ಕರ್ನಾಟಕ

karnataka

ETV Bharat / international

ಟ್ರಂಪ್​ ಜಾಹೀರಾತುಗಳನ್ನು ತೆಗೆದು ಹಾಕಿದ Facebook

ಅಮೆರಿಕದಲ್ಲಿ ಈ ಬಾರಿ ನಡೆಯುವ ಜನಗಣತಿಯಲ್ಲಿ, ಜನಗಣತಿ ಜಾಹೀರಾತುಗಳು ಎಂದು ಹೇಳಿಕೊಂಡು ಚುನಾವಣಾ ಪ್ರಚಾರದ ಜಾಹೀರಾತುಗಳನ್ನು ಹಾಕಿದ್ದಕ್ಕಾಗಿ ಫೇಸ್​ಬುಕ್​​ ಸದ್ಯ ಟ್ರಂಪ್​​ ಅವರ ಜಾಹೀರಾತುಗಳನ್ನು ತೆಗೆದುಹಾಕಿದೆ.

By

Published : Mar 6, 2020, 5:23 PM IST

Trump's Advertisement
ಟ್ರಂಪ್​ ಜಾಹೀರಾತುಗಳು

ಸ್ಯಾನ್ ಫ್ರಾನ್ಸಿಸ್ಕೋ: 2020ರ ಅಮೆರಿಕದ ಜನಗಣತಿಯ ಜಾಹೀರಾತುಗಳು ಎಂದು ಹೇಳಿಕೊಂಡು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮರು ಆಯ್ಕೆ ಬಯಸಿ ನಡೆಸುತ್ತಿರುವ ಚುನಾವಣಾ ಪ್ರಚಾರಕ್ಕೆ ನಡೆಸುತ್ತಿರುವ ಹಲವಾರು ಜಾಹೀರಾತುಗಳನ್ನು ಫೇಸ್‌ಬುಕ್ ತೆಗೆದುಹಾಕಿದೆ.

ಮಾರ್ಚ್ 12 ರಿಂದ ಅಧಿಕೃತವಾಗಿ ಪ್ರಾರಂಭವಾಗುವ ಯುಎಸ್ ಜನಗಣತಿಯ ಸುತ್ತಲಿನ ಗೊಂದಲ ತಡೆಗಟ್ಟಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಫೇಸ್ ಬುಕ್ ಮುಖ್ಯಸ್ಥರು ಉಲ್ಲೇಖಿಸಿದ್ದಾರೆ.

ಈ ಜನಗಣತಿಯು ನಮ್ಮ ತಂಡದ 2020 ಅಭಿಯಾನದ ಕಾರ್ಯತಂತ್ರಕ್ಕೆ ಅಗತ್ಯವಾಗಿದೆ. ಈ ಜನಗಣತಿಗೆ ಪ್ರತಿಕ್ರಿಯಿಸಲು ನಿಮ್ಮಂತಹ ದೇಶಭಕ್ತ ಅಮೆರಿಕನ್ನರು ನಮಗೆ ಬೇಕು, ಇದರಿಂದಾಗಿ ನಿಮ್ಮ ರಾಜ್ಯಕ್ಕಾಗಿ ನಾವು ಗೆಲುವಿನ ತಂತ್ರವನ್ನು ರೂಪಿಸಿ ಅಭಿವೃದ್ಧಿಪಡಿಸಬಹುದು ಎಂದು ಕೆಲವು ಜಾಹೀರಾತುಗಳಲ್ಲಿ ಡೊನಾಲ್ಡ್​​ ಟ್ರಂಪ್​​ ಪ್ರಸ್ತಾಪಿಸಿದ್ದಾರೆ ಎನ್ನಲಾಗಿದೆ.

ಜನಗಣತಿಯ ಪ್ರಶ್ನೆಗಳಲ್ಲಿ ಅಧ್ಯಕ್ಷ ಟ್ರಂಪ್ ಅವರ ಅಭಿಪ್ರಾಯಗಳು ಮತ್ತು ಅವರ ವಯಸ್ಸು, ಹೆಸರು ಮತ್ತು ಸಂಪರ್ಕ ಮಾಹಿತಿಗಳ ಬಗ್ಗೆ ಬಳಕೆದಾರರನ್ನು ಕೇಳುವುದು ಸೇರಿಕೊಂಡಿದ್ದು, ನ್ಯಾನ್ಸಿ ಪೆಲೋಸಿ ಮತ್ತು ಎಡಪಂಥೀಯರು ಈ ಕಾರ್ಯಸೂಚಿಗೆ ವಿರೋಧ ವ್ಯಕ್ತಪಡಿಸಿದ್ದು, ಇದರಿಂದಾಗುವ ಪ್ರಯೋಜನಗಳಾದರೂ ಏನು? ಎಂದು ಪ್ರಶ್ನಿಸಿದ್ದಾರೆ.

ರಾಜಕಾರಣಿಗಳು ನಡೆಸುವ ಜಾಹೀರಾತುಗಳನ್ನು ವಾಸ್ತವವಾಗಿ ಪರಿಶೀಲಿಸದಿರುವ ಕಾರಣಕ್ಕಾಗಿ ಈ ರೀತಿಯ ಕಾರ್ಯಗಳು ನಡೆಯುತ್ತಿವೆ ಎಂದು ಸಾಮಾಜಿಕ ಮಾಧ್ಯಮ ಫೇಸ್​​ಬುಕ್​​ನ್ನು ಡೆಮಾಕ್ರಟಿಕ್ ಪಕ್ಷ ತೀವ್ರವಾಗಿ ಟೀಕಿಸಿದೆ.

