ವಾಷಿಂಗ್ಟನ್:ಭಯೋತ್ಪಾದನಾ ಚಟುವಟಿಕೆಯನ್ನು ನಿಯಂತ್ರಣಕ್ಕೆ ತರುವಲ್ಲಿ ಸತತ ವಿಫಲವಾಗುತ್ತಿರುವ ಪಾಕಿಸ್ತಾನ ಕಪ್ಪುಪಟ್ಟಿಗೆ ಸೇರಲಿದೆ ಎನ್ನುವ ಮುನ್ಸೂಚನೆಯನ್ನು ಫೈನಾನ್ಸಿಯಲ್ ಆ್ಯಕ್ಷನ್ ಟಾಕ್ಸ್‌ಫೋರ್ಸ್(ಎಫ್ಟಿಎಫ್)ನ ಅಧ್ಯಕ್ಷ ಮಾರ್ಷಲ್ ಬಿಲ್ಲಿಂಗ್ಸ್ಲಿಯಾ ಹೇಳಿದ್ದಾರೆ.
ಭಯೋತ್ಪಾದನೆ ನಿಗ್ರಹದಲ್ಲಿ ಪಾಕಿಸ್ತಾನ ಮಹತ್ತರ ಕೆಲಸ ಮಾಡಬೇಕಿದೆ. 2018ರ ಜೂನ್ ಅಂತ್ಯಕ್ಕೆ ಪಾಕಿಸ್ತಾನ ಈ ವಿಚಾರದಲ್ಲಿ ಅತ್ಯಂತ ಹಿಂದುಳಿದಿತ್ತು. ಆ ಬಳಿಕ ಜನವರಿ ಹಾಗೂ ಮೇ ತಿಂಗಳ ಗಡುವು ನೀಡಲಾಗಿದ್ದರೂ ಪಾಕ್ ಸುಧಾರಿಸಿಲ್ಲ ಎಂದು ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.