ಅಟ್ಲಾಂಟಾ:ಎರಡು ಮಸಾಜ್ ಪಾರ್ಲರ್‌ಗಳು ಮತ್ತು ಉಪನಗರಗಳಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಏಷ್ಯಾ ಮೂಲದ ಮಹಿಳೆಯರು ಸೇರಿದಂತೆ 8 ಜನ ಮೃತಪಟ್ಟಿರುವ ಘಟನೆ ಅಟ್ಲಾಂಟಾದ ಜಾರ್ಜಿಯಾದಲ್ಲಿ ನಡೆದಿದೆ.
ಚೆರೋಕಿ ಕೌಂಟಿ ಏರಿಯಾದಲ್ಲಿ ಗುಂಡಿನ ದಾಳಿ ನಡೆಯುತ್ತಿದೆ ಎಂಬ ಮಾಹಿತಿ ಮೇರೆಗೆ ಪೊಲೀಸರು ಸ್ಥಳಕ್ಕೆ ತೆರಳಿದ್ದರು. ಆದರೆ ಆ ವೇಳೆಗಾಗಲೇ ದುಷ್ಕರ್ಮಿಗಳು ಮೂವರು ಏಷ್ಯಾ ಮೂಲದ ಮಹಿಳೆಯರನ್ನು ಕೊಂದು ಹಾಕಿದ್ದರು.