ಇದನ್ನು ಓದಿ:ವಿಶೇಷ ಅಂಕಣ: ಅಧಿಕಾರ ದಾಹದಿಂದ ತಾಲಿಬಾನ್ ಮುಂದೆ ಶರಣಾದ ಟ್ರಂಪ್!

ಟ್ರಂಪ್ ಅಭಿಯಾನದ ಜಾಹೀರಾತುಗಳನ್ನು ಪ್ರಸಾರ ಮಾಡಲು ಅವಕಾಶ ನೀಡಿದ್ದಕ್ಕಾಗಿ ಸ್ಪೀಕರ್ ನ್ಯಾನ್ಸಿ ಪೆಲೋಸಿ ಸಹ ಫೇಸ್‌ಬುಕ್‌ ವಿರುದ್ದ ವಾಗ್ದಾಳಿ ನಡೆಸಿದ್ದು, ಈ ಜಾಹೀರಾತುಗಳೆಲ್ಲವೂ ಸಂಪೂರ್ಣ ಸುಳ್ಳು ಎಂದು ಜರೆದಿದ್ದಾರೆ.

ನಕಲಿ ಮಾಹಿತಿಯೊಂದಿಗೆ ರಾಜಕೀಯ ಜಾಹೀರಾತುಗಳನ್ನು ಫೇಸ್‌ಬುಕ್ ನಲ್ಲಿ ಅಪ್‌ಲೋಡ್​​ ಮಾಡಲಾಗಿದೆ. ಆದರೆ, 2020 ರ ಯುಎಸ್ ಜನಗಣತಿಯ ಬಗ್ಗೆ ತಪ್ಪು ಮಾಹಿತಿ ನೀಡಿರುವ ಬಗ್ಗೆ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ಫೇಸ್‌ಬುಕ್​ ಸಂಸ್ಥೆ ಹೇಳಿಕೆ ನೀಡಿದೆ.

ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್‌ನಲ್ಲಿನ ಪೋಸ್ಟ್‌ಗಳು ಮತ್ತು ಜಾಹೀರಾತುಗಳಲ್ಲಿ ಜನಗಣತಿ ಹಸ್ತಕ್ಷೇಪ ಉಂಟಾಗಿದ್ದು, ಇದರ ಬಗ್ಗೆ ನಾವು ಹೆಚ್ಚು ಜಾಗರೂಕರಾಗಿರಬೇಕು ಮತ್ತು ದೇಶದ ಪ್ರತಿಯೊಬ್ಬ ವ್ಯಕ್ತಿಯ ನಿಖರ ಸಂಖ್ಯೆಯನ್ನು ಉತ್ತೇಜಿಸಲು ಸಹಾಯ ಮಾಡಬೇಕಾಗಿದೆ ಎಂದು ಯುಎಸ್ ಸಾರ್ವಜನಿಕ ನೀತಿಯ ಉಪಾಧ್ಯಕ್ಷ ಕೆವಿನ್ ಮಾರ್ಟಿನ್ ಮತ್ತು ನಿರ್ದೇಶಕ ಸಮೀದ್ ಚಕ್ರವರ್ತಿ ಹೇಳಿದ್ದಾರೆ.

ಕಳೆದ ಡಿಸೆಂಬರ್‌ನಲ್ಲಿ ಸಾಮಾಜಿಕ ಜಾಲತಾಣ ಹೊಸ ಜಾಹೀರಾತು ನೀತಿಯೊಂದನ್ನು ಪರಿಚಯಿಸಿತು, ಜನಗಣತಿಯಲ್ಲಿ ಭಾಗವಹಿಸುವಿಕೆಯನ್ನು ನಿಷ್ಪ್ರಯೋಜಕ ಅಥವಾ ಅರ್ಥಹೀನ ಎಂದು ಬಿಂಬಿಸುವ ಅಥವಾ ಜನಗಣತಿಯಲ್ಲಿ ಭಾಗವಹಿಸದಂತೆ ಜನರಿಗೆ ಪ್ರೇರೆಪಣೆ ನೀಡುವ ಜಾಹೀರಾತುಗಳನ್ನು ನಿಷೇಧಿಸಿತ್ತು ಎಂದು ಫೇಸ್​ಬುಕ್​​ ಮುಖ್ಯಸ್ಥ ಇದೇ ವೇಳೆ ತಿಳಿಸಿದ್ದಾರೆ.

ಪೌರತ್ವಕ್ಕೆ ಸಂಬಂಧಿಸಿದಂತೆ ಪ್ರಶ್ನಾವಳಿಗಳನ್ನು ಜನಗಣತಿ ಪಟ್ಟಿಯಲ್ಲಿ ಸೇರಿಸಿದ್ದಕ್ಕಾಗಿ ಯು.ಎಸ್ ಸುಪ್ರೀಂ ಕೋರ್ಟ್​ ಕಳೆದ ಬೇಸಿಗೆಯಲ್ಲಿ ಟ್ರಂಪ್​ ಆಡಳಿತದ ಬಗೆಗಿನ ಪ್ರಶ್ನಾವಳಿಗೆ ನಿರ್ಬಂಧ ವಿಧಿಸಿತ್ತು. ಇದೀಗ ಫೇಸ್​ಬುಕ್​​ ಸಹ ಜನಗಣತಿಯ ಹೆಸರಿನಲ್ಲಿ ಟ್ರಂಪ್​ ತಮ್ಮ ಪ್ರಚಾರದ ಜಾಹೀರಾತುಗಳನ್ನು ಅಳವಡಿಸಿದ್ದನ್ನು ತೆಗೆದು ಹಾಕಿದೆ.

ABOUT THE AUTHOR

...view details