ಲಾಸ್ ಏಂಜಲೀಸ್:ಅಮೆರಿಕದ ಖ್ಯಾತ ಪಾಪ್ ಗಾಯಕಿ ಲಿಸಾ ಮೇರಿ ಮಗ ಬೆಂಜಮಿನ್ ಕೀಫ್ ಗುಂಡು ಹಾರಿಸಿಕೊಳ್ಳುವ ಮೂಲಕ ಆತ್ಮಹತ್ಯೆಗೆ ಶರಣಾಗಿದ್ದಾನೆಂಬ ಮಾಹಿತಿ ಹೊರಬಿದ್ದಿದೆ.
ಗುಂಡು ಹಾರಿಸಿಕೊಂಡು ಖ್ಯಾತ ಗಾಯಕಿ ಲಿಸಾ ಮೇರಿ ಪುತ್ರ ಆತ್ಮಹತ್ಯೆ! - ಲಿಸಾ ಮೇರಿ ಪುತ್ರ ಆತ್ಮಹತ್ಯೆ
ಹಾಲಿವುಡ್ ಚಿತ್ರರಂಗದ ಖ್ಯಾತ ನಟ ಎಲ್ವಿಸ್ ಪ್ರೀಸ್ಲಿ ಅವರ ಮೊಮ್ಮಗ ಇದೀಗ ಆತ್ಮಹತ್ಯೆಗೆ ಶರಣಾಗಿದ್ದಾರೆ.
Benjamin Keough
ಬೆಂಜಿಮಿನ್ ಕೀಫ್ ಭಾನುವಾರ ಕ್ಯಾಲಿಫೋರ್ನಿಯಾದ ತಮ್ಮ ನಿವಾಸದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಇದೀಗ ವರದಿಯಾಗಿದ್ದು, ಆತನ ವಯಸ್ಸು ಕೇವಲ 27 ಎಂದು ತಿಳಿದು ಬಂದಿದೆ. ಮಗನ ಸಾವಿನ ಸುದ್ದಿ ತಿಳಿದು ಲಿಸಾ ಮೇರಿ ಮನನೊಂದಿದ್ದು, ಇದೀಗ ಸಾವಿನ ಸತ್ಯಾಂಶ ತಿಳಿದು ಕೊಳ್ಳಲು ಪೊಲೀಸರ ಮೊರೆ ಹೋಗಿದ್ದಾಳೆ.
ಒಬ್ಬನೇ ಮಗನಾಗಿದ್ದ ಕಾರಣ ಅತಿ ಹೆಚ್ಚಿನ ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದರು. ಇದೀಗ ಅವರು ಸಂಪೂರ್ಣವಾಗಿ ದುಃಖಿತಳಾಗಿದ್ದಾರೆ ಎಂದು ವರದಿಯಾಗಿದೆ.