ಕರ್ನಾಟಕ

karnataka

ಬೈಡನ್​ ಪದಗ್ರಹಣ ಸಮಾರಂಭ ವಿಚಾರದ ಬಗ್ಗೆ ಮಾತನಾಡಲ್ಲ ಎಂದ ಟ್ರಂಪ್

ಅಮೆರಿಕದ ನಿರ್ಗಮಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್, 2021 ರ ಜನವರಿ 20 ರಂದು ತಮ್ಮ ಉತ್ತರಾಧಿಕಾರಿ ಹಾಗೂ ಚುನಾಯಿತ ಅಧ್ಯಕ್ಷ ಜೋ ಬೈಡನ್ ಅವರ ಪದಗ್ರಹಣ ಸಮಾರಂಭದ ವಿಚಾರವಾಗಿ ಮಾತನಾಡಲು ನಿರಾಕರಿಸಿದ್ದಾರೆ.

By

Published : Dec 14, 2020, 3:58 PM IST

Published : Dec 14, 2020, 3:58 PM IST

ಬೈಡನ್​ ಉದ್ಘಾಟನಾ ಸಮಾರಂಭ ವಿಚಾರದ ಬಗ್ಗೆ ಮಾತನಾಡಲ್ಲ ಎಂದ ಟ್ರಂಪ್
ಬೈಡನ್​ ಉದ್ಘಾಟನಾ ಸಮಾರಂಭ ವಿಚಾರದ ಬಗ್ಗೆ ಮಾತನಾಡಲ್ಲ ಎಂದ ಟ್ರಂಪ್

ವಾಷಿಂಗ್ಟನ್: ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಬಹುಮತ ಗಳಿಸಿ ಚುನಾಯಿತ ಅಧ್ಯಕ್ಷರಾಗಿರುವ ಜೋ ಬೈಡನ್​ ಅವರು, ಜನವರಿಯಲ್ಲಿ ತಮ್ಮ ಪ್ರಮಾಣ ವಚನ ಸ್ವೀಕಾರ ಹಾಗೂ ಉದ್ಘಾಟನಾ ಸಮಾರಂಭವನ್ನು ನಡೆಸುತ್ತಾರೆಯೇ ಎಂಬ ಬಗ್ಗೆ ಪ್ರತಿಕ್ರಿಯಿಸಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಿರಾಕರಿಸಿದ್ದಾರೆ.

ಫಾಕ್ಸ್ ನ್ಯೂಸ್​ನಲ್ಲಿ ಭಾನುವಾರ ಪ್ರಸಾರವಾದ "ಫಾಕ್ಸ್ & ಫ್ರೆಂಡ್ಸ್" ಕಾರ್ಯಕ್ರಮದಲ್ಲಿ ಸಹ - ನಿರೂಪಕ ಬ್ರಿಯಾನ್ ಕಿಲ್ಮೇಡ್ ಅವರೊಂದಿಗಿನ ಸಂದರ್ಶನದಲ್ಲಿ ಭಾಗಿಯಾಗಿದ್ದ ಯುಎಸ್ ನಿರ್ಗಮಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್​ಗೆ ಬೈಡನ್​ ಪದಗ್ರಹಣ ಸಮಾರಂಭ ನಡೆಸುತ್ತಾರೆಯೇ ಎಂದು ಕೇಳಲಾಯಿತು. ಈ ವೇಳೆ ಟ್ರಂಪ್​, ನಾನು ಅದರ ಬಗ್ಗೆ ಮಾತನಾಡಲು ಬಯಸುವುದಿಲ್ಲ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಭಯೋತ್ಪಾದಕ ಪಟ್ಟಿಯಿಂದ ಸುಡಾನ್​ ತೆಗೆದುಹಾಕಲು ಯುಎಸ್ ಒಪ್ಪಿಗೆ

ದೇಶವು ನ್ಯಾಯ ಸಮ್ಮತವಲ್ಲದ ಅಧ್ಯಕ್ಷರನ್ನು ಹೊಂದಿರುವ ಬಗ್ಗೆ ನಾನು ಚಿಂತೆ ಮಾಡುತ್ತಿದ್ದೇನೆ. ಇದು ನಿಕಟ ಚುನಾವಣೆಯಂತೆ ಇರಲಿಲ್ಲ. ನಾವು ಜಾರ್ಜಿಯಾವನ್ನು ದೊಡ್ಡ ಮೊತ್ತದಲ್ಲಿ ಗೆದ್ದಿದ್ದೇವೆ. ಪೆನ್ಸಿಲ್ವೇನಿಯಾವನ್ನು ಹೆಚ್ಚಿನ ಮತಗಳಲ್ಲಿ ಹಾಗೂ ವಿಸ್ಕಾನ್ಸಿನ್​​ನಲ್ಲೂ ಗೆದ್ದಿದ್ದೇವೆ ಎಂದು ಅವರು ಹೇಳಿದರು.

ಟ್ರಂಪ್ ಹೂಡಿದ್ದ ಮೊಕದ್ದಮೆ ಯುಎಸ್ ಸುಪ್ರೀಂ ಕೋರ್ಟ್ ನಲ್ಲಿ ತಿರಸ್ಕೃತ:ಅಮೆರಿಕದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಆಯ್ಕೆಗೊಂಡಿರುವ ಬೈಡನ್ ಗೆಲುವನ್ನು ಅಮಾನ್ಯಗೊಳಿಸಲು ಅಮೆರಿಕದ ನಿರ್ಗಮಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೂಡಿದ್ದ ಮೊಕದ್ದಮೆಯನ್ನು ಅಮೆರಿಕದ ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ. ಈ ಮೊದಲು ಇದೇ ಮೊಕದ್ದಮೆಯನ್ನು ಸ್ಥಳೀಯ ಹಾಗೂ ಫೆಡರಲ್ ನ್ಯಾಯಾಲಯ ತಿರಸ್ಕರಿಸಿತ್ತು.

ABOUT THE AUTHOR

...view details