ವಾಷಿಂಗ್ಟನ್ ಡಿಸಿ:ಕೊರೊನಾ ವೈರಸ್ ಬಾಧಿತರಿಗೆ ಪರಿಹಾರ ನೀಡುವ ಬಹು ಬಿಲಿಯನ್ ಡಾಲರ್ ಮೊತ್ತದ ತುರ್ತು ಕೊರೊನಾ ವೈರಸ್ ಪರಿಹಾರ ಮಸೂದೆ (Coronavirus relief bill) ಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಹಿ ಹಾಕಿದ್ದಾರೆ. ಇದಕ್ಕೂ ಮೊದಲು ಮಹತ್ವದ ಮಸೂದೆಗೆ ಅಮೆರಿಕ ಸಂಸತ್ ಅನುಮೋದನೆ ನೀಡಿತ್ತು.
'ದಿ ಫ್ಯಾಮಿಲೀಸ್ ಫಸ್ಟ್' ಕೊರೊನಾ ವೈರಸ್ ರೆಸ್ಪಾನ್ಸ್ ಆ್ಯಕ್ಟ್ ಹೆಸರಿನ ಕಾನೂನು ಅಮೆರಿಕ ಸಂಸತ್ನಲ್ಲಿ 90-8 ಮತಗಳಿಂದ ಅಂಗೀಕಾರ ಪಡೆದಿದೆ. ಈ ಕಾನೂನಿನನ್ವಯ ಕೊವಿಡ್ನಿಂದ ಬಳಲುತ್ತಿರುವವರು ಅಥವಾ ಕೊವಿಡ್ ಸೋಂಕಿತರನ್ನು ಆರೈಕೆ ಮಾಡುತ್ತಿರುವವರಿಗೆ ಉಚಿತ ಚಿಕಿತ್ಸೆ, ವಿಮೆ, ಸಂಬಳ ಸಹಿತ ರಜೆ ಮುಂತಾದ ಸೌಲಭ್ಯಗಳನ್ನು ಅಮೆರಿಕ ಒದಗಿಸಲಿದೆ.