ಕರ್ನಾಟಕ

karnataka

ETV Bharat / international

ಹವಾಮಾನ ಶೃಂಗಸಭೆಗೆ ಪಾಕ್​ ಆಹ್ವಾನಿಸಿದ ಅಮೆರಿಕ.. ಅಚ್ಚರಿ ಹುಟ್ಟಿಸಿದ ಬೈಡನ್ ನಡೆ - ಮಲಿಕ್ ಅಮೀನ್ ಅಸ್ಲಾಮ್

ಇಸ್ಲಾಮಾಬಾದ್‌ನ ಈ ಶೃಂಗಸಭೆಗೆ ಆಹ್ವಾನಿಸಿರುವುದರ ಹಿಂದೆ ಅಮೆರಿಕವು ಪಾಕಿಸ್ತಾನದ ಮುಂದೆ ಕ್ಯಾರೆಟ್​ ಒಂದನ್ನು ಎಸೆದಿದೆ. ಇದು ಪಾಕಿಸ್ತಾನವನ್ನು ಜೋಕರ್​ ಅಂತೆ ಪ್ರತಿಬಿಂಬಿಸಲು ಯುಎಸ್​ಎ ಬಯಸಿದೆ ಎಂದು ಆಹ್ವಾನಕ್ಕೆ ವ್ಯಂಗ್ಯವಾಡಿದ್ದಾರೆ..

experts-opined-afghanistan-issue-behind-us-invitation-to-pak-for-climate-summit
ಹವಾಮಾನ ಶೃಂಗಸಭೆಗೆ ಪಾಕ್​ ಆಹ್ವಾನಿಸಿದ ಅಮೆರಿಕ

By

Published : Apr 20, 2021, 9:19 PM IST

Updated : Apr 20, 2021, 10:42 PM IST

ನವದೆಹಲಿ :ಅಫ್ಘಾನಿಸ್ತಾನ ನೆಲದಲ್ಲಿ ಅಮೆರಿಕ ಮಿಲಿಟರಿ ಕಾರ್ಯಾಚರಣೆ ಸಂಬಂಧ ಅಂತಾರಾಷ್ಟ್ರೀಯ ಮಟ್ಟದಲ್ಲಿ ಚರ್ಚೆ ಆರಂಭವಾಗಿದೆ.

ಈ ನಡುವೆ ಏಪ್ರಿಲ್ 22 ಮತ್ತು 23ರಂದು ನಡೆಯಲಿರುವ ಹವಾಮಾನ ಕುರಿತ ನಾಯಕರ ಶೃಂಗಸಭೆಗೆ ಪಾಕ್​ ಪ್ರಧಾನಿ ಅವರ ವಿಶೇಷ ಸಹಾಯಕ ಮಲಿಕ್ ಅಮೀನ್ ಅಸ್ಲಾಮ್ ಅವರನ್ನು ಜೋ ಬೈಡನ್ ಆಹ್ವಾನಿಸಿದ್ದು, ಇದು ಎರಡು ದೇಶಗಳ ನಡುವಿನ ಸಮಸ್ಯೆ ಬಗೆಹರಿಸಲು ಅಮೆರಿಕ ಮುಂದಾಗಿರುವ ಮುನ್ಸೂಚನೆ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.

ಅಫ್ಘಾನಿಸ್ತಾನದಿಂದ ತನ್ನ ಸೇನೆಯನ್ನ ಹಿಂತೆದುಕೊಳ್ಳುವ ನಿರ್ಧಾರದಲ್ಲಿ ಅಮೆರಿಕ ಈ ನಿರ್ಧಾರ ಕೈಗೊಂಡಿರಬಹುದು ಎಂಬುದು ಹಲವರ ಅಭಿಪ್ರಾಯವಾಗಿದೆ. ಮಾಜಿ ರಾಯಭಾರಿ ಅಶೋಕ್‌ ಸಜ್ಜನಾರ್ ಅವರು ಅಫ್ಘಾನಿಸ್ತಾನದಿಂದ ಸೈನ್ಯವನ್ನು ಹಿಂತೆಗೆದುಕೊಳ್ಳುವಲ್ಲಿ ಪಾಕಿಸ್ತಾನದ ಅಗತ್ಯವಿರುತ್ತದೆ ಎಂದು ಯುಎಸ್ ಅರಿತುಕೊಂಡಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಇಸ್ಲಾಮಾಬಾದ್‌ನ ಈ ಶೃಂಗಸಭೆಗೆ ಆಹ್ವಾನಿಸಿರುವುದರ ಹಿಂದೆ ಅಮೆರಿಕವು ಪಾಕಿಸ್ತಾನದ ಮುಂದೆ ಕ್ಯಾರೆಟ್​ ಒಂದನ್ನು ಎಸೆದಿದೆ. ಇದು ಪಾಕಿಸ್ತಾನವನ್ನು ಜೋಕರ್​ ಅಂತೆ ಪ್ರತಿಬಿಂಬಿಸಲು ಯುಎಸ್​ಎ ಬಯಸಿದೆ ಎಂದು ಆಹ್ವಾನಕ್ಕೆ ವ್ಯಂಗ್ಯವಾಡಿದ್ದಾರೆ. ಪ್ರಸ್ತುತ, ಸೆಪ್ಟೆಂಬರ್ 11ರೊಳಗೆ ಅಫ್ಘಾನಿಸ್ತಾನದಿಂದ ಸೈನ್ಯವನ್ನು ಹಿಂತೆಗೆದುಕೊಳ್ಳುವ ಬೈಡನ್ ಅವರ ಆಸಕ್ತಿಯಿಂದಾಗಿ ಅಮೆರಿಕಾಗೆ ಪಾಕಿಸ್ತಾನದ ಅವಶ್ಯಕತೆ ಇದೆ ಎಂದು ಅಶೋಕ್ ಸಜ್ಜನಾರ್ ಈಟಿವಿ ಭಾರತ್​​​ಗೆ ತಿಳಿಸಿದ್ದಾರೆ.

