ನ್ಯೂಯಾರ್ಕ್:ವ್ಯಕ್ತಿಗಳಲ್ಲಿ ಸೂಕ್ಷ್ಮ ಜೀವಿಗಳ ಹರಡುವಿಕೆ ಕಡಿಮೆ ಮಾಡುವ ದೃಷ್ಟಿಯಿಂದ ದೈಹಿಕ ಅಂತರ ಕಾಪಾಡಿಕೊಳ್ಳುವ ಮಹತ್ವದ ಬಗ್ಗೆ ಸಂಶೋಧಕರು ಹೊಸ ಪುರಾವೆಗಳನ್ನು ಬಹಿರಂಗಪಡಿಸಿದ್ದಾರೆ.
ಮನುಷ್ಯನ ದೇಹದ ಒಳಗೆ ಮತ್ತು ಮೇಲೂ ವಾಸಿಸುವ ಸೂಕ್ಷ್ಮ ಜೀವಿಗಳು ಆರೋಗ್ಯದ ನಿರ್ವಹಣೆ ಮತ್ತು ರೋಗದ ಬೆಳವಣಿಗೆ ಎರಡರಲ್ಲೂ ನಿರ್ಣಾಯಕ ಪಾತ್ರ ವಹಿಸುತ್ತವೆ.
ಅನಿಮಲ್ ಬಿಹೇವಿಯರ್ ಜರ್ನಲ್ನಲ್ಲಿ ಪ್ರಕಟವಾದ ಈ ಅಧ್ಯಯನವು, ಪ್ರಾಣಿಗಳ ಕರುಳಿನೊಳಗೆ ಕಂಡು ಬರುವ ಸೂಕ್ಷ್ಮಾಣು ಜೀವಿಗಳ ವಿಷಯಕ್ಕೆ ಬಂದಾಗ ಸಾಮಾಜಿಕ ನೆಟ್ವರ್ಕ್ನಲ್ಲಿ ಜೆನೆಟಿಕ್ಸ್, ಡಯಟ್, ಸೋಷಿಯಲ್ ಗ್ರೂಪ್ ಮತ್ತು ಅಂತರ ಅರ್ಥ ಮಾಡಿಕೊಳ್ಳಲು ಕಾಡಿನಲ್ಲಿರುವ ಕೋತಿಗಳ ಮೇಲೆ ಅಧ್ಯಯನ ನಡೆಸಲಾಗಿದೆ.
ಕೋತಿಗಳ ನಡುವೆ ಸಾಮಾಜಿಕ ಸೂಕ್ಷ್ಮ ಜೀವಿಯ ಹರಡುವಿಕೆಯಿಂದ ರೋಗಗಳು ಹೇಗೆ ಹರಡುತ್ತವೆ ಎಂಬುದರ ಬಗ್ಗೆ ನಮಗೆ ತಿಳಿಸಲು ಸಹಾಯ ಮಾಡುತ್ತದೆ ಎಂದು ಅಮೆರಿಕದಲ್ಲಿನ ಸ್ಯಾನ್ ಆಂಟೋನಿಯೊದ ಟೆಕ್ಸಾಸ್ ವಿಶ್ವವಿದ್ಯಾಲಯದ ಅಧ್ಯಯನ ಸಂಶೋಧಕ ಇವಾ ವಿಕ್ಬರ್ಗ್ ಹೇಳಿದ್ದಾರೆ.