ಕರ್ನಾಟಕ

karnataka

ETV Bharat / international

ನೋ ಹಾರ್ಟ್​​ ಅಟ್ಯಾಕ್​ ​... ಓನ್ಲಿ  ಕ್ಯಾಟ್​ ವಾಕ್... ನಡೆಯುತ್ತಲೇ ಪ್ರಾಣ ಬಿಟ್ಟ 26 ವರ್ಷದ ಮಾಡೆಲ್​!

ಪ್ಯಾಷನ್​ ವೀಕ್ ​ವೊಂದರಲ್ಲಿ 26 ವರ್ಷದ ಮಾಡೆಲ್​ ಕ್ಯಾಟ್​ ವಾಕ್​ ಮಾಡುತ್ತಿರುವ ವೇಳೆ ಕುಸಿದು ಬಿದ್ದು ಸಾವನ್ನಪ್ಪಿರುವ ಘಟನೆ ದಿಗ್ಭ್ರಮೆಗೊಳಿಸಿದೆ.

By

Published : Apr 29, 2019, 5:36 PM IST

ಕ್ಯಾಟ್​ ವಾಕ್​

ಸೌಪೌಲ್​ (ಬ್ರೆಜಿಲ್​):ರ‍್ಯಾಂಪ್​ ಮೇಲೆ ಕ್ಯಾಟ್​ ವಾಕ್​ ಮಾಡಿ ಹಿಂದಿರುಗುತ್ತಿದ್ದ ವೇಳೆ ಮಾಡೆಲ್​ ಕುಸಿದು ಬಿದ್ದು ಸಾವನ್ನಪ್ಪಿರುವ ಘಟನೆ ಎಲ್ಲರನ್ನೂ ಬೆರಗುಗೊಳಿಸುವಂತೆ ಮಾಡಿದೆ.

ಕ್ಯಾಟ್​ ವಾಕ್​ ಮಾಡುತ್ತಲೇ ಪ್ರಾಣ ಬಿಟ್ಟ 26 ವರ್ಷದ ಮಾಡೆಲ್

ಬ್ರೆಜಿಲ್​ನ ಸೌಪೌಲ್​ನಲ್ಲಿ ಫ್ಯಾಷನ್​ ವೀಕ್​ ಆಯೋಜಿಸಲಾಗಿತ್ತು. 26 ವರ್ಷದ ಬ್ರೆಜಿಲ್​ನ ಮಾಡೆಲ್​ ಟೆಲ್ಸ್​ ಸೋರ್ಸ್​ ಈ ಫ್ಯಾಷನ್​ ವೀಕ್​ನಲ್ಲಿ ಪಾಲ್ಗೊಂಡಿದ್ದನು. ರ‍್ಯಾಂಪ್​ ಮೇಲೆ ಕ್ಯಾಟ್​ ವಾಕ್​ ಮಾಡಿ ಹಿಂದಿರುಗುತ್ತಿದ್ದ ವೇಳೆ ಸಡನ್​ ಆಗಿ ಕುಸಿದು ಬಿದ್ದಿದ್ದಾನೆ. ಕೂಡಲೇ ಸಿಬ್ಬಂದಿ ಆತನನ್ನು ಆಸ್ಪತ್ರೆಗೆ ಕರೆದ್ಯೊಯ್ದಿದ್ದರು, ಆದ್ರೆ ಯಾವುದೇ ಪ್ರಯೋಜನವಾಗಲಿಲ್ಲ. ವೈದ್ಯರು ಟೆಲ್ಸ್​ ಸೊರೆಸ್​ ಸಾವನ್ನಪ್ಪಿದ್ದಾರೆ ಎಂದು ಘೋಷಿಸಿದರು. ಪ್ರೇಕ್ಷಕರು ನೋಡು ನೋಡುತ್ತಲೇ ಆ ಯುವಕ ರ‍್ಯಾಂಪ್​ ಮೇಲೆ ಪ್ರಾಣ ಬಿಟ್ಟಿದ್ದನು.

ಇನ್ನು ಪ್ರಾಥಮಿಕ ವರದಿ ಪ್ರಕಾರ ಆತ ಹಾರ್ಟ್​ ಅಟ್ಯಾಕ್​ನಿಂದ ಮೃತಪಟ್ಟಿಲ್ಲ ಎಂದು ತಿಳಿದುಬಂದಿದೆ. ಮರಣೋತ್ತರ ಪರೀಕ್ಷೆ ಬಳಿಕ ಆತನ ಸಾವಿನ ರಹಸ್ಯ ಹೊರಬಿಳಲಿದೆ. ಆತನ ಕುಟುಂಬಕ್ಕೆ ಫ್ಯಾಷನ್​ ವೀಕ್​ ಆಯೋಜಿಸಿದ್ದ ನಿರೂಪಕರು ಸೇರಿದಂತೆ ಅನೇಕರು ಸಾಂತ್ವನ ಹೇಳಿದ್ದಾರೆ.

ABOUT THE AUTHOR

...view details