ಕರ್ನಾಟಕ

karnataka

By

Published : Sep 8, 2021, 10:19 AM IST

Updated : Sep 8, 2021, 12:10 PM IST

ETV Bharat / international

ಮೆಕ್ಸಿಕೋದಲ್ಲಿ ಪ್ರಬಲ ಭೂಕಂಪ: ಓರ್ವ ಸಾವು

ಅಮೆರಿಕದ ಜಿಯಾಲಾಜಿಕಲ್ ಸರ್ವೆ ಪ್ರಕಾರ ರಿಕ್ಟರ್ ಮಾಪಕದಲ್ಲಿ 7ರಷ್ಟು ತೀವ್ರತೆ ದಾಖಲಾಗಿದೆ. ಮೆಕ್ಸಿಕೋದ ಭೂಕಂಪನ ಏಜೆನ್ಸಿ ಪ್ರಕಾರ 7.1 ತೀವ್ರತೆ ದಾಖಲಾಗಿದೆ ಎಂದು ತಿಳಿದು ಬಂದಿದೆ.

earthquake-jolts-guerrero-in-mexico-cityearthquake-jolts-guerrero-in-mexico-city
ಮೆಕ್ಸಿಕೋದಲ್ಲಿ ಪ್ರಬಲ ಭೂಕಂಪನ: ರಿಕ್ಟರ್ ಮಾಪಕದಲ್ಲಿ 7ರಷ್ಟು ತೀವ್ರತೆ ದಾಖಲು

ಮೆಕ್ಸಿಕೋ ಸಿಟಿ(ಮೆಕ್ಸಿಕೋ): ಪೆಸಿಫಿಕ್ ಕರಾವಳಿಯ ಬಳಿಯಿರುವ ಮೆಕ್ಸಿಕನ್ ನಗರವಾದ ಅಕಾಪುಲ್ಕೊದಲ್ಲಿ ರಿಕ್ಟರ್​ ಮಾಪಕದಲ್ಲಿ 7ರಷ್ಟು ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ವರದಿಗಳು ಮಾಹಿತಿ ನೀಡಿವೆ.

ಭೂಕಂಪದಿಂದಾಗಿ ಓರ್ವ ವ್ಯಕ್ತಿ ಸಾವನ್ನಪ್ಪಿದ್ದಾನೆ. ವಿದ್ಯುತ್ ವ್ಯತ್ಯಯ ಉಂಟಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಮೆಕ್ಸಿಕೋದ ಸ್ಥಳೀಯ ಸಮಯ ರಾತ್ರಿ 8:47ಕ್ಕೆ ಭೂಕಂಪನ ಸಂಭವಿಸಿದ್ದು, ಭೂಕಂಪದ ಕೇಂದ್ರ ಬಿಂದುವು ಮೆಕ್ಸಿಕೋ ನಗರದಿಂದ ದಕ್ಷಿಣಕ್ಕೆ 240 ಕಿಲೋಮೀಟರ್ ದೂರದಲ್ಲಿದೆ ಎಂದು ತಿಳಿದು ಬಂದಿದೆ.

ಭೂಕಂಪನದ ದೃಶ್ಯ

ಅಮೆರಿಕದ ಜಿಯಾಲಾಜಿಕಲ್ ಸರ್ವೆ ಪ್ರಕಾರ ರಿಕ್ಟರ್ ಮಾಪಕದಲ್ಲಿ 7ರಷ್ಟು ತೀವ್ರತೆ ದಾಖಲಾಗಿದೆ. ಮೆಕ್ಸಿಕೋದ ಭೂಕಂಪನ ಏಜೆನ್ಸಿ ಪ್ರಕಾರ 7.1 ತೀವ್ರತೆ ದಾಖಲಾಗಿದೆ.

ಮೆಕ್ಸಿಕೋದ ಗೆರೆರೊ ರಾಜ್ಯದ ಗವರ್ನರ್ ಹೆಕ್ಟರ್ ಅಸ್ತುಡಿಲೊ ಫ್ಲೋರ್ಸ್ ಅವರು ಭೂಕಂಪದಿಂದ ಯಾವುದೇ ದೊಡ್ಡ ಹಾನಿಯಾದ ಬಗ್ಗೆ ತಕ್ಷಣಕ್ಕೆ ವರದಿಗಳಾಗಿಲ್ಲ. ಅಕಾಪುಲ್ಕೊದಲ್ಲಿ ಕೆಲವು ಕಟ್ಟಡಗಳು ಭಾಗಶಃ ಕುಸಿದಿವೆ ಎಂದು ಮೆಕ್ಸಿಕೋದ ರಾಜ್ಯವಾದ ಗೆರೆರೊ ಗವರ್ನರ್ ಹೆಕ್ಟರ್ ಅಸ್ತುಡಿಲೊ ಫ್ಲೋರ್ಸ್ ಸ್ಪಷ್ಟನೆ ನೀಡಿದ್ದರು.

ಇದನ್ನೂ ಓದಿ:ಹೈಟಿ ಭೂಕಂಪ: ಈವರೆಗೆ 2,248 ಮಂದಿ ಸಾವು, 329 ಜನ ಕಣ್ಮರೆ

Last Updated : Sep 8, 2021, 12:10 PM IST

ABOUT THE AUTHOR

...view details