ನ್ಯೂಯಾರ್ಕ್:ಅಂದಾಜು 106 ದೇಶಗಳ500 ಮಿಲಿಯನ್‌ಗಿಂತಲೂ ಹೆಚ್ಚು ಫೇಸ್‌ಬುಕ್ ಬಳಕೆದಾರರ ವಿವರಗಳು ಆನ್‌ಲೈನ್ ವೆಬ್‌ಸೈಟ್‌ನಲ್ಲಿ ಸೋರಿಕೆಯಾಗಿದ್ದು, ಹ್ಯಾಕರ್ಸ್ ಕೈಗೆ ಸಿಗುವ ಆತಂಕ ಎದುರಾಗಿದೆ. ಈ ಮಾಹಿತಿ ಹಳೆಯದು ಎನ್ನಲಾಗಿದೆ. ಆದರೆ, ಫೇಸ್‌ಬುಕ್ ಸೇರಿದಂತೆ ಇತರೆ ಸಾಮಾಜಿಕ ಜಾಲತಾಣಗಳು ಬಳಕೆದಾರರಿಂದ ಪಡೆದುಕೊಳ್ಳುತ್ತಿರುವ ಮಾಹಿತಿ ಎಷ್ಟು ಸುರಕ್ಷಿತ ಎಂಬ ಪ್ರಶ್ನೆ ತಲೆದೋರಿದೆ.
‘ಬ್ಯುಸಿನೆಸ್ ಇನ್‌ಸೈಡರ್’ ವರದಿ ಪ್ರಕಾರ, ಸೋರಿಕೆಯಾಗಿರುವ ಕೆಲವು ದತ್ತಾಂಶಗಳು ಈಗಲೂ ಪ್ರಸ್ತುತವೆಂದು ಹೇಳಲಾಗಿದೆ. ಆದರೆ ಇದನ್ನು ದೃಢೀಕರಿಸುವುದು ಸಾಧ್ಯವಾಗಿಲ್ಲ. ಸೋರಿಕೆಯಾದ ಹಲವು ದೂರವಾಣಿ ಸಂಖ್ಯೆಗಳು, ಲೊಕೇಶನ್, ಫೇಸ್‌ಬುಕ್ ಖಾತೆ ಹೊಂದಿರುವವರು ಈಗಲೂ ಬಳಸುತ್ತಿರುವುದಾಗಿದೆ. ಆದರೆ, ಈ ವರದಿ ಹಳೆಯದ್ದು ಎಂದು ಫೇಸ್‌ಬುಕ್ ಪ್ರತಿಕ್ರಿಯಿಸಿದೆ.