ವಾಷಿಂಗ್ಟನ್: ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಉಪಾಧ್ಯಕ್ಷ ಮೈಕ್ ಪೆನ್ಸ್ ಅವರ ಚುನಾವಣಾ ಪ್ರಚಾರ ಜಾಹೀರಾತುಗಳನ್ನು ಫೇಸ್‌ಬುಕ್ ತೆಗೆದುಹಾಕಿದೆ.
ನಾಜಿಗಳು ಬಳಸಿದ ಚಿಹ್ನೆ ಹೊಂದಿದ ಟ್ರಂಪ್ ಜಾಹೀರಾತು ತೆಗೆದಹಾಕಿದ ಫೇಸ್‌ಬುಕ್ - ಫೇಸ್‌ಬುಕ್
ಈ ಜಾಹೀರಾತಿನಲ್ಲಿ ತಲೆಕೆಳಗಾದ ಕೆಂಪು ತ್ರಿಕೋನವಿದ್ದು, ಈ ಚಿಹ್ನೆಯನ್ನು ನಾಜಿಗಳು ಬಳಸುತ್ತಿದ್ದರು ಎಂದು ಫೇಸ್‌ಬುಕ್ ಹೇಳಿದೆ.
![ನಾಜಿಗಳು ಬಳಸಿದ ಚಿಹ್ನೆ ಹೊಂದಿದ ಟ್ರಂಪ್ ಜಾಹೀರಾತು ತೆಗೆದಹಾಕಿದ ಫೇಸ್‌ಬುಕ್ trump](https://etvbharatimages.akamaized.net/etvbharat/prod-images/768-512-7677702-537-7677702-1592535438294.jpg)
trump
ಈ ಜಾಹೀರಾತುಗಳಲ್ಲಿ ತಲೆಕೆಳಗಾದ ಕೆಂಪು ತ್ರಿಕೋನವಿದ್ದು, ಈ ಚಿಹ್ನೆಯನ್ನು ನಾಜಿಗಳು, ಕಮ್ಯೂನಿಸ್ಟರು ಮತ್ತು ಇತರರನ್ನು ಕಾನ್ಸಂಟ್ರೇಶನ್ ಕ್ಯಾಂಪ್‌ಗಳಲ್ಲಿ ನೇಮಿಸಲು ಬಳಸುತ್ತಿದ್ದರು ಎಂದು ಹೇಳಲಾಗಿದೆ.
ಸಂಘಟಿತ ದ್ವೇಷದ ವಿರುದ್ಧದ ತಮ್ಮ ನೀತಿಯನ್ನು ಈ ಜಾಹೀರಾತುಗಳು ಉಲ್ಲಂಘಿಸಿವೆ ಎಂದು ಕಂಪನಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.