ಮನೌಸ್ (ಬ್ರೆಜಿಲ್): ಕೊರೊನಾ ಸೋಂಕಿನಿಂದ ಸಾವಿಗೀಡಾದವರ ಅಂತ್ಯಸಂಸ್ಕಾರಕ್ಕಾಗಿ ವಾಯುವ್ಯ ಬ್ರೆಜಿಲ್ನ ಮನೌಸ್ನಲ್ಲಿರುವ ಸ್ಮಶಾನಕ್ಕೆ ಹಲವಾರು ಶವಪೆಟ್ಟಿಗೆಗಳನ್ನು ತರುತ್ತಿರುವ ದೃಶ್ಯ ಕಂಡುಬಂದಿದೆ.
ಮೃತ ಕೊರೊನಾ ಸೋಂಕಿತರ ಸಾಮೂಹಿಕ ಅಂತ್ಯಸಂಸ್ಕಾರ.. ಕರಳು ಚುರ್ ಎನ್ನುವ ದೃಶ್ಯ ಡ್ರೋಣ್ನಲ್ಲಿ ಸೆರೆ
ಕೊರೊನಾ ಸೋಂಕಿನಿಂದ ಮೃತಪಟ್ಟವರನ್ನು ಬ್ರೆಜಿಲ್ನಲ್ಲಿ ಸಾಮೂಹಿಕವಾಗಿ ಅಂತ್ಯಸಂಸ್ಕಾರ ಮಾಡುತ್ತಿರುವ ದೃಶ್ಯ ಡ್ರೋಣ್ ಕ್ಯಾಮೆರಾದಲ್ಲಿ ಸೆರೆಹಿಡಿಯಲಾಗಿದೆ.
ಮೃತ ಕೊರೊನಾ ಸೋಂಕಿತರ ಅಂತ್ಯ ಸಂಸ್ಕಾರ
ಜೆಸಿಬಿ ಯಂತ್ರದ ಮೂಲಕ ದೊಡ್ಡ ದೊಡ್ಡ ಗುಂಡಿಗಳನ್ನು ತೆಗೆದು ಸಾಮೂಹಿಕವಾಗಿ ಶವಪೆಟ್ಟಿಗೆಗಳನ್ನು ಇರಿಸಿ ಅಂತ್ಯಸಂಸ್ಕಾರ ಮಾಡಲಾಗುತ್ತಿದೆ. ಮೃತರ ಸಂಬಂಧಿಕರೂ ಕೂಡ ಅಂತ್ಯಸಂಸ್ಕಾರದ ವೇಳೆ ಸ್ಥಳದಲ್ಲಿ ಹಾಜರಿದ್ದರು.
ಸ್ಥಳೀಯ ಅಧಿಕಾರಿಗಳ ಪ್ರಕಾರ, ಸಾಂಕ್ರಾಮಿಕ ರೋಗದಿಂದ ಸಾವಿಗೀಡಾಗುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದ್ದು, ದಿನಕ್ಕೆ ಸರಾಸರಿ 30 ರಿಂದ 100 ಜನ ಬಲಿಯಾಗುತ್ತಿದ್ದಾರೆ ಎಂದು ತಿಳಿಸಿದ್ದಾರೆ ಬ್ರೆಜಿಲ್ನಲ್ಲಿ ಇಲ್ಲಿಯವರೆಗೆ 43 ಸಾವಿರ ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದ್ದು, 2,700 ಜನ ಬಲಿಯಾಗಿದ್ದಾರೆ.