ಮೊದಲ ಶೃಂಗಸಭೆಯಿಂದ ಕೈಬಿಟ್ಟಿದ್ದ ಯುಎಸ್ : ​ಬೈಡನ್ ಸರ್ಕಾರವು ತಮ್ಮ ಮೊದಲ ಹವಾಮಾನ ಬದಲಾವಣೆಯ ಕುರಿತಾದ ಶೃಂಗಸಭೆಗೆ ಪಾಕಿಸ್ತಾನವನ್ನು ಆಹ್ವಾನಿಸಿರಲಿಲ್ಲ. ಭಾರತ, ಭೂತಾನ್, ಬಾಂಗ್ಲಾದೇಶ ಸೇರಿ ವಿವಿಧ ದೇಶದ ನಾಯಕರ ಆಹ್ವಾನಿಸಿತ್ತು. ಆದರೆ, ಈಗ ಬೈಡನ್ ಸರ್ಕಾರ ತೆಗೆದುಕೊಂಡಿರುವ ನಿರ್ಧಾರದಿಂದ ವಿಶ್ವವೇ ಅಚ್ಚರಿಗೊಳಗಾಗಿದೆ.

ಯುನೈಟೆಡ್ ಸ್ಟೇಟ್ಸ್​​ನ ಅಧ್ಯಕ್ಷರ ಪರವಾಗಿ, ಹವಾಮಾನ ಕುರಿತ ವರ್ಚ್ಯುವಲ್​ ಶೃಂಗಸಭೆಯಲ್ಲಿ ನಿಮ್ಮನ್ನು ವಿಶೇಷ ಭಾಷಣಕಾರರಾಗಿ ಆಹ್ವಾನಿಸುವುದು ಸಂತಸ ತಂದಿದೆ. ಹವಾಮಾನ ಹೊಂದಾಣಿಕೆ ಮತ್ತು ಸ್ಥಿತಿ ಸ್ಥಾಪಕತ್ವ ಕೇಂದ್ರೀಕರಿಸಿದ ಚರ್ಚೆಯಲ್ಲಿ ಏಪ್ರಿಲ್ 22ರಂದು ಇತರ ಮಂತ್ರಿಗಳು ಮತ್ತು ಮುಖಂಡರನ್ನು ಸೇರಿಕೊಳ್ಳಲು ನಾವು ನಿಮ್ಮನ್ನು ಆಹ್ವಾನಿಸಲು ಬಯಸುತ್ತೇವೆ ಎಂದು ಯುಎಸ್ ವಿಶೇಷ ರಾಯಭಾರಿ ಜಾನ್ ಕೆರ್ರಿ ಹವಾಮಾನ ಬದಲಾವಣೆಯ ಕುರಿತ ಪಾಕ್​ ಪ್ರಧಾನಿಯ ವಿಶೇಷ ಸಹಾಯಕರ ಉದ್ದೇಶಿಸಿ ಪತ್ರ ಬರೆದಿದ್ದರು.

ಅಫ್ಘನ್​​ನಿಂದ ಸೇನೆ ಹಿಂಪಡೆಯಲಿದ್ಯಾ ಅಮೆರಿಕ?:ಒಆರ್‌ಎಫ್‌ನ ಸಂಶೋಧನಾ ನಿರ್ದೇಶಕ ಪ್ರೊಫೆಸರ್ ಹರ್ಷ್ ವಿ ಪಂತ್ ಹೇಳುವಂತೆ, ಪಾಕಿಸ್ತಾನದ ನಾಗರಿಕ ಪ್ರಾಧಿಕಾರವು ಮತ್ತಷ್ಟು ಅಧಃಪತನಗೊಳ್ಳದಂತೆ ನೋಡಿಕೊಳ್ಳಲು ಯುನೈಟೆಡ್ ಸ್ಟೇಟ್ಸ್ ಪ್ರಯತ್ನಿಸುತ್ತಿದೆ. ಯಾಕೆಂದರೆ, ಈ ಸಮಯದಲ್ಲಿ ಪಾಕಿಸ್ತಾನವು ಆರ್ಥಿಕವಾಗಿ, ಸಾಮಾಜಿಕವಾಗಿ ಅಥವಾ ರಾಜಕೀಯವಾಗಿ ಸಾಕಷ್ಟು ಸವಾಲುಗಳನ್ನು ಎದುರಿಸುತ್ತಿದೆ. ಹೀಗಾಗಿ, ಇಂತಹ ಸವಾಲುಗಳಿಗೆ ಅಂತ್ಯ ಕಾಣಿಸುವ ಸಲುವಾಗಿಯೇ ಪಾಕ್​ನ ಅಮೆರಿಕ ಆಹ್ವಾನಿಸಿದೆ ಎಂದಿದ್ದಾರೆ.

ಅಫ್ಘಾನಿಸ್ತಾನದ ಪ್ರಸ್ತುತ ಸ್ಥಿತಿಗತಿಗಳ ಮನದಲ್ಲಿಟ್ಟುಕೊಂಡೆ ಇಂತಹ ನಿರ್ಧಾರ ಮಾಡಿರುತ್ತಾರೆ. ಅಫ್ಗನ್​​​ನಿಂದ ತಮ್ಮ ಸೇನೆಯನ್ನ ಹಿಂಪಡೆಯಲು ಸಿದ್ಧತೆ ನಡೆಸುತ್ತಿರುವ ಕಾರಣ ಪರೋಕ್ಷವಾಗಿ ಪಾಕಿಸ್ತಾನದ ಸಹಾಯ ಪಡೆಯುವ ನಿಟ್ಟಿನಲ್ಲಿ ಪಾಕಿಸ್ತಾನದೊಂದಿಗೆ ನಿರಂತರ ಸಂಪರ್ಕ ಸಾಧಿಸಲು ಯುಎಸ್ ಮುಂದಾಗಿದೆ ಎಂದು ಪಂತ್ ಅಭಿಪ್ರಾಯ ಪಟ್ಟಿದ್ದಾರೆ. ಇದೀಗ ವಾಷಿಂಗ್ಟನ್​ನಲ್ಲಿ ನಡೆಯಲಿರುವ ಹವಾಮಾನ ಶೃಂಗಸಭೆಯ ಮೇಲೆ ಹಾಗೂ ಅಮೆರಿಕ ಪಾಕಿಸ್ತಾನದ ಮಾತುಕತೆಯ ಮೇಲೆ ಅಫ್ಘಾನಿಸ್ತಾನದ ದೃಷ್ಟಿ ನೆಟ್ಟಿದೆ.

ಇದಕ್ಕೂ ಮೊದಲು ಅಮೆರಿಕಾದಲ್ಲಿ ನಡೆದಿದ್ದ ಬೈಡನ್ ಸರ್ಕಾರದ ಮೊದಲ ಹವಾಮಾನ ಕುರಿತ ಶೃಂಗಸಭೆಗ ಪಾಕ್‌ನ ಆಹ್ವಾನಿಸದೆ ಇದ್ದಾಗ ಪಾಕ್​ ಪ್ರಧಾನಿ ಇಮ್ರಾನ್ ಖಾನ್ ಯುಎಸ್ ನಿರ್ಧಾರದ ವಿರುದ್ಧ ಕಿಡಿ ಕಾರಿದ್ದರು. ಈ ಕುರಿತು ಟ್ವೀಟ್ ಮಾಡಿ, ನನಗೆ ಹವಾಮಾನ ಶೃಂಗಕ್ಕೆ ಪಾಕ್​​ನ ಆಹ್ವಾನಿಸದಿರುವ ಬಗ್ಗೆ ನಾನು ಗೊಂದಲಕ್ಕೊಳಗಾಗಿದ್ದೇನೆ. ನಮ್ಮ ಸರ್ಕಾರ ಹವಾಮಾನ ಬದಲಾವಣೆಯ ವಿರುದ್ಧ ಹೋರಾಡುತ್ತಿದೆ. ಭವಿಷ್ಯದ ಪೀಳಿಗೆಗೆ ಹಸಿರು ಉಳಿಸುವ ಬದ್ಧತೆಗೆ ನೀತಿಗಳ ಅನುಷ್ಠಾನ ಮಾಡಲಾಗುತ್ತಿದೆ ಎಂದಿದ್ದರು.

Last Updated : Apr 20, 2021, 10:42 PM IST

ABOUT THE AUTHOR

...view details