವೈರಸ್ ಹರಡುವಿಕೆ ಆರಂಭವಾಗುವ ಅಪಾಯ ಕಾದಿದೆ ಎಂದು ಫೌಸಿ ಕಳವಳ ವ್ಯಕ್ತಪಡಿಸಿದ್ದಾರೆ. ನಗರಗಳು ಹಾಗೂ ರಾಜ್ಯಗಳಲ್ಲಿ ವೈರಸ್ ಸೋಂಕಿನ ಪ್ರಮಾಣ ಇಳಿಕೆಯಾಗುವವರೆಗೂ ಸಾಮಾಜಿಕ ಅಂತರದ ನಿಯಮಗಳನ್ನು ಅತ್ಯಂತ ಕಟ್ಟಿನಿಟ್ಟಾಗಿ ಪಾಲಿಸಬೇಕಿದೆ ಎಂದು ಅವರು ಹೇಳಿದ್ದಾರೆ.