ನ್ಯೂಯಾರ್ಕ್:ವಾಗ್ದಂಡನೆ ಅಡಕತ್ತರಿ ಒಂದೆಡೆ, ಇನ್ನೊಂದೆಡೆ ಅಮೆರಿಕ-ಇರಾನ್ ಸಂಘರ್ಷದ ಮಧ್ಯೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮೇಲೆ ಈಗ ಮತ್ತೊಂದು ಆರೋಪ ಕೇಳಿ ಬಂದಿದೆ.
ಫಾಕ್ಸ್ ನ್ಯೂಸ್ನ ವರದಿಗಾರ್ತಿ ಹಾಗೂ ನಿರೂಪಕಿಯೂ ಅಗಿದ್ದ ಕರ್ಟನಿ ಫ್ರೀಲ್ ತಾವು ಬರೆದ 'ಟುನೈಟ್ ಎಟ್ 10: ಕ್ಕಿಕ್ಕಿಂಗ್ ಬೂಜ್ ಆ್ಯಂಡ್ ಬ್ರೇಕಿಂಗ್ ನ್ಯೂಸ್' ಪುಸ್ತಕದಲ್ಲಿ ಕುತೂಹಲಕಾರಿ ವಿಷಯವೊಂದನ್ನು ಬಹಿರಂಗಪಡಿಸಿದ್ದಾರೆ.
ಫಾಕ್ಸ್ ನ್ಯೂಸ್ ವರದಿಗಾರ್ತಿಯಾಗಿದ್ದ ಕರ್ಟನಿ ಫ್ರೀಲ್, ಕಲವೊಮ್ಮೆ ನಿರೂಪಕಿಯಾಗಿಯೂ ಕೆಲಸ ಮಾಡಿದ್ದರು. ಟ್ರಂಪ್ ಅಮೆರಿಕದ ಅಧ್ಯಕ್ಷ ಪಟ್ಟಕ್ಕೇರುವುದಕ್ಕಿಂತಲೂ ಮುಂಚೆ ಈ ಘಟನೆ ನಡೆದಿದ್ದು, ಒಂದು ದಿನ ಕರ್ಟನಿ ಫ್ರೀಲ್ ತಮ್ಮ ಆಫೀಸಿನಲ್ಲಿದ್ದಾಗ ಟ್ರಂಪ್ ಕರೆ ಮಾಡಿದ್ದರಂತೆ. ನೀನು ತುಂಬಾ ಹಾಟ್ ಆಗಿದ್ದೀಯಾ. ನನ್ನ ಕಚೇರಿಗೆ ಬಾ. ಕಿಸ್ ಮಾಡೋಣ ಎಂದು ಆಕೆಯನ್ನು ಕರೆದಿದ್ದರಂತೆ. ಆದರೆ ಇದಕ್ಕೆ ಒಪ್ಪದ ಕರ್ಟನಿ ಫ್ರೀಲ್, ನಮಗಿಬ್ಬರಿಗೂ ಈಗಾಗಲೇ ಮದುವೆಯಾಗಿದೆ ಎಂದು ಕರೆ ನಿಷ್ಕ್ರಿಯಗೊಳಿಸಿದ್ದರಂತೆ. ಹೀಗೆಂದು ಕರ್ಟನಿ ಫ್ರೀಲ್ ತಮ್ಮ ಪುಸ್ತಕದಲ್ಲಿ ಬರೆದಿದ್ದಾರೆ.
ಕರ್ಟನಿ ಫ್ರೀಲ್ ಅವರ 'ಟುನೈಟ್ ಎಟ್ 10: ಕಿಕ್ಕಿಂಗ್ ಬೂಜ್ ಆ್ಯಂಡ್ ಬ್ರೇಕಿಂಗ್ ನ್ಯೂಸ್' ಪುಸ್ತಕವು ಇನ್ನಷ್ಟೇ ಬಿಡುಗಡೆಯಾಗಬೇಕಿದೆ.
ಇನ್ನು ಈ ಬಗ್ಗೆ ಟ್ವಿಟ್ಟರ್ನಲ್ಲಿ ಪ್ರತಿಕ್ರಿಯೆ ನೀಡಿರುವ ಕರ್ಟನಿ ಫ್ರೀಲ್, ಇದು ನನ್ನ ಪುಸ್ತಕದ ಒಂದು ಸಣ್ಣ ಕತೆ. ಟ್ರಂಪ್ ನನಗೆ ಕರೆ ಮಾಡಿದ್ದಾಗ ನನ್ನ ಸಹೋದ್ಯೋಗಿ ರಿಕ್ ಕೂಡಾ ನನ್ನೊಂದಿಗಿದ್ದರು ಎಂದು ಹೇಳಿದ್ದಾರೆ.