ಕರ್ನಾಟಕ

karnataka

ETV Bharat / international

ಈಕ್ವೆಡಾರ್​ ಜೈಲಿನಲ್ಲಿ ರಕ್ತಪಾತ: ಗ್ಯಾಂಗ್​ವಾರ್​ಗೆ 52 ಖೈದಿಗಳು ಬಲಿ

ಕಾರಗೃಹದೊಳಗೆ ಸುಟ್ಟುಬಿದ್ದಿರುವ ಶವಗಳ ವಿಡಿಯೋಗಳು ಸಾಮಾಜಿಕ ಜಾಲಾತಾಣದಲ್ಲಿ ವೈರಲ್ ಆಗುತ್ತಿವೆ. ಕಳೆದ ಸೆಪ್ಟೆಂಬರ್​ 30ರಂದು ಇದೇ ಲಿಟರೋಲ್​ ಜೈಲಿನಲ್ಲಿ ಹಿಂಸಾತ್ಮಕ ಘಟನೆ ನಡೆದು 118 ಮಂದಿ ಸಾವನ್ನಪ್ಪಿದ್ದರು. ಆ ಘಟನೆಯಲ್ಲಿ 10 ಮಂದಿನ ತಲೆಯನ್ನು ಕತ್ತರಿಸಿ ವಿಕೃತಿ ಮೆರೆಯಲಗಿತ್ತು.

By

Published : Nov 14, 2021, 3:13 AM IST

Ecuadorian prison clash leaves at least 52 dead
ಈಕ್ವೆಡಾರ್​ ಜೈಲನಲ್ಲಿ ರಕ್ತಪಾತ

ಕ್ವಿಟೊ(ಈಕ್ವೆಡಾರ್):ಈಕ್ವೆಡಾರ್​ನ ಗುವಾಕ್ವಿಲ್‌ನಲ್ಲಿರುವ ದೇಶದ ಆತಿದೊಡ್ಡ ಜೈಲಿನಲ್ಲಿ ಎರಡು ಗ್ಯಾಂಗ್​ಗಳ ನಡುವೆ ಘರ್ಷಣೆ ನಡೆದಿದ್ದು, ಘಟನೆಯಲ್ಲಿ 52 ಮಂದಿ ಸಾವನ್ನಪ್ಪಿದ್ದಾರೆ. ಇದು ದೇಶ ಕಂಡ ಅತ್ಯಂತ ದೊಡ್ಡ ಜೈಲು ರಕ್ತಪಾತ ಎಂದು ಅಧಿಕಾರಿಗಳು ಹೇಳಿದ್ದಾರೆ.

ದುರ್ಘಟನೆಯಲ್ಲಿ 10ಕ್ಕೂ ಹೆಚ್ಚುಮಂದಿ ಗಂಭೀರ ಗಾಯಗೊಂಡಿದ್ದಾರೆ. ಘಟನೆಯ ಸ್ಥಳದಲ್ಲಿ ಗನ್ ಮತ್ತು ಸ್ಫೋಟಕಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಗುವಾಕ್ವಿಲ್‌ ಜೈಲಿನಲ್ಲಿರುವ ಪಕ್ಕದಲ್ಲಿ ವಾಸಿಸುವ ಸ್ಥಳೀಯರ ಪ್ರಕಾರ, ಜೈಲಿನೊಳಗಿಂದ ಒಂದು ಗಂಟೆಗೂ ಹೆಚ್ಚು ಕಾಲ ಗನ್​ ಫೈರಿಂಗ್ ಮತ್ತು ಸ್ಫೋಟದ ಶಬ್ಧ ಕೇಳಿಬಂದಿತ್ತು ಎಂದು ಪೊಲೀಸರಿಗೆ ತಿಳಿಸಿದ್ದಾರೆ.

ಕಾರಗೃಹದೊಳಗೆ ಸುಟ್ಟುಬಿದ್ದಿರುವ ಶವಗಳ ವಿಡಿಯೋಗಳು ಸಾಮಾಜಿಕ ಜಾಲಾತಾಣದಲ್ಲಿ ವೈರಲ್ ಆಗುತ್ತಿವೆ. ಕಳೆದ ಸೆಪ್ಟೆಂಬರ್​ 30ರಂದು ಇದೇ ಲಿಟರೋಲ್​ ಜೈಲಿನಲ್ಲಿ ಹಿಂಸಾತ್ಮಕ ಘಟನೆ ನಡೆದು 118 ಮಂದಿ ಸಾವನ್ನಪ್ಪಿದ್ದರು. ಆ ಘಟನೆಯಲ್ಲಿ 10 ಮಂದಿನ ತಲೆಯನ್ನು ಕತ್ತರಿಸಿ ವಿಕೃತಿ ಮೆರೆಯಲಗಿತ್ತು.

ಈ ಘಟನೆಯ ನಂತರ ಅಧ್ಯಕ್ಷ ಗಿಲ್ಲೆರ್ಮೊ ಲಾಸ್ಸೊ ರಾಷ್ಟ್ರೀಯ ತುರ್ತು ಪರಿಸ್ಥಿತಿಯನ್ನು ಘೋಷಿಸಿದ್ದರು. ಆದರೂ ಶನಿವಾರ ಗುವಾಕ್ವಿಲ್‌ನಲ್ಲಿ ಮತ್ತೊಂದು ಘಟನೆ ನಡೆದಿದೆ.

ಇದನ್ನು ಓದಿ: ಕಾರಾಗೃಹ ಸಂಘರ್ಷ: ನೂರು ದಾಟಿದ ಸಾವಿನ ಸಂಖ್ಯೆ, ಪೈಪ್​ಲೈನ್​ನಲ್ಲೂ ಹೆಣಗಳ ರಾಶಿ

ABOUT THE AUTHOR

...